ಸಿಎಸ್ ಆರ್ ಬಳಕೆ ಬಗ್ಗೆ ಪ್ರಶ್ನಿಸಿದ ಸಂಸದ ಕಾರ ಜೋಳ: ಚಿತ್ರದುರ್ಗ ಜಿಲ್ಲೆಗೆ 48.33 ಕೋಟಿ‌ಹಣ ಬಳಕೆ

ದೇಶ

ರಾಜ್ಯದಲ್ಲಿ ಕಾರ್ಪೋರೇಟ್ ವಲಯದ ಸಾಮಾಜಿಕ ಹೊಣೆಗಾರಿಕೆ ಅನುದಾನದ ಬಳಕೆ ಕುರಿತು ಸಂಸತ್ತಿನಲ್ಲಿ ಗೋವಿಂದ ಕಾರಜೋಳ ಪ್ರಶ್ನೆ ಕೇಳಿದ್ದು, ಕಳೆದ ೫ ವರ್ಷಗಳಲ್ಲಿ ಕರ್ನಾಟಕಕ್ಕೆ ಕಾರ್ಪೋರೇಟ್ ವಲಯದ ಸಾಮಾಜಿಕ ಹೊಣೆಗಾರಿಕೆ ಅನುದಾನವನ್ನು (csr) ಯಾವ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿದೆ, ಜಿಲ್ಲಾವಾರು ಎಷ್ಟು ಅನುದಾನ ಬಂದಿದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಪ್ರಾಭಲ್ಯವಿರುವ ಪ್ರದೇಶಗಳಿಗೆ ಹೆಚ್ಚಿನ ಸಿ.ಎಸ್.ಆರ್. ಅನುದಾನ ಬಳಸಲು ಕೇಂದ್ರ ಸರ್ಕಾರ ಏನಾದರು ವಿಶೇಷ ಆಸಕ್ತಿ ತಗೆದುಕೊಂಡಿದೆಯೇ ಎಂಬುದರ ಕುರಿತು ಸಂಸದ ಗೋವಿಂದ ಕಾರಜೋಳರವರು ಸಂಸತ್ತಿನಲ್ಲಿ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವನ್ನು ಕುರಿತು ಪ್ರಶ್ನಿಸಿದ್ದಾರೆ.
ಸಂಸದರ ಪ್ರಶ್ನೆಗೆ ಉತ್ತರಿಸಿರುವ ಕಾರ್ಪೋರೇಟ್ ವ್ಯವಹಾರಗಳ ರಾಜ್ಯ ಸಚಿವ ಹರ್ಷ ಮಲ್ಹೋತ್ರ ಕಂಪನಿಗಳ ಕಾಯ್ದೆ2013 ಅಡಿಯಲ್ಲಿ ಪ್ರತಿಯೊಂದು ಕಂಪನಿಗಳು ವಾರ್ಷಿಕವಾಗಿ ಸಿ.ಎಸ್.ಆರ್.ಚಟುವಟಿಕೆಗಳ ವಿವರಗಳನ್ನು ಬಹಿರಂಗಪಡಿಸುವುದು ಅವಶ್ಯವಾಗಿರುತ್ತದೆ. ಕಂಪನಿಗಳು ಸಲ್ಲಿಸುವ ಸಿ.ಎಸ್.ಆರ್. ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕ ಡೊಮೈನ್‌ನಲ್ಲಿ ವೀಕ್ಷಣೆ ಮಾಡಬಹುದಾಗಿ ಎಂದು ತಿಳಿಸಿದ್ದಾರೆ.
2018-19 ನೇ ಸಾಲಿನಿಂದ 2023-24 ನೇ ಸಾಲಿನವರೆಗೆ ಕರ್ನಾಟಕಕ್ಕೆ ಸುಮಾರು 7800 ಕೋಟಿಯಷ್ಟು ಸಿ.ಎಸ್.ಆರ್ ಅನುದಾನವನ್ನು ನೀಡಲಾಗಿದೆ. ಅದರಲ್ಲಿಯೂ ಚಿತ್ರದುರ್ಗ ಜಿಲ್ಲೆಗೆ ಕಳೆದ ೫ ವರ್ಷಗಳಲ್ಲಿ ಸುಮಾರು 48.33 ಕೋಟಿಯಷ್ಟು ಸಿ.ಎಸ್.ಆರ್. ಅನುದಾನವನ್ನು ಬಳಸಲಾಗಿದೆ. ಕಂಪನಿಗಳು ಹಾಗು ಅವುಗಳ ಮಂಡಳಿಗಳು ಅದರ ಸಿ.ಎಸ್.ಆರ್. ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಚಟುವಟಿಕೆಗಳನ್ನು ನಿರ್ಧರಿಸಲು, ಕಾರ್ಯಗೊತಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅಧಿಕಾರವನ್ನು ಹೊಂದಿರುತ್ತವೆ. ನಿರ್ಧಿಷ್ಟ ಪ್ರದೇಶ ಅಥವಾ ಚಟುವಟಿಕೆಯಲ್ಲಿ ಖರ್ಚು ಮಾಡಲು ಕಂಪನಿಗಳಿಗೆ ಸರ್ಕಾರ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ. ಕಾಯಿದೆಯ ವೇಳಾಪಟ್ಟಿ ೭ ರನ್ವಯ ಕಂಪನಿಗಳು ಸಿ.ಎಸ್.ಆರ್. ಅಡಿ ಕೈಗೊಳ್ಳಬಹುದಾದ ಅರ್ಹ ಚಟುವಟಿಕೆಗಳನ್ನು ಮತ್ತು ಸುಸ್ಥಿರ ಅಭಿವೃದ್ದಿಯನ್ನು ಉತ್ತೇಜಿಸಲು ರಾಷ್ಟ್ರೀಯ ಆದ್ಯತೆಗಳೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ದಿ, ಕೊಳಚೆ ಪ್ರದೇಶಗಳ ಅಭಿವೃಧ್ದಿ, ಗ್ರಾಮೀಣ ಅಭಿವೃದ್ದಿ ಯೋಜನೆಗಳು, ಅಸಮಾನತೆಗಳನ್ನು ಕಡಿಮೆ ಮಾಡುವ ಕ್ರಮಗಳ ಕುರಿತು ಹೆಚ್ಚಿನ ಗಮನ ನೀಡುವ ಕುರಿತು ಕಂಪನಿಗಳ ಗಮನ ಸೆಳೆಯಲಾಗುವುದು ಎಂದಿದ್ದಾರೆ.

 

 

 

 

Leave a Reply

Your email address will not be published. Required fields are marked *