ಸುಪ್ರೀಂ ಕೋರ್ಟ್ ನ ಏಳು ಸದಸ್ಯರ ಪೀಠದ ತೀರ್ಪು: ಮಾದಾರಚನ್ನಯ್ಯ ಸ್ವಾಮೀಜಿ ಸ್ವಾಗತ

ದೇಶ

 

ಒಳ ಮೀಸಲಾತಿಯ ಬಗ್ಗೆ ಸುಪ್ರೀಂಕೋರ್ಟಿನ ಏಳು ಸದಸ್ಯರ ಸಂವಿಧಾನ ಪೀಠದ ಐತಿಹಾಸಿಕ ತೀರ್ಪನ್ನು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸ್ವಾಗತಿಸಿದ್ದಾರೆ .

 

 

ಈ ತೀರ್ಪು ಕಳೆದ ಮೂರು ದಶಕಗಳ ಸುಧೀರ್ಘ ಹೋರಾಟಕ್ಕೆ ಸಿಕ್ಕ ಜಯವಾಗಿದೆ . ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯಾವಾರು ನ್ಯಾಯಯುತ ಹಂಚಿಕೆ ಆಗಬೇಕು . ಈ ವರ್ಗೀಕರಣದ ಅಧಿಕಾರ ರಾಜ್ಯಗಳಿಗೆ ಇರಬೇಕು ಎಂದು ನ್ಯಾ ಅರುಣ್ ಮಿಶ್ರಾ ಪೀಠ ಪ್ರತಿಪಾದಿಸಿತ್ತು . ಈ ಅಂಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ ಎಂದು ಮಾದಾರಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ .

ಮೀಸಲಾತಿಯ ನ್ಯಾಯಯುತ ಹಂಚಿಕೆಯ ಮೂಲಕ ಎಲ್ಲ 101 ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಈ ತೀರ್ಪು ನೆರೆವಾಗಲಿದೆ ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *