ಒಳ್ಳೆಯ ಕೆಲಸಗಳಿಗೆ ಅಡ್ಡಿಪಡಿಸುವ ಜನರಿಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ – ಬಿ.ವೈ.ವಿಜಯೇಂದ್ರ

ಆರೋಗ್ಯ

ಒಳ್ಳೆಯ ಕೆಲಸಗಳಿಗೆ ಅಡ್ಡಿಪಡಿಸುವ ಜನರಿಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ – ಬಿ.ವೈ.ವಿಜಯೇಂದ್ರ

 

 

ಸಿರಿಗೆರೆ : ರೈತರು ದೇಶಕ್ಕೆ ಅನ್ನ ನೀಡುವವರು. ದೇಶಕ್ಕೆ ರೈತರಿಂದ ಸಮಸ್ಯೆ ಇಲ್ಲ. ರೈತರು ಪ್ರಕೃತಿಗೆ ಅನ್ಯಾಯ ಮಾಡುವುದಿಲ್ಲ. ಸರ್ಕಾರ ನೌಕರರಿಗೆ ಪ್ರತಿವರ್ಷ ವೇತನ ಹೆಚ್ಚಿಸುತ್ತದೆ. ಆದರೆ ರೈತರಿಗೆ ಬೆಳೆಗಳ ಬೆಲೆ ಹೆಚ್ಚಿಸುವುದು ಅಗತ್ಯವಾಗಿದೆ. ಪ್ರಾಣಿಗಳು ನಿರುಪದ್ರವಿಗಳು. ಅವುಗಳಿಗೆ ಯಾವ ಧರ್ಮ ಗುರುಗಳು ಉಪದೇಶ ಮಾಡಿರುವುದಿಲ್ಲ. ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.
ಸಿರಿಗೆರೆಯಲ್ಲಿ ನಡೆಯುತ್ತಿರುವ ಲಿಂ.ಶಿವಕುಮಾರ ಶ್ರೀಗಳ ೩೨ನೇ ಶ್ರದ್ಧಾಜಂಲಿ ಸಮಾರಂಭದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಹಿರಿಯ ಗುರುಗಳು ವಚನ ಸಾಹಿತ್ಯವನ್ನು ವ್ಯಾಪಕವಾಗಿ ಹೊರತಂದವರು. ವಚನ ಸಾಹಿತ್ಯವನ್ನು ವಿವಿಧ ಭಾಷೆಗಳಲ್ಲಿ ಸರಳವಾಗಿ ದೇಶದ್ಯಾಂತ ಪಸರಿಸಬೇಕೆಂಬ ಹಂಬಲ ಇಟ್ಟುಕೊಂಡವರು. ಕಾಲದ ಕರಾಳ ಗರ್ಭದಲ್ಲಿ ಮುಳುಗಿದ್ದ ವಚನ ಸಾಹಿತ್ಯವನ್ನು ಫ.ಗು.ಹಳಕಟ್ಟಿಯವರು ಸಂಶೋಧಿಸಿ ಪ್ರಕಟಿಸಿದರು ಜೊತೆಗೆ ವಚನ ಸಾಹಿತ್ಯವನ್ನು ವ್ಯಾಪಕ ಪ್ರಚಾರ ಮಾಡಿದರು. ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಎಂದೂ ಮರೆಯಲಾಗದ ಕೆಲಸ ಮಾಡಿದ್ದಾರೆ. ಅದನ್ನು ನಮ್ಮ ಬದುಕಿನಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು ಎಂದರು.
ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ ಇಂದು ರಾಜಕೀಯವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಸಮಸ್ಯೆಗಳು ಉಲ್ಭಣವಾಗುತ್ತಿವೆ. ಯಾರು ಒಳ್ಳೆಯ ಕೆಲಸಗಳನ್ನು ಮಾಡಲು ತುಡಿಯುತ್ತಾರೋ ಅವರಿಗೆ ಅಡ್ಡಿಪಡಿಸುವ ಜನರು ಇಂದು ಹೆಚ್ಚಾಗಿದ್ದಾರೆ. ಇಂತವರಿಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ. ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಶ್ರೀಗಳು ತಮ್ಮ ಅಂಕಣದಲ್ಲಿ ಸಮ್ಮತಿಸಿದ್ದಾರೆ. ಸಿರಿಗೆರೆ ಮಠ ಒಂದು ತಪೋವನ. ಹಸಿದವರ ಪಾಲಿಗೆ ದಾಸೋಹದ ಮಹಿಮೆ ತಿಳಿಸಿ ಲಕ್ಷಾಂತರ ಮಕ್ಕಳಿಗೆ ಜ್ಞಾನದ ಬೆಳಕನ್ನು ಬೆಳಗಿಸಿದವರು ಶಿವಕುಮಾರ ಶ್ರೀಗಳು. ದೇಶದ ಭವಿಷ್ಯ ಅಡಗಿರುವುದು ಯುವ ಸಮುದಾಯದ ಮೇಲೆ. ಯುವಕರು ಸ್ವಾರ್ಥಿಗಳಾಗದೆ ತಂದೆ-ತಾಯಿಗಳಿಗೆ ಬೆಲೆ ನೀಡಿ ಸಾಧನೆಯ ಕಡೆಗೆ ಮುಖ ಮಾಡಿ ಎಂದು ಕರೆ ನೀಡಿದರು.
ಅಂತರಾಷ್ಟ್ರೀಯ ಕೃಷಿ ವಿಜ್ಞಾನಿ ಡಾ. ಎಸ್.ಎಲ್.ಕೃಷ್ಣಮೂರ್ತಿ ಮಾತನಾಡಿ, ರೈತರಿಗೋಸ್ಕರ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ೧೬ ಭತ್ತದ ತಳಿಗಳನ್ನು ರೂಪಿಸಿದ್ದೇವೆ. ರೈತರು ಆಧುನಿಕ ಬೇಸಾಯ ಪದ್ಧತಿ ಬೆಳೆಸಿ ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಮೊದಲು ೧೦೦ ಅಡಿಯ ಒಳಗೆ ಭೂಮಿಯಲ್ಲಿ ನೀರು ಸಿಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ೧೦೦೦ ಅಡಿ ದಾಟಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ರೈತರು ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ತಳಿಗಳನ್ನು ಬಳಸಬೇಕಿದೆ. ತರಳಬಾಳು ಕೆ.ವಿ.ಕೆ ಸಂಸ್ಥೆಯಿAದ ಸಹ ಅನೇಕ ತಳಿಗಳು ಜಾರಿಯಲ್ಲಿವೆ.
ಹೊನ್ನಾಳಿ ಶಾಸಕ ಡಿ.ಜೆ.ಶಾಂತನಗೌಡ ಮಾತನಾಡಿ, ವಿಶ್ವದ ಭೂಪಟದಲ್ಲಿ ತಮ್ಮ ಕ್ರಾಂತಿಕಾರಿ ಆಡಳಿತದ ಮೂಲಕ ಸಿರಿಗೆರೆಯ ಮಠದ ಹೆಸರನ್ನು ಉತ್ತುಂಗಕ್ಕೆ ಏರುವಂತೆ ಮಾಡಿದವರು ಶಿವಕುಮಾರ ಶ್ರೀಗಳು. ಸಿರಿಗೆರೆ ಮಠಕ್ಕೆ ಮುಂದಿನ ಉತ್ತರಾಧಿಕಾರಿಯಾಗಿ ಉತ್ತಮ ವ್ಯಕ್ತಿ ಬರಲಿದ್ದಾರೆ. ಮಠದ ವಿರುದ್ಧ ಭೂಟಾಟಿಕೆ ಮಾಡದೇ ಮಠದ ಉನ್ನತಿಗೆ ಎಲ್ಲರೂ ಸಹಕರಿಸಿ ಎಂದರು.

Leave a Reply

Your email address will not be published. Required fields are marked *