ಹಣ ಇದ್ದವರಿಗೆ ಮಾತ್ರ ಮೆಡಿಕಲ್ ಮತ್ತು ಇನ್ನಿತರ ಉನ್ನತ ಪದವಿ ಕೋರ್ಸ್ ಗಳು ಎನ್ನುವಂತಾಗಿದೆ: ಬಸವ ಕುಮಾರ ಶ್ರೀಗಳು

ರಾಜ್ಯ

 

ಚಿತ್ರದುರ್ಗ:  ವೃತ್ತಿಪರ ಕೋರ್ಸಗಳಿಗೆ ಸಾಮಾನ್ಯ, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಇದ್ದರೆ ಅವರಿಂದ ನಿರೀಕ್ಷಿತ ಪ್ರಮಾಣದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ, ನೇಮಿಸಿದಲ್ಲಿ, ಆಯಾ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಸೇವೆಯನ್ನು ತೆಗೆದುಕೊಳ್ಳಬಹುದು. ಆದರೆ ಅದು ಈಗ ಆಗುತ್ತಿಲ್ಲ. ಕೇವಲ ಹಣ ಇದ್ದವರಿಗೆ ಮಾತ್ರ ಮೆಡಿಕಲ್ ಮತ್ತು ಇನ್ನಿತರ ಉನ್ನತ ಪದವಿ ಕೋರ್ಸ್ ಗಳು ಎನ್ನುವಂತಾಗಿದೆ. ಮೇಲೆ ಹೇಳಿದಂತೆ ಬಡ, ಮಧ್ಯಮ ಹಾಗೂ ಸಾಮಾನ್ಯ ವಿದ್ಯಾರ್ಥಿಗಳ ಪ್ರತಿಭೆ ಇದರಿಂದ ಕಮರುತ್ತಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರು ವಿಷಾದ ವ್ಯಕ್ತಪಡಿಸಿದರು.

 

 

ಅವರು ನಗರದ ಎಸ್ ಜೆ ಎಮ್ ಪಾಲಿಟೆಕ್ನಿಕ್ (ಅನುದಾನಿತ)ನಲ್ಲಿ 2024 -25 ನೇ ಸಾಲಿನ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ನೋಡಿ ಬಹುತೇಕರು ಮೆಡಿಕಲ್, ಇಂಜಿನಿಯರಿಂಗ್ ಇತರೆ ಕೋರ್ಸ್ಗಳತ್ತ ಮುಖ ಮಾಡಿ ಅದರಲ್ಲಿ ಅರ್ಧ ಆಯುಷ್ಯ ಕಳೆಯುತ್ತಾರೆ ಸೋಜಿಗ ಎಂದರೆ ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಡಿಪ್ಲೋಮೋ, ಐಟಿಐ ಇತರೆ ವೃತ್ತಿಪರ ಕೋರ್ಸ್ ಗಳು ಅಧ್ಯಯನದ ಅವಧಿಯಲ್ಲಿರುವಾಗಲೇ ನಿಮ್ಮನ್ನು 19 ರಿಂದ 20 ವರ್ಷಕ್ಕೆ ಕೆಲಸ ಕೊಡಲು ಕೈಬೀಸಿ ಕರೆಯುತ್ತವೆ. ಎಂಬಿಬಿಎಸ್ ಎಂ ಡಿ ಅದರಲ್ಲೇ ಕಾಲ ಕಳೆದಂತೆ ಆಗುತ್ತದೆ ಎಂದ ಅವರು ದುಬಾರಿ ಖರ್ಚು ಮಾಡಿ ವಿಜ್ಞಾನ ವಿಷಯ ತೆಗೆದುಕೊಂಡು ಅದರಲ್ಲಿ ಸರಿಯಾದ ಅಂಕ ಬರದೇ ಸಿಇಟಿ ನೀಟ್ ಜೇ ಡಬಲ್ ಇ ಪರೀಕ್ಷೆಗಳಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಅಂಕ ಬರದೆ ಮತ್ತೆ ಪುನಃ ಧೀರ್ಘಾವದಿಯ ತರಬೇತಿ ಪ್ರವೇಶ ಪಡೆಯುವವರು. ಅದಕ್ಕೆ ತಕ್ಕ ಹಾಗೆ ಈಗ ಅನೇಕ ಕೋಚಿಂಗ್ ಸೆಂಟರ್ ಗಳು ಗಲ್ಲಿಗಲ್ಲಿಗೆ ಹುಟ್ಟಿಕೊಂಡಿವೆ. ಪೋಷಕರು ,ವಿದ್ಯಾರ್ಥಿಗಳು ಶಿಕ್ಷಣದಲ್ಲಿ ವ್ಯತ್ಯಾಸ ಇಲ್ಲ ಎನ್ನುವುದನ್ನು ಅರಿತು ನಾವು ತೆಗೆದುಕೊಂಡ ವಿಷಯಗಳಲ್ಲಿ ಸರಿಯಾದ ಕ್ರಮದ ಮೂಲಕ ಅಧ್ಯಯನ ಮಾಡಿ ಪರಿಣಿತಿ ಪಡೆಯುತ್ತ ನಮ್ಮ ಚಿತ್ತ ಅರಿಯಬೇಕಿದೆ ಎಂದು ಕಿವಿಮಾತು ಹೇಳಿದರು. ವಿದ್ಯಾವಂತರು ಬಹಳ ಜನರಿದ್ದಾರೆ. ಅವರಿಂದ ಸಮಾಜಕ್ಕೆ ಈ ನಾಡಿಗೆ ಯಾವ ರೀತಿಯ ಉಪಕಾರವಾಗುತ್ತದೆ ಎನ್ನುವುದು ಮುಖ್ಯ .ಕೇವಲ ಹಣ ಸಂಪಾದನೆ ನಮ್ಮ ನಿಮ್ಮ ಗುರಿಯಾಗಬಾರದು. ಗುಣ ಸಂಪಾದನೆಯೂ ಮುಖ್ಯವಾಗಬೇಕು. ಅದರೊಂದಿಗೆ ನಾವು ನಮ್ಮ ದೇಶ ಸಶಕ್ತ,ಸದೃಢ, ಸಮೃದ್ಧವಾಗುವಂತಹ ಯೋಜನೆಗಳನ್ನು ರೂಪಿಸುವಲ್ಲಿ ನಮ್ಮಲ್ಲಿನ ಪ್ರತಿಭೆಯನ್ನು ಧಾರೆ ಎರೆಯಬೇಕಿದೆ ಎಂದು ದೇಶ ಪ್ರೇಮ ರೂಡಿಸಿಕೊಳ್ಳುವ ಬಗ್ಗೆ ಹೇಳಿದ ಶ್ರೀಗಳು ಸರ್ ಎಂ .ವಿಶ್ವೇಶ್ವರಯ್ಯ ಮುಂತಾದ ದಾರ್ಶನಿಕರ ತತ್ವಾದರ್ಶಗಳ ಬಗ್ಗೆ ನೀವು ಅಭ್ಯಾಸ ಮಾಡಬೇಕು. ಅದು ಕಾಲೇಜುಗಳಲ್ಲಿಯೂ ಆ ಬಗ್ಗೆ ಪೂರಕ ವಾತಾವರಣ ಕಲ್ಪಿಸಬೇಕಿದೆ. ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಕ್ರಿಯಾಶೀಲತೆಯನ್ನು ರೂಡಿಸಿಕೊಂಡರೆ ಒಳ್ಳೆಯ ಮಾರ್ಗ ಸಾಧ್ಯವಿದೆ .ಅವಿಧೇಯತೆ, ಕೆಟ್ಟ ಆಲೋಚನೆಯಿಂದ ಭವಿಷ್ಯದಲ್ಲಿ ಬೆಳವಣಿಗೆ ಕುಂಠಿತವಾಗುತ್ತವೆ ಎಂದರು. ಆಲೋಚಿಸುವುದಕ್ಕಿಂತ ಮುಂಚೆ ಆಲೋಚಿಸು, ಎನ್ನುವಂತೆ ತನ್ನನ್ನು ಸದಾ ತಿದ್ದಿಕೊಳ್ಳುವತ್ತ ಸಾಗಬೇಕಿದೆ. ನಮ್ಮ ಬದುಕಿಗೆ ಪ್ರೇರಕವಾದವುಗಳ ಕಡೆಗೆ ನಮ್ಮ ಗಮನಹರಿಸಿ ಮಾರಕ ಎನ್ನುವುದನ್ನು ಬಿಡಬೇಕು. ಒಳ್ಳೆಯ ಪುಸ್ತಕಗಳನ್ನು ಓದಿ.ಈ ನಿಮ್ಮ ಸಮಯ ಅಂದರೆ 16 ರಿಂದ 18 ವಯಸ್ಸು ಇದು ಕಲಿಕೆಗೆ ,ಸಾಧನೆಗೆ ಪ್ರಾಶಸ್ತ್ಯವಾದದ್ದು. ಈ ಸಂದರ್ಭವನ್ನು ನೀವು ಸದುಪಯೋಗ ಪಡಿಸಿಕೊಳ್ಳಬೇಕು. ವಯಸ್ಸು- ಉಮ್ಮಸ್ಸು ಇದರಿಂದ ಶ್ರೇಯಸ್ಸು ಪ್ರಾಪ್ತವಾಗುತ್ತದೆ ಎಂದರು. ಹಾಗೆ ಈ ಯೌವ್ವನವನ್ನು ಕುವೆಂಪು ಅವರು ಸನ್ನಿಧಿ ಅಂತ ಕರೆದಿದ್ದಾರೆ. ಹಾಗೆ ನಾವು ನೀವು ನಮ್ಮ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನದಿಂದ ಇರುತ್ತಾ ಜೊತೆಗೆ ಉದ್ಯೋಗ ಇತರೆ ಸಂಪರ್ಕ ಸಾಧನೆಗಾಗಿ ಆಂಗ್ಲ ಭಾಷೆಯನ್ನು ರೂಡಿಸಿಕೊಳ್ಳಿ ,ಜೊತೆಗೆ ಪ್ರಚಲಿತ ವಿದ್ಯಮಾನಗಳ ಬಗೆಗೆ ಅರಿವು ಮೂಡಲು ದಿನಪತ್ರಿಕೆಗಳನ್ನು ತಪ್ಪದೇ ಓದಿ ಎನ್ನುವ ಮೂಲಕ, ಎರಡು ವಾರದ ಕಾರ್ಯಾಗಾರಕ್ಕೆ ದಿಕ್ಸೂಚಿ ಎನ್ನುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್ ಎಸ್ ಎಲ್ ಸಿ ಯಿಂದ ಬಂದಿದ್ದೀವಿ ಏನು ಎತ್ತ ಎಂಬ ಚಿಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಬಿಡಬೇಕು. ಅಂತಹುಗಳನ್ನ ಮನಸ್ಸಿನಿಂದ ದೂರ ಮಾಡಿಕೊಳ್ಳಲಿಕ್ಕೆ ಇಂತಹ ಕಾರ್ಯಾಗಾರ ಹಮ್ಮಿಕೊಂಡಿರುವುದು .ನಿಮ್ಮಲ್ಲಿನ ಭಯ, ಆತಂಕ, ದುಗುಡ ,ದುಮ್ಮಾನ ನಾವು ಬೇರೆ ಕಡೆಯಿಂದ ಬಂದಿದ್ದೇವೆ ಹೊಂದಿಕೊಳ್ಳುವುದು ಹೇಗೆ ಎಂಬ ಕೊರಗಿಗೆ ಈ ಎರಡು ವಾರ ಪೂರಕವಾದ ಮಾಹಿತಿ ನೀಡುತ್ತದೆ. ನಿಮ್ಮ ಹಾಗೆ ಈ ಕಾಲೇಜಿನಲ್ಲಿ ಓದಿದ ಸುಮಾರು 12 ಸಾವಿರ ವಿದ್ಯಾರ್ಥಿಗಳು ರಾಜ್ಯ, ದೇಶ ,ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮಲ್ಲಿ ಶಿಸ್ತು ಮತ್ತು ಅಧ್ಯಯನಕ್ಕೆ ಕಠಿಣ ಪ್ರರಿಶ್ರಮ ಅಗತ್ಯ. ಪೋಷಕರು ಕಾಲೇಜಿಗೆ ಸೇರಿಸಿದ ಮೇಲೆ ಕನಿಷ್ಠ ತಿಂಗಳು ಎರಡು ತಿಂಗಳಿಗೊಮ್ಮೆ ನಿಮ್ಮ ಮಗ- ಮಗಳ ಬಗ್ಗೆ ವಿಚಾರ ಮಾಡಿಕೊಂಡು ಹೋಗಲು ಕಾಲೇಜಿಗೆ ಬರಬೇಕೆಂದು ಹೇಳಿದರು.

Leave a Reply

Your email address will not be published. Required fields are marked *