ಗೋವಿಂದ ಕಾರಜೋಳ ಕೈ ಹಿಡಿದ ಕೋಟೆ ನಾಡು ಮತದಾರ

ರಾಜ್ಯ

ಚಿತ್ರದುರ್ಗದಲ್ಲಿ 46 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ ಗೋವಿಂದ ಕಾರಜೋಳ

ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಚಿತ್ರದುರ್ಗದಲ್ಲಿ NDA ಅಭ್ಯರ್ಥಿ ಗೋವಿಂದ ಕಾರಜೋಳ, ಗೆಲುವು 46 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಿಸಿದ್ದಾರೆ.

 

 

ಕೋಟೆ ನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿಎನ್. ಚಂದ್ರಪ್ಪ ಹಾಗೂ ಬಾಗಲಕೋಟೆಯಿಂದ ಬಂದಿದ್ದ NDA ಅಭ್ಯರ್ಥಿ ಗೋವಿಂದ ಕಾರಜೋಳ ಸ್ಪರ್ಧೆಯಲ್ಲಿದ್ದರು. ಇವರಿಬ್ಬರ ನಡುವೆ ಸಮ ಬಲದ ಹೋರಾಟ ಏರ್ಪಟ್ಟಿತ್ತು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಧ್ಯೆ ಜಿಲ್ಲೆಯ ಮತದಾರರು, ಬಿಜೆಪಿಯ ಕಾರಜೋಳ ಅವರಿಗೆ ಜೈ ಅಂದಿದ್ದಾರೆ.ಜಿಲ್ಲೆಯಲ್ಲಿ ಶೇ3 ರಷ್ಟು ಹೆಚ್ಚು ಮತದಾನವಾಗಿದ್ದು, ಅದು ಬಿಜೆಪಿ ಪಾಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿ. ಎನ್ ಚಂದ್ರಪ್ಪ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. ತದನಂತರ 2018-19 ರಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಗೆಲವು ಕಂಡಿದ್ದರು. ಈ ಸೋಲಿಗೆ ಧೃತಿಗೆಡದೆ ಕ್ಷೇತ್ರದಲ್ಲಿದ್ದುಕೊಂಡು ಐದು ವರ್ಷಗಳ ಕಾಲ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಂಡು, 2024ರಲ್ಲಿ ಮತ್ತೊಮ್ಮೆ ಕಣಕ್ಕಿಳಿದಿದ್ದು ಸತತ ಎರಡು ಬಾರಿ ಸೋಲು ಕಂಡಂತಾಗಿದೆ

Leave a Reply

Your email address will not be published. Required fields are marked *