ಜನರ ಕಷ್ಟಗಳಿಗೆ ಸ್ಪಂದಿಸದ ಶಾಸಕರ ವಿರುದ್ಧ ಎಂಎಲ್ ಸಿ ನವೀನ್ ಆಕ್ರೋಶ

ರಾಜ್ಯ

ಗಂಭೀರವಾದ ಘಟನೆಗಳು ನಡೆದಾಗ ಸ್ಥಳೀಯದಲ್ಲಿ ಸ್ಥಳದಲ್ಲಿ ಶಾಸಕರು ಇದ್ದು ಜನರ ಕಷ್ಟಗಳಲ್ಲಿ ಪಾಲುದಾರರಾಗಬೇಕು. ಆದರೆ ಚಿತ್ರದುರ್ಗದ ಸ್ಥಳೀಯ ಶಾಸಕರು ಇದುವರೆಗೂ ಕೂಡ ಬಂದು ಭೇಟಿ ನೀಡಿಲ್ಲ ಮತ್ತು ಮಕ್ಕಳ ಆರೋಗ್ಯವನ್ನು ಕೂಡ ವಿಚಾರಿಸಿಲ್ಲ ಇದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಅಸ್ವಸ್ಥರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮೃತ ಕುಟಂಬಗಳಿಗೆ ವೈಯುಕ್ತಿಕ ಧನ ಸಹಾಯ ಮಾಡಿ  ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು, ಚುನಾಯಿತ ಪ್ರತಿನಿಧಿಗಳು ಇಂತಹ ಸಂದರ್ಭದಲ್ಲಿ ಮೊದಲನೆಯವರಾಗಿ ಬಂದು ಜನರ ಕಷ್ಟಗಳನ್ನು ಅರಿತು ಸ್ಪಂದಿಸಬೇಕಾಗುತ್ತದೆ, ಇದು ಅವರ ಕರ್ತವ್ಯವೂ ಆಗಿದೆ. ಕಲುಷಿತ ನೀರನ್ನು ಸೇವಿಸಿ ಮೂರು ಜನರ ಸಾವಾಗಿದೆ, ಇದು ದೊಡ್ಡ ವಿಷಯವೇ. ಸಚಿವರಾಗಲಿ, ಶಾಸಕರಾಗಲಿ ಸ್ಥಳದಲ್ಲಿದ್ದು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಾಂತ್ವಾನ ಹೇಳುವ ಕೆಲಸ ಮಾಡಬೇಕಾಗಿತ್ತು, ಆದರೆ ಇದನ್ನು ಅವರು ಮಾಡಿಲ್ಲ, ಜನರಿಂದ ಮತ ಪಡೆದು ಗೆಲ್ಲುವುದು ಮುಖ್ಯವಲ್ಲ, ಅವರ ಕಷ್ಟಗಳಿಗೆ ಸ್ಪಂದಿಸಬೇಕು ಕೇವಲ ವಿಧಾನಸಭೆ ಮತ್ತು ಕಾರ್ಯಕಲಾಪಗಳಿಗೆ ಹೋಗುವುದಷ್ಟೇ ಅವರ ಕರ್ತವ್ಯವಲ್ಲ ಅದರ ಜೊತೆಜೊತೆಗೆ ಕಷ್ಟಗಳಿಗೂ ಸ್ಪಂದಿಸುವಂತ ಕೆಲಸವಾಗಬೇಕು ಆದರೆ ಶಾಸಕರು ಕೆಲಸವನ್ನು ಮಾಡಿಲ್ಲ ಇದನ್ನು ನಾವು ಖಂಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕು. ನಾಮಕಾವಸ್ತೆಗೆ ಯಾರೋ ಒಬ್ಬರನ್ನು ಅಮಾನತ್ತು ಮಾಡುವುದಲ್ಲ, ಬದಲಿಗೆ ನಗರಸಭೆ ಆಯುಕ್ತರು, ಇಂಜಿನಿಯರ್ ಗಳ ಮೇಲೆ ಕ್ರಮ ಜರುಗಿಸಬೇಕು, ಮೃತ ಕುಟುಂಬಗಳಿಗೆ ಕೂಡಲೇ ಸರ್ಕಾರ ಪರಿಹಾರ ಘೋಷಿಸಬೇಕು. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಏನಿದೆ ಎಂದು ತಿಳಿದು ಅದರ ವ್ಯವಸ್ಥೆ ಮಾಡಬೇಕು, ಮೃತರು ಹಾಗೂ ಅಸ್ವಸ್ಥರ ಸಾಂತ್ವಾನ ಹೇಳಲು ಸಿಎಂ ಮತ್ತು ಸಂಬಂಧಪಟ್ಟ ಸಚಿವರುಗಳು  ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದರು.

 

 

Leave a Reply

Your email address will not be published. Required fields are marked *