ಗಣಿ ಕಂಪನಿಯಿಂದ ಸರ್ಕಾರಿ ಹಳ್ಳ ಒತ್ತುವರಿ ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಜಿಲ್ಲಾ ಸುದ್ದಿ

ಗಣಿ ಕಂಪನಿಯವರು ತಮ್ಮ ಅನುಕೂಲಕ್ಕಾಗಿ ಸರ್ಕಾರಿ ಹಳ್ಳವನ್ನು ಬದಲಾಯಿಸಿ ಬೇರೆಡೆಗೆ ತಿರುಗಿಸಿದ್ದು ಇದರಿಂದ ಸುತ್ತಾ-ಮುತ್ತಲ್ಲಿನ ತೋಟ ಮತ್ತು ಹೊಲಗಳಿಗೆ ತೊಂದರೆಯಾಗಿದ್ದು, ಅಂರ್ತಜಲ ಕಡಿಮೆಯಾಗಿದೆ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವಂತೆ ರೈತರಾದ ಎಸ್.ವಿರೇಶ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

 

 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದ ದಿಂಡದಹಳ್ಳಿಯಲ್ಲಿ ರಿ.ಸ.ನಂ. ೨೦/೪ ಮತ್ತು ೨೦/೫ರ ಜಮೀನಿನಲ್ಲಿ ಗಣಿ ಕಂಪನಿಯವರು ಸರ್ಕಾರಿ ಹಳ್ಳವನ್ನು ಬೇರೆಡೆಗೆ ತಿರುಗಿಸಿ ಅಕ್ರಮವಾಗಿ ಗಣಿ ಚಟುವಟಿಕೆ ನಡೆಸಲು ಮತ್ತು ಲಾರಿಗಳ ಸಂಚಾರ ಮಾಡಲು ಬಳಸಿಕೊಂಡಿರುತ್ತಾರೆ. ಇದರಿಂದ ನನ್ನ ತೋಟವು ಸೇರಿ ಈ ಭಾಗದ ರೈತರ ತೋಟದ ಕೂಳವೆ ಬಾವಿಗಳೋ ಅಂರ್ತಜಲ ಕೊರತೆಯುಂಟಾಗಿದೆ. ತೋಟಗಳಿಗೆ ತುಂಬಾ ಹಾನಿಯಾಗಿದೆ ಎಂದು ಆರೋಪಿಸಿದರು.
ಹಣಕಾಸಿನಲ್ಲಿ ಅನುಕೂಲವಾಗಿರುವವರ ೩-೪ ಕಿ.ಮೀ ದೂರದಿಂದ ನೀರನ್ನು ತಮ್ಮ ತೋಟವನ್ನು ಉಳಿಸಿಕೊಂಡಿದ್ದಾರೆ. ಆದರೆ ಹಣಕಾಸಿನಲ್ಲಿ ದುರ್ಬಲರಾದವರು ನೀರಿಕ್ಷಿತವಾದ ಆದಾಯ ಇಲ್ಲದೆ ರೈತರಿಗೆ ನಷ್ಠ ಉಂಟಾಗಿದೆ. ಇನ್ನೂ ಕೆಲವು ರೈತರ ತೋಟಗಳು ನೀರಿಲ್ಲ ಹಾಳಾಗಿವೆ. ಗಣಿ ಕಂಪನಿಯವರು ರೈಲ್ವೆಯಾರ್ಡಿನಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆಯನ್ನು ಮಾಡಿಲ್ಲ, ಸೂಕ್ತವಾದ ನಿಯಮಗಳನ್ನು ಪಾಲಿಸಿಲ್ಲ, ಲಾರಿಗಳ ಓಡಾಟದಿಂದ ಉಂಟಾಗಯವ ಧೂಳಿನಿಂದ ತೋಟಗಳು ಹಾಳಾಗಿವೆ. ಸಾಕಷ್ಟು ಆದಾಯ ಬಾರದೆ ಕುಂಠಿತವಾಗಿದೆ ಎಂದು ವಿರೇಶ್ ದೂರಿದರು.
ಇದರ ಬಗ್ಗೆ ನಾವು ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿ ಸಮಸ್ಯೆಯನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು ಸಹಾ ಇದುವರೆವಿಗೂ ಸಮಸ್ಯೆ ಬಗೆಹರಿದಿಲ್ಲ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆ. ಇದರ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತರಲಾಗಿದೆ. ಇಷ್ಠಾದರೂ ಸಹಾ ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೂ ಸಹಾ ಬೆಲೆಯನ್ನು ನೀಡಿಲ್ಲ, ಇದರ ಬಗ್ಗೆ ಸರಿಯಾದ ತೀರ್ಮಾನವನ್ನು ಮಾಡದಿದ್ದಲ್ಲಿ ಹೋರಾಟವನ್ನು ಮಾಡುವುದಾಗಿ ಎಚ್ಚರಿಸಿದ್ದಾರೆ.
ಡಾ.ವಿಜಯಕುಮಾರ್ ಮಾತನಾಡಿ, ಲಾರಿಗಳ ಓಡಾಟದಿಂದ ಉಂಟಾಗುವ ಧೂಳನ್ನು ಸೇವನೆ ಮಾಡುವುದರ ಮುಲಕ ವಿವಿಧ ರೀತಿಯ ರೋಗಗಳಿಗೆ ಜನತೆ ಬಲಿಯಾಗುತ್ತಾರೆ. ಇದರಿಂದ ಅಸ್ತಮ ಸೇರಿದಂತೆ ಇತರೆ ರೋಗಗಳಿಗೆ ತುತ್ತಾಗಿ ಔಷಧೋಪಾಚಾರವನ್ನು ಪಡೆಯಲು ಸಾವಿರಾರು ರೂ.ಗಳನ್ನು ವ್ಯಯ ಮಾಡಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *