ನಗು ಮುಖದ ಚಲುವೆ ಅಪರ್ಣಾಗೆ  ಈ ಸಾಲುಗಳು ಅರ್ಪಣೆ

ರಾಜ್ಯ

 

ನಗು ಮುಖದ ಚಲುವೆ ಅಪರ್ಣಾಗೆ  ಈ ಸಾಲುಗಳು ಅರ್ಪಣೆ

 

 

ಅಪರ್ಣಾ ನೀ ನಗು ಮುಖದ ಚೆಲುವೆ
ಎಲ್ಲರನು ಸ್ಪುಟ ಮಾತುಗಳಲಿ ಗೆದ್ದಿರುವೆ
ನಿನ್ನ ನಿರೂಪಣೆ ನೀಡುವ ವೈಖರಿ ಅತ್ಯಧ್ಭುತ
ಕೇಳಿದ ಕನ್ನಡಿಗರ ಮನ ನಿಂತಿದೆ ತಲೆಬಾಗುತ
ಕನ್ನಡವೆಂದರೆ ನಿನಗೆ ಅದೆಂತಹ ಅಭಿಮಾನ
ಕಸ್ತೂರಿಯ ಸುಗಂಧಂತೆ ಹರಡಿಸಿದ ಸ್ವಾಭಿಮಾನ
ಕನ್ನಡ ನಾಡಿನ ಮುದ್ದು ಮಗಳಾಗಿ ಬೆಳೆದವಳು
ಅಂತರಂಗದ ಹೊನಲು ಈ ನಾಡಿಗೆ ಪರಿಚಯಿಸಿದವಳು
ನಿನ್ನ ಅಭಿಮಾನಿಗಳ ಬಳಗ ನಿನಗಾಗಿ ಕಾಯುತಿರಲು
ಮರೆಯಾಗಿ ಹೊದೆ ಬಾನಲಿ ನಕ್ಷತ್ರದಂತೆ ಮಿಂಚಲು

ಬರಹ
ಶ್ರೀಮತಿ ಸುಲೋಚನಾ ಮಾಲಿ ಪಾಟೀಲ

Leave a Reply

Your email address will not be published. Required fields are marked *