ಸಮಾಜವನ್ನು ಸಂಘಟಿಸಬೇಕು ಆಗ ಮಾತ್ರ ನಮಗೆ ಬೆಲೆ ಬರುತ್ತದೆ: ನಾಗಭೂಷಣ ಶ್ರೀ

ರಾಜ್ಯ

 

ಮಕ್ಕಳಿಗೆ ತಾಯಂದಿರು ಶಿಸ್ತು, ಸಂಸ್ಕಾರ ಹಾಗೂ ಶಿಕ್ಷಣವನ್ನು ಕಲಿಸುವ ಕಾರ್ಯದಲ್ಲಿ ಮುಂದಾಗಬೇಕಿದೆ ಎಂದು ಗುಳೇಗುಡ್ಡದ ಸದ್ಗುರು ಸದಾನಂದ ಶಿವಯೋಗಿ ಮಠದ ಶ್ರೀ ನಾಗಭೂಷಣ ಶ್ರೀಗಳು ಕರೆ ನೀಡಿದರು.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಅಖಿಲ ಕರ್ನಾಟಕ ಕೂರಚ ಮಹಾ ಸಂಘದ ಆಶ್ರಯದಲ್ಲಿ ನಡೆದ ಶ್ರೀಗುರು ನುಲಿಯ ಚಂದಯ್ಯರವರ ೯೧೭ನೇ ವರ್ಷದ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಜಯಂತಿಗಳಿಗೆ ಬರುವುದು, ಹೋಗುವುದು ಮಾತ್ರ ಮಾಡದೇ ಅಲ್ಲಿ ಬಂದಿದ್ದವರು, ಹೇಳುವ ಮಾತುಗಳನ್ನು ಕೇಳಿ ಆದನ್ನು ಆಳವಡಿಕೆ ಮಾಡಿಕೊಳ್ಳಬೇಕು, ಆಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ. ನಮ್ಮಲ್ಲಿ ಜನ ಸಂಖ್ಯೆ ಕಡಿಮೆ ಇದ್ದರೂ ಸಹಾ ಸಂಘಟಿತರಾಗಿರಬೇಕಿದೆ. ಸಮಾಜವನ್ನು ಸಂಘಟಿಸಬೇಕಿದೆ. ಅಗ ಮಾತ್ರ ನಮಗೆ ಬೆಲೆ ಬರಲು ಸಾಧ್ಯವಿದೆ ಎಂದರು.

ನುಲಿಯ ಚಂದಯ್ಯರವರು ತಿಳಿಸಿದ ರೀತಿಯಲ್ಲಿ ಆವರ ಆದರ್ಶ, ತತ್ವಗಳನ್ನು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅಳವಡಿಕೆಯನ್ನು ಮಾಡಿಕೊಳ್ಳಬೇಕಿದೆ. ನುಲಿಯ ಚಂದಯ್ಯರವರು ಭಗವಂತನನ್ನೇ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ ವ್ಯಕ್ತಿಯಾಗಿದ್ದರು, ಇಂತಹ ಶಿಷ್ಯರಾದ ನಾವುಗಳು ಸಹಾ ಉತ್ತಮವಾದ ಬದುಕನ್ನು ನಡೆಸಬೇಕಿದೆ. ನಮ್ಮಲ್ಲಿ ಯಾವ ರೀತಿಯ ಬೇಧ ಬಾವ ಇಲ್ಲದೆ ಎಲ್ಲರು ಒಂದು ಎಂಬ ಭಾವನೆ ಮೂಡಿದಾಗ ಮಾತ್ರ ಸಮಾಜದ ಪ್ರಗತಿ ಹೊಂದಲು ಸಾಧ್ಯವಿದೆ. ಒಗ್ಗಟಿನಲ್ಲಿ ಮಾತ್ರ ಬಲ ಇದೆ, ಬೇರೆ ಬೇರೆಯಾಗಿದ್ದಾರೆ ನಮ್ಮನ್ನು ಯಾರು ಸಹಾ ನೋಡುವುದಿಲ್ಲ, ನಾವುಗಳು ಸಾಲವನ್ನು ಪಡೆಯದೇ ಬೇರೆಯವರಿಗೆ ಸಾಲವನ್ನು ನೀಡುವಂತ ವ್ಯಕ್ತಿಗಳಾಗಬೇಕಿದೆ ಎಂದು ಶ್ರೀಗಳು ತಿಳಿಸಿದರು.

ಅಖಿಲ ಕರ್ನಾಟಕ ಕೂರಚ ಮಹಾ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಎನ್.ರಾಮಚಂದ್ರಪ್ಪ ಮಾತನಾಡಿ, ಯಾವುದಾದರೂ ಸಾಧನೆಗೆ ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಆದರೆ ನಮಗೆ ಇದುವರೆವಿಗೂ ಗುರು ಇರಲಿಲ್ಲ ಆದರೆ ಈಗ ಗುರು ಸಿಕ್ಕಿದ್ದಾರೆ ಗುರಿಯನ್ನು ಹಿಡಿದುಕೊಂಡು ಮುಂದೆ ಹೋಗಬೇಕಿದೆ. ಸಂಘಟನೆಯ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಿದೆ. ಬೇರೆ ಸಮಾಜದವರು ನಮ್ಮನ್ನು ತುಳಿಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಿಂದ ನಮ್ಮ ಸಂಘಟನೆಯನ್ನು ಪ್ರಾರಂಭ ಮಾಡುವುದರ ಮೂಲಕ ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕಿದೆ ಎಂದರು.

 

 

ನುಲಿಯ ಚಂದಯ್ಯರವರು ಹಗ್ಗವನ್ನು ನೇಯುವುದನ್ನು ನಮಗೆ ಬಿಟ್ಟು ಹೋಗಿದ್ದಾರೆ, ನಮ್ಮ ಹಗ್ಗ ಎಲ್ಲರಿಗೂ ಸಹಾ ಉಪಯೋಗ ಇದೆ, ಇದ್ದಲ್ಲದೆ ಕಾಯಕ ಪ್ರಜ್ಞೆಯನ್ನು ಮೂಡಿಸಿದವರು ಚಂದಯ್ಯರವರು ಅವರ ತತ್ವ ಸಿದ್ದಾಂತಗಳನ್ನು ನಾವುಗಳು ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಕೂರಚ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ, ದೇಶದಲ್ಲಿ ನಮ್ಮ ಸಮಾಜವನ್ನು ನಿರ್ಲಕ್ಷಕ್ಕೆ ಒಳಗಾಗಿದೆ, ಯಾರು ಸಹಾ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ನಾವು ಸಂಘಟನೆಯಾಗಬೇಕಿದೆ ಆಗ ಮಾತ್ರ ನಮ್ಮ ಸಮಾಜಕ್ಕೆ ಬೆಲೆ ಬರಲು ಸಾಧ್ಯವಿದೆ. ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ತದ ನಂತರ ಮದುವೆಯನ್ನು ಮಾಡಿ ಸರ್ಕಾರ ನಿಗಧಿ ಮಾಡಿದ ವಯಸ್ಸಿನಲ್ಲಿಯೇ ಮದುವೆಯನ್ನು ಮಾಡಿ ನಮಗೆ ಯಾವುದೆ ಮಠ ಇಲ್ಲ ಸರ್ವೆ ನಂ ೩೮ರಲ್ಲಿ ಸರ್ಕಾರದ ಗೋಮಾಳದಲ್ಲಿ ಸುಮಾರು . ಎಕರೆ ಭೂಮಿ ಇದೆ ಅದನ್ನು ನಮ್ಮ ಜನಾಂಗಕ್ಕೆ ನೀಡಿದರೆ ಮಠ ನಿರ್ಮಾಣ ಮಾಡಲು ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಒಳ್ಳಾರಿ ರಾಮಮೂರ್ತಿ, ಪಾವಗಡದ ಗಂಗಾಧರ್, ನಾಗಪ್ಪ, ಜಿಲ್ಲಾಧ್ಯಕ್ಷರಾದ ತಿಮ್ಮಣ್ಣ, ಚಳ್ಳಕೆರೆಯ ಕೊಟ್ರೇಶ್ ವಿಜಯಕುಮಾರ್ ಭಾಗವಹಿಸಿದ್ದರು, ಉಪನ್ಯಾಸಕರಾದ ನಾಗಪ್ಪರವರು ನುಲಿಯ ಚಂದಯ್ಯ ರವರ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನಾ, ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ನುಲಿಯ ಚಂದಯ್ಯರವರ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾತಂಡದೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು

 

Leave a Reply

Your email address will not be published. Required fields are marked *