ತಮಿಳುನಾಡು : ಇತ್ತೀಚೆಗೆ ಪ್ರೇಮ ವಿವಾಹ ಅನ್ನೋದು ಕಾಮನ್ ಆಗಿದೆ. ಪೋಷಕರು ಕೂಡ ಪ್ರೇಮ ವಿವಾಹಕ್ಕೆ ಸುಲಭದಲ್ಲೇ ಒಪ್ಪಿಗೆ ನೀಡುತ್ತಾರೆ. ಹೀಗಿರುವಾಗ ಪ್ರೀತಿ ವಿಚಾರವನ್ನು ಮನೆಯಲ್ಲಿ ಹೇಳದೆ, ಮದುವೆ ಮಂಟಪದವರೆಗೂ ಬಂದು ತಾಳಿ ಕಟ್ಟುವಂತ ಕಡೆ ಗಳಿಗೆಯಲ್ಲಿ ಪ್ರಿಯಕರನಿಗಾಗಿ ಮದುವೆ ಕ್ಯಾನ್ಸಲ್ ಮಾಡಿಕೊಂಡ ಘಟನೆ ನಡೆದಿದೆ.
ಹೌದು, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಇನ್ನೇನು ಕಡೆ ಕ್ಷಣದಲ್ಲಿ ತಾಳಿ ವರ ತಾಳಿಕಟ್ಟಬೇಕು, ಆ ಸಮಯದಲ್ಲಿ ನೆರೆದಿದ್ದ ಎಲ್ಲರಿಗೂ ಶಾಕ್ ನೀಡಿದ್ದು, ನನಗೆ ಮದುವೆ ಬೇಡ ಎಂದಿದ್ದಾಳೆ. ಪ್ರೀತಿಸುತ್ತಿದ್ದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ್ದು, ಕೊನೆ ಕ್ಷಣದ ನಿರ್ಧಾರ ನೋಡಿ ವರ ಕೂಡ ದಂಗಾಗಿದ್ದಾನೆ.
ವರ ತಾಳಿ ಕಟ್ಟೋದಕ್ಕೆ ಹೋದಾಗ ಇನ್ನೊಂದು ಅರ್ಧ ಗಂಟೆ ಕಾಯಿರಿ, ನಾನು ಪ್ರೀತಿಸಿದ ಹುಡುಗ ಮದುವೆ ಮನೆಗೆ ಬರುತ್ತಾನೆ. ನಾನು ಅವನನ್ನೇ ಮದುವೆಯಾಗುತ್ತೇನೆ ಎಂದಿದ್ದಾಳೆ. ಯುವತಿಯ ಮಾತಿಗೆ ಕೆಂಡಮಂಡಲರಾದ ಪೋಷಕರು ಬುದ್ಧಿ ಹೇಳಲು ಪ್ರಯತ್ನಿಸಿದ್ದಾರೆ. ಯಾರ ಮಾತನ್ನು ಕೇಳದ ಯುವತಿ ಒಂದೇ ಸಮನೆ ಹಠ ಮಾಡಿದ್ದಾಳೆ. ಕೊನೆಗೆ ಮಂಟಪದಿಂದ ವರ ಕಾಲ್ತೆಗೆದಿದ್ದಾನೆ.
ಅತ್ತ ವರ ಹೊರ ನಡೆದ್ರೆ ಇತ್ತ ಪ್ರಿಯಕರ ಎಷ್ಟೇ ಕಾದರೂ ಮಂಟಪಕ್ಕೆ ಬರಲೇ ಇಲ್ಲ. ಇನ್ನಷ್ಟು ಕೋಪಗೊಂಡ ಪೋಷಕರು ಕೂಡ ವಧುವನ್ನು ಬಿಟ್ಟು ಹೊರ ನಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.