ಕಂಫರ್ಟ್ ಜೋನ್ ನಿಂದ ಹೊರ ಬಂದವರು ಸಾಧನೆ ಮಾಡುತ್ತಾರೆ

ಜಿಲ್ಲಾ ಸುದ್ದಿ

ಉದ್ಯೋಗ ಬಹಳ ಅವಶ್ಯಕತೆಯಾಗಿದೆ. ಉದ್ಯೋಗಂ ಪುರುಷ ಲಕ್ಷಣಂ ಎಂದು ಹೇಳುತ್ತಾರೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಹೇಳಿದರು.ಅವರು ಜಿಲ್ಲಾಡಳಿತ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಉದ್ಯೋಗ ವಿನಿಮಯ ಕೇಂದ್ರ ಚಿತ್ರದುರ್ಗ ಇವರ ಸಂಯುಕ್ತಾಶ್ರಯ ದಲ್ಲಿ ಚಳ್ಳಕೆರೆ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ನಡೆದ ಉದ್ಯೋಗ ಮೇಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಸರ್ ಎಂ ವಿಶ್ವೇಶ್ವರಯ್ಯ ರವರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಉದ್ಯೋಗ ಮೇಳಕ್ಕೆ ಆಗಮಿಸಿದ ಉದ್ಯೋಗ ಆಕಾಂಕ್ಷಿಗಳಿಗೆ ಶುಭಕೋರಿ ಮಾತನಾಡಿದರು.
ಕೃಷಿ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗವನ್ನೆ ನಾವು ಮಾಡುತ್ತೇವೆ.‌ಇನ್ನು‌ಎಸ್ ಎಸ್ ಎಲ್ ಸಿ ಪಿಯುಸಿ ಐಟಿಐ ಡಿಪ್ಲೊಮೋ‌ ಹೀಗೆ ವಿವಿಧ ಪದವಿಗಳನ್ನು ಪಡೆದವರು ಇಂದು‌ ಉದ್ಯೋಗ ಹರಿಸಿ ಮೇಳದಲ್ಲಿ‌ ಭಾಗವಹಿಸಿ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ, ವೇತನ ಸಿಕ್ಕರೆ ಮಾತ್ರ ಹೋಗುತ್ತಿದ್ದು, ವೇತನ ಸಿಗದೆ ಹೋದರೆ ಅದನ್ನು‌ ನೀವು ‌ಬಿಡುತ್ತೀರಾ, ಯಾವುದೇ ಕ್ಷೇತ್ರದಲ್ಲಿಯೂ‌ ನಾವು ತೆಗೆದುಕೊಂಡರೂ‌ ಅದನ್ನು ಕಂಪ
ಫರ್ಟ್ ಜೋನ್ ನಲ್ಲಿ‌ನಾವು ನೋಡುತ್ತೇವೆ, ಅಂದರೆ ನಮಗೆ ಯಾವುದೇ ಕಷ್ಟ ಆಗಬಾರದು, ಉತ್ತಮ ವೇತನಬೇಕು, ನಾವಿರುವ ಕಡೆಗೆ ಕೆಲಸ ಬೇಕು ಎಂದು ಅಂದುಕೊಳ್ಳುತ್ತೇವೆ. ಆದರೆ ಇಂತಹ ಕಂಫರ್ಟ್ ಜೋನ್ ನಿಂದ ಹೊರಗೆ ಬರುವಂತವರು ಮಾತ್ರ ಏನನ್ನಾದರೂ ಸಾಧನೆ ಮಾಡಲು ಸಾಧ್ಯ,ಸವಾಲುಗಳನ್ನು ಎದುರಿಸುವ ಇಚ್ಛಾ ಶಕ್ತಿಯಿರಬೇಕು,ಇಂತಹ ಮನಸ್ಸುಳ್ಳವರು ಸಾಧಿಸುತ್ತಾರೆ. ಕಂಪನಿಯವರು ಕೂಡ ಉದ್ಯೋಗಾಂಕ್ಷಿಗಳಿಗೆ ಪ್ರೋತ್ಸಾಹ ನೀಡಬೇಕು. ಆಗ ಅವರು ಮುಂದೆ ಬಂದು ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಕ್ಕ ಅಂಜಿನಪ್ಪ ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ಆರ್ ಪ್ರಸನ್ ಕುಮಾರ್ ನಗರಸಭೆ ಸದಸ್ಯರಾದ ಬಿಟಿ ರಮೇಶ್ ಗೌಡ ಹಾಗೂ ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಉದ್ಯೋಗ ಮೇಳಕ್ಕೆ ಆಗಮಿಸಿದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *