ದಾವಣಗೆರೆ: ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಮಾಜಿಕ ನ್ಯಾಯದ ಆಧಾರದಲ್ಲಿ ನಿರ್ಧಾರವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ದಾವಣಗೆರೆಯಲ್ಲಿಮಾಧ್ಯಮಗಳೊಂದಿಗೆ ಮಾತನಾಡಿ, ಆಡಳಿತಾವಧಿಯವರೆಗೂ ಬಿಎಸ್ ವೈ ಸಿಎಂ ಅಗಿರ್ತಾರೆ, ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಎಲ್ಲಿಯೂ ಚರ್ಚೆ ಇಲ್ಲ. ಕೇಂದ್ರದ ನಾಯಕರನ್ನು ಸಹಜವಾಗಿಯೇ ಭೇಟಿಯಾಗುತ್ತಿರುತ್ತಾರೆ. ಇದಕ್ಕೆ ಬೇರೆ ಅರ್ಥ ತಿಳಿದುಕೊಳ್ಳೋದು ಬೇಡ ಪಕ್ಷದಲ್ಲಿಎಲ್ಲರೂ ಒಗ್ಗಾಟ್ಟಾಗಿಯೇ ಇದ್ದೆವೆ. ಎಲ್ಲಿಯೂ ಗೊಂದಲವಿಲ್ಲ. ಕೇಂದ್ರದ ಆದೇಶದಂತೆ ನಾವು ಕೆಲಸ ಮಾಡುತ್ತಿದ್ದೆವೆ ಎಂದು ಕಟೀಲ್ ಹೇಳಿದರು.
ಸಂಯುಕ್ತವಾಣಿ