ಪಿಎಂ ಆವಾಜ್ ಯೋಜನೆಯಲ್ಲಿ ಚಿತ್ರದುರ್ಗ ತುಮಕೂರು ಜಿಲ್ಲೆಗಳ ವಸತಿ ಮಂಜೂರಾತಿ ಮಾಹಿತಿ ಪಡೆದ ಸಂಸದ ಗೋವಿಂದ ಕಾರಜೋಳ

ದೇಶ

 

ಪ್ರಧಾನಮಂತ್ರಿ ಆವಾಸ್ ಯೋಜನೆ ವಸತಿ ಅನುದಾನ ಸಮರ್ಪಕ ಬಳಕೆಯಾಗಲಿ : ಸಂಸದ ಗೋವಿಂದ
ಕಾರಜೋಳ

ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ವಸತಿ ಯೋಜನೆಯಡಿ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ವಸತಿ ರಹಿತರಿಗೆ ವಸತಿಯನ್ನು ಒದಗಿಸುವ ದೃಷ್ಟಿಯಿಂದ ಸರ್ವೆ ಕಾರ್ಯವನ್ನು ಏನಾದರು ನಡೆಸಲಾಗಿದೆಯೇ ? ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಎಷ್ಟು ಮನೆಗಳು ಮಂಜೂರಾಗಿವೆ ? ಎಷ್ಟು ಮನೆಗಳು ಮಂಜೂರಾಗಲು ಬಾಕಿಯಿವೆ, ಮತ್ತು ಎಷ್ಟು ಮನೆಗಳು ಪೆಂಡಿಂಗ್ ಇವೆ ? ಅದೇ ರೀತಿ ಎಷ್ಟು ಅನುದಾನ ಮಂಜೂರಾಗಿದೆ, ವಸತಿ ರಹಿತರಿಗೆ ವಸತಿ ಒದಗಿಸಲು ಈ ಯೋಜನೆಯ ಜೊತೆಗೆ ರಾಜ್ಯ ಸರ್ಕಾರಗಳು ಯಾವ ಕ್ರಮ ಕೈಗೊಂಡಿವೆ ಎಂದು ಸಂಸತ್ತಿನಲ್ಲಿ ಸಂಸದ ಗೋವಿಂದ ಕಾರಜೋಳ ಗ್ರಾಮೀಣಾಭಿವೃದ್ದಿ ಖಾತೆ ರಾಜ್ಯ ಸಚಿವ ಡಾ: ಚಂದ್ರಶೇಖರ ಪೆಮ್ಮಸಾನಿ ಅವರಿಗೆ ಮಾಹಿತಿ ಕೇಳಿದ್ದಾರೆ.
ಸಂಸದರ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ವಸತಿ ಸಚಿವರು, ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಯೋಜನೆಯಡಿ ವಸತಿರಹಿತರನ್ನು ಗುರುತಿಸುವ ಕಾರ್ಯ 2011 ರಲ್ಲಿ ನಡೆದ ಸಾಮಾಜಿಕ ಆರ್ಥಿಕ ಜಾತಿ ಗಣತಿಯಲ್ಲಿ ಸೂಚಿಸಲಾದ ಮಾನದಂಡಗಳ ಮೇಲೆ ನಡೆಯುತ್ತದೆ. ಈ ರೀತಿ ಗುರುತಿಸುವ ವಸತಿ ರಹಿತರನ್ನು ಗ್ರಾಮಸಭೆಗಳ ಮೂಲಕ ಅಂತಿಮಗೊಳಿಸಲಾಗುತ್ತದೆ. ಸರ್ಕಾರ 2018 ರ ಜನವರಿಯಿಂದ 2019 ರ ಮಾರ್ಚ್ ವರೆಗೆ ಆವಾಸ್ ಯೋಜನೆಯ ಸರ್ವೆ ಕಾರ್ಯ ನಡೆಸಲಾಗಿದೆ. ಈ ಸರ್ವೆ ಕಾರ್ಯದಲ್ಲಿ ಬಿಟ್ಟು ಹೋದವರನ್ನು ಪುನ: ಹೆಚ್ಚುವರಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಒಟ್ಟು 3.90 ಕೋಟಿ ಅರ್ಹ ಕುಟುಂಬಗಳು ಈ ಸರ್ವೆಯಲ್ಲಿ ನೊಂದಾಯಿಸಿಕೊಂಡಿವೆ. ಗ್ರಾಮಸಭೆಗಳಲ್ಲಿ ಈ ನೊಂದಣಿ ಯನ್ನು ಪರಿಶೀಲನೆ ನಡೆಸಿದ ,ನಂತರ ಈ ಸಂಖ್ಯೆ 2.95 ಕೋಟಿ ಕುಟುಂಬಗಳು ವಸತಿಗಾಗಿ ಅರ್ಹತೆ ಹೊಂದಿವೆ ಎಂಬುದನ್ನು ಅಂತಿಮಗೊಳಿಸಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2.95 ಕೋಟಿ ಮನೆಗಳ ಒಟ್ಟಾರೆ ಕಡ್ಡಾಯ ಗುರಿಯನ್ನು ಈಗಾಗಲೇ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ 2.94 ಕೋಟಿಗೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ, 2.64 ಕೋಟಿ ಮನೆಗಳನ್ನ ಈಗಾಗಲೇ ನಿರ್ಮಾಣ ಮಾಡಲಾಗಿದೆ.

 

 

ಒಟ್ಟಾರೆಯಾಗಿ 2011 ರ ಸಾಮಾಜಿಕ ಆರ್ಥಿಕ ಜಾತಿ ಗಣತಿಯಲ್ಲಿ ಹಾಗೂ 2018 ರ ವಸತಿ ಸಮೀಕ್ಷೆಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 56,605 ಮತ್ತು ತುಮಕೂರು ಜಿಲ್ಲೆಯಲ್ಲಿ 77,871 ಅರ್ಹ ಕುಟುಂಬಗಳು ವಸತಿಗಾಗಿ ಬೇಡಿಕೆ ಪಟ್ಟಿಯಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯಡಿ 2016-17 ರಿಂದ 2023-24 ರವರೆಗೆ ಚಿತ್ರದುರ್ಗ ಜಿಲ್ಲೆಗೆ ಸುಮಾರು 1895 ಮನೆಗಳು ಹಾಗೂ ತುಮಕೂರು ಜಿಲ್ಲೆಗೆ ಸುಮಾರು 1548 ಮನೆಗಳು ಮಂಜೂರಾಗಿವೆ. ಹೀಗಿದ್ದೂ ಕೂಡ ಮಂಜೂರಾಗಿರುವ ಮನೆಗಳಲ್ಲಿ ಶೇಕಡ 30 ರಷ್ಟು ಮನೆಗಳ ನಿರ್ಮಾಣ ಕಾರ್ಯ ಇನ್ನೂ ಮುಗಿದಿಲ್ಲ ಎಂದು ಸಚಿವರು ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.

 

 

 

Leave a Reply

Your email address will not be published. Required fields are marked *