ನಗರಸಭೆ ಆಯುಕ್ತರಿಂದ ಶಿಷ್ಟಚಾರ ಉಲ್ಲಂಘನೆ: ಕಾನೂನು ಕ್ರಮಕ್ಕೆ ಆಗ್ರಹಿಸಿದ ಸದಸ್ಯರು

ರಾಜ್ಯ

ಚಿತ್ರದುರ್ಗ : ಪೌರಾಯುಕ್ತರು ಅಸಂಬಂಧಿತ ವ್ಯಕ್ತಿಗಳನ್ನು ಕೂರಿಸಿಕೊಂಡು ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ ನಗರಸಭೆಯ ಸಭೆ ನಡೆಸಿರುವುದು, ಕಾನೂನು ಬಾಹಿರವಾಗಿದ್ದು, ಇವರ ಮೇಲೆ ಕಾನೂನು ಕ್ರಮವನ್ನು ಕೈಗ್ಗೊಳ್ಳುವಂತೆ ನಗರಸಭೆಯ ಹಲವು ಸದಸ್ಯರು ಇಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಜೂ. 24 ರ ಸೋಮವಾರದಂದು ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಪೌರಾಯುಕ್ತರ ಅಧ್ಯಕ್ಷತೆಯಲ್ಲಿ ಸಂಬಂಧವಲ್ಲದ ವ್ಯಕ್ತಿಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಂತೇ ಮೈದಾನದಲ್ಲಿರುವ ಮಾರುಕಟ್ಟೆ ಬಗ್ಗೆ ಕಾನೂನು ಬಾಹಿರವಾಗಿ ಸಭೆಯನ್ನು ನಡೆಸಿದ್ದಾರೆ. ಸರ್ಕಾರಿ ಶಿಷ್ಠಚಾರಗಳನ್ನು ಗಾಳಿಗೆ ತೂರಿ ಸಭೆಯನ್ನು ನಡೆಸಿದ್ದಾರೆ, ಇದಲ್ಲದೆ ನಗರಸಭೆಯ ಸದಸ್ಯರ ಗಮನಕ್ಕೂ ಬಾರದೆ ಹಲವಾರು ಸಭೆಯನ್ನು ನಡೆಸಿದ್ದಾರೆ. ಪೌರಾಯುಕ್ತರು ಮನಸೋ ಇಚ್ಚೇ ಆಡಳಿತವನ್ನು ನಡೆಸುತ್ತಿದ್ದಾರೆ. ಇದರಿಂದ ನಗರಸಭೆಯ ಮಾನ ಹರಾಜಾಗಿದೆ. ಸದಸ್ಯರಿಗೆ ಗೌರವವನ್ನು ನೀಡಿದೆ ನಗರಸಭೆಗೆ ಸಂಬಂಧ ಇಲ್ಲದ ವ್ಯಕ್ತಿಯನ್ನು, ಕೂರಿಸಿ ಕೊಂಡು ಸಭೆಯನ್ನು ನಡೆಸಿರುವುದು ಕಾನೂನು ಬಾಹಿರವಾಗಿದೆ. ಇಂತಹ ಪೌರಾಯುಕ್ತರ ಮೇಲೆ ಕಾನೂನು ಕ್ರಮವನ್ನು ಜರುಗಿಸಿ ತಕ್ಷಣದಿಂದಲೇ ಅವರನ್ನು ಅಮಾನತ್ತು ಮಾಡುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಹರೀಶ್, ಶ್ರೀನಿವಾಸ್, ಬಿ.ಸುರೇಶ್, ಶ್ರೀಮತಿ ಅನುರಾಧ, ಭಾಗ್ಯಮ್ಮ, ರೋಹಿಣೀ ಮುಖಂಡರಾದ ಚಾಲುಕ್ಯ ನವೀನ್, ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *