ಶಿಕ್ಷಣ ಇಲಾಖೆಯಲ್ಲಿ ಒನ್ ವೇ ಆಡಳಿತ ನಡೆಯುತ್ತಿದೆ : ಅರುಣ್ ಶಹಾಪುರ್ ಆರೋಪ

ರಾಜ್ಯ

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಒನ್ ವೇ ಟ್ರಾಫಿಕ್ ನಡೆಯುತ್ತಿದೆ ಎಂದು ಮಾಜಿ ಎಂ ಎಲ್ ಸಿ ಅರುಣ್ ಶಹಾಪುರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಶಿಕ್ಷಣದ ಹಿತ ದೃಷ್ಟಿಯಿಂದ ಮೂರು ಬಾರಿ ಗೆದ್ದಿರುವ ವೈ ಎ ನಾರಾಯಣಸ್ವಾಮಿ ಅವರನ್ನು ಈ ಬಾರಿ ಗೆಲ್ಲಿಸಿಕೊಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ‌ ಶೈಕ್ಷಣಿಕ ದುರಾಡಳಿತ ನಡೆಸಿದೆ.ಇದರಿಂದ ರಾಜ್ಯದಲ್ಲಿ ಶಿಕ್ಷಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಶಿಕ್ಷಣದಲ್ಲಿ ಒನ್ ವೇ ಆಡಳಿತ ನಡೆಯುತ್ತಿದೆ. ಹಾಲಿ ಶಿಕ್ಷಣ ಸಚಿವರು, ಮಸೇಜ್ ಮೂಲಕ, ವಾಟ್ಸಪ್ ಮೂಲಕ ಸಂದೇಶಗಳನ್ನು ನೀಡಿ ಆನ್ಲೈನ್ ಸಭೆಗಳ ಮೂಲಕ ಶಿಕ್ಷಣವನ್ನು‌ ಮುನ್ನೆಡೆಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರನ್ನು ತುರ್ತು ಸೇವಾ ಸಿಬ್ಬಂದಿಗಳೆನ್ನುವ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ‌ಶಿಕ್ಷಕರಿಗೆ ಮಾತ್ರ ನೋವಿಲ್ಲ, ಶಿಕ್ಷಣಾಧಿಕಾರಿಗಳಿಗೂ ಸಂಕಷ್ಟ ಎದುರಾಗಿದೆ.ಒನ್ ವೇ ಆಡಳಿತ ನಡೆಯುತ್ತಿದೆ. ಟ್ರಾಫಿಕ್ ಜಾಮ್ ಕೂಡ ಆಗುವ ಸನ್ನಿವೇಶ ನಿರ್ಮಾಣ ಆಗಿದೆ.ಸರ್ಕಾರವು ಶಿಕ್ಷಣಾ ಧಿಕಾರಿಗಳ ಮೇಲೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಶಿಕ್ಷಣಾಧಿಕಾರಿಗಳ ಮೇಲೆ ಗಧಾಪ್ರಹಾರ ಮಾಡುತ್ತಿದೆ. ಈ ಸರ್ಕಾರ ಬಂದ ಮೇಲೆ ಡಯಟ್ ಗಳಲ್ಲಿ ಹುದ್ದೆಗಳನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದೆ. ಶೈಕ್ಷಣಿಕವಾಗಿ ಕೆಲಸ ಮಾಡುತ್ತಿಲ್ಲ. ಶಿಕ್ಷಣಾಧಿಕಾರಿಗಳ‌ ಮೇಲೆ ಭ್ರಷ್ಟಾಚಾರ ಮಾಡಿಸುವ ಮೂಲಕ ದೌರ್ಜನ್ಯ ಮಾಡುತ್ತಿದೆ. ಶಿಕ್ಷಕರ ನೈತಿಕ ಸ್ಥೈರ್ಯ ಕಡಿಮೆ ಮಾಡುತ್ತಿದೆ. ಇಡೀ ರಾಜ್ಯದ ಶಿಕ್ಷಣ ವ್ಯವಸ್ಥೆ ಕುಸಿತಕಂಡಿದೆ. 5 8 9. ತರಗತಿಗಳ ಪರೀಕ್ಷೆಗಾಗಿ ಕೋರ್ಟ್ ನಿಂದ ಸರ್ಕಾರ ಛೀ ಮಾರಿ ಹಾಕಿಸಿಕೊಂಡಿದೆ. ಶಿಕ್ಷಣದ ಪ್ರಭಾವ ಕಡಿಮೆಗೊಳಿಸಿ, ಅಧಿಕಾರಿಗಳನ್ನು ಬಿಟ್ಟು ಕೆಲಸ ಮಾಡಿಸುತ್ತಿದೆ. ಒಂದು ವರ್ಷದ ಅವಧಿಯಲ್ಲಿ ಶಾಲಾ ಕೊಠಡಿ ನಿರ್ಮಾಣ ಮಾಡಿಲ್ಲ. ಸರ್ಕಾರದ ದುರಾಡಳಿತವನ್ನು ತಡೆದು ಕಿವಿ ಹಿಂಡಲು, ಆರು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ‌ ಮಾಡಿದರು. ಈ ಸಮಯದಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರುಳಿ, ಸಂಪತ್ ಕುಮಾರ್ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇಂದ್ರೆ ಇದ್ದರು.

 

 

Leave a Reply

Your email address will not be published. Required fields are marked *