ನಾಲ್ಕೆ ದಿನದಲ್ಲಿ ಸರಗಳ್ಳನನ್ನು ಬಂಧಿಸಿದ ಪೊಲೀಸರು

ರಾಜ್ಯ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಆರ್ ನುಲೇನೂರು ಗ್ರಾಮದ ಅಡಿಕೆ ತೋಟದಲ್ಲಿ ಸುತ್ತಾಡುತ್ತಿರುವಾಗ ಸಾಕಮ್ಮ ಎನ್ನುವ ಮಹಿಳೆಯ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಸುಲಿಗೆ ಕೋರನನ್ನು ನಾಲ್ಕು ದಿನಗಳಲ್ಲಿ ಬಂಧಿಸಿ ಅವನಿಂದ ಮಾಂಗಲ್ಯ ಸರವನ್ನು ಹೊಳಲ್ಕೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಸ್ಥಳಕ್ಕೆ ಭೇಟಿ‌ ನೀಡಿದ ಹೊಳಲ್ಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಾಕಮ್ಮ ಅಡಿಕೆ ತೋಟದಲ್ಲಿ ಸುತ್ತಾಡುತ್ತಿದ್ದಾಗ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದ ವ್ಯಕ್ತಿಯ‌ನ್ನು ಪತ್ತೆ ಹಚ್ಚಲು ಎಎಸ್ ಪಿ ಎಸ್ ಜೆ ಕುಮಾರಸ್ವಾಮಿ‌, ಹಾಗು ಡಿವೈಎಸ್ ಪಿ  ದಿನಕರ್  ಮಾರ್ಗದರ್ಶನದಲ್ಲಿ ಕಡೂರು ತಾಲೂಕಿನ ಕಾನಗೊಂಡನಹಳ್ಳಿ ವಡ್ಡರಹಟ್ಟಿಯಲ್ಲಿ ಕಳ್ಳನನ್ನು ಬಂಧಿಸಿದ್ದು, ಅವನನ್ನು ಸುರೇಶ ಎಂದು ಗುರುತಿಸಲಾಗಿದೆ.ಇವನನ್ನು ಶಿರಾದ ಮದ್ದಾಕನಹಳ್ಳಿ ಗ್ರಾಮದಲ್ಲಿ ಬಂಧಿಸಲಾಗಿದೆ. ಇವನು ಕಡೂರಿನ ಮುತ್ತೂತ್ ಫಿನ್ ಕಾರ್ಪ್ ನಲ್ಲಿ ಮೂರು ಲಕ್ಷ ಮೌಲ್ಯದ ಎರಡೆಳೆ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಹೊಳಲ್ಕೆರೆ ಠಾಣೆಯ ಸಿಪಿಐ ಎಂಬಿ ಚಿಕ್ಕಣ್ಣನವರ್ ಪಿಎಸ್ ಐ ಸಚಿನ್ ಪಟೇಲ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ಎಸ್ಪಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.

 

 

Leave a Reply

Your email address will not be published. Required fields are marked *