ಶ್ರೀ ಕೃಷ್ಣ ಪರಮಾತ್ಮನ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಆಳವಡಿಸಿಕೊಳ್ಳಬೇಕು

ರಾಜ್ಯ

ಶ್ರೀ ಕೃಷ್ಣ ಪರಮಾತ್ಮನ ಆದರ್ಶ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಕರೆ ನೀಡಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀಕೃಷ್ಣ ವ್ಯಕ್ತಿಯಲ್ಲ. ಓರ್ವ ಶಕ್ತಿ. ಪೂರ್ಣ ಕಲಾವತಾರಿ. ಹಾಗಾಗಿ ಶ್ರೀಕೃಷ್ಣನ ಲೀಲೆಯನ್ನು ವರ್ಣಿಸಲಸಾಧ್ಯ. ಕೃಷ್ಣನ ಜೀವನ ಚರಿತ್ರೆ ಹಾಗೂ ಮೌಲ್ಯಗಳನ್ನು ಪಾಲನೆ ಮಾಡುವಂತೆ ತಿಳಿಸಿದರು.
ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೆ ಮುಂದಿನ ದಿನಗಳಲ್ಲಿ ಗಣೇಶ, ಈದ್‍ಮಿಲಾದ್, ರಂಜಾನ್, ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿ ಎಲ್ಲರೂ ಸಹೋದರತ್ವ ಸಹಬಾಳ್ವೆಯಿಂದ ಬದುಕೋಣ ಎಂದು ಹೇಳಿದರು.
1 ರಿಂದ 5 ನೇ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, 6 ರಿಂದ 10 ನೇ ತರಗತಿ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಬೆಣ್ಣೆ ತುಂಬಿದ ಮಡಿಕೆಯನ್ನು ಹೊಡೆದು ಸಂಭ್ರಮಿಸಿದರು.
ಶಿಕ್ಷಣ ಸಂಸ್ಥೆ ಸಂಯೋಜಕ ರಾಜು ಆರ್.ಎಸ್. ಶಿಕ್ಷಣ ವೀಕ್ಷಕರಾದ ನಾಗಭೂಷಣಶೆಟ್ಟಿ, ಶಿಕ್ಷಣ ಸಂಯೋಜಕರಾದ ಕೊಟ್ರೇಶ್, ನೃತ್ಯ ತರಬೇತಿ ಶಿಕ್ಷಕ ಅಂಜನ್, ಶಿಕ್ಷಕಿ ವೈಷ್ಣವಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ಪಾಲ್ಗೊಂಡಿದ್ದರು.
ನೂರಾರು ಮಕ್ಕಳು ಶ್ರೀಕೃಷ್ಣನ ವೇಷಭೂಷಣ ತೊಟ್ಟಿದ್ದರು.

 

 

Leave a Reply

Your email address will not be published. Required fields are marked *