ಸಿದ್ದರಾಮಯ್ಯ ವಾಲ್ಮೀಕಿ ಜಯಂತಿಯಂದೆ ರಾಜೀನಾಮೆ ನೀಡಲಿ : ಎಸ್ ನವೀನ್ ಆಗ್ರಹ

ರಾಜ್ಯ

 

ಸಿದ್ದರಾಮಯ್ಯ ವಾಲ್ಮೀಕಿ ಜಯಂತಿಯಂದೆ ರಾಜೀನಾಮೆ ನೀಡಲಿ : ಎಸ್ ನವೀನ್ ಆಗ್ರಹ

ಚಿತ್ರದುರ್ಗ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿಮಾತಾಡಿದ, ಎಂ.ಎಲ್.ಸಿ ಕೆ.ಎಸ್ ನವೀನ್, ಶ್ರೀ ವಾಲ್ಮೀಕಿ ರಚಿಸಿರುವ ರಾಮಾಯಣ ನಮ್ಮ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ.ಬಿಜೆಪಿ ಪಕ್ಷದ ಸರ್ಕಾರದ ಅವಧಿಯಲ್ಲಿ ಎಸ್‍ಟಿ ವರ್ಗದ ಜನರಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 7-8 ತಿಂಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂ ಹಗರಣ ಮಾಡಿದ್ದಾರೆ.ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸ್ವಂತ ಬಳಕೆಗೆ ಮಾಡುವ ಜೊತೆಗೆ ಲೋಕಸಭಾ ಚುನಾವಣೆ ಹಾಗೂ ತೆಲಂಗಾಣ ಚುನಾವಣೆಗೆ ಬಳಕೆಯಾಗಿರೋದು ಸ್ಪಷ್ಟವಾಗಿ ಗೋಚರವಾಗುತ್ತದೆ. ಹಣವನ್ನು ಅವರು ತಮ್ಮ ಐಷಾರಾಮಿ ಜೀವನ ನಡೆಸುವುದಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿದರು.

 

 

ಸಿದ್ದರಾಮಯ್ಯ ಅಥವಾ ಈ ಸರ್ಕಾರಕ್ಕೆ ಶ್ರೀ ವಾಲ್ಮೀಕಿ ಜಯಂತಿ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ.ಎಸ್‍ಟಿ ಸಮುದಾಯದ ವಿದ್ಯಾರ್ಥಿಗಳ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಸಿದ್ದರಾಮಯ್ಯ ಹಾಗೂ ಸರ್ಕಾರ ಎಸ್‍ಟಿ ಸಮುದಾಯದ ಯುವಕರನ್ನು ವಿದ್ಯಾರ್ಥಿಗಳನ್ನು ಕ್ಷಮೆ ಕೇಳಬೇಕಿತ್ತು.ಸರ್ಕಾರದಲ್ಲಿ ಹಣವನ್ನು ಬಳಸಿಕೊಂಡು ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಎಸ್ಟಿ ಹಣವನ್ನು ದುರ್ಬಳಕೆ ಮಾಡಿಕೊಂಡು ಬಳ್ಳಾರಿ ಹಾಗೂ ರಾಯಚೂರು ಲೋಕಸಭಾ ಚುನಾವಣೆಗೆ ಎಸ್ಟಿ ಸಮುದಾಯದ ಹಣ ಖರ್ಚು ಮಾಡಿದೆ. ನಾಯಕ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನ ಮೋಜು ಮಾಡಿದ್ದಾರೆಂದು ಇ ಡಿ ತನಿಖೆ ಮೂಲಕ ಗೊತ್ತಾಗಿದೆ. ನಾಯಕ ಜನಾಂಗದ ಜನ ಬಳಿ ಹೋಗಿ ಕ್ಷಮೆಯನ್ನ ಕೇಳಿ ವಾಲ್ಮೀಕಿ ಜಯಂತಿ ಮಾಡಬೇಕಿತ್ತು. ಅದ್ರೇ ಕಾಂಗ್ರೆಸ್ ಸರ್ಕಾರಕ್ಕೆ ಜಾಹೀರಾತು ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದು ವಾಲ್ಮೀಕಿ ಜಯಂತಿಯಂದೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಂಡವರ ಮಕ್ಕಳನ್ನ ಬಲಿ ಕೊಡುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ ಎಂದು ತೋರಿಸಿದ್ದಾರೆ. ಸಿನಿಮಾಗಳಲ್ಲಿ ಗುಂಪಿನ ಹಿಂದೆ ಒಬ್ಬ ಸೂತ್ರದಾರ ಇರುವ ಹಾಗೆ ಸಿದ್ದರಾಮಯ್ಯ ಇದ್ದು, ಸಿ ಎಂ ಸಿದ್ದರಾಮಯ್ಯ ಅವರನ್ನ ಹಗರಣಗಳ ನಾಯಕ ಎಂದು ಕೆ ಎಸ್ ನವೀನ್ ಆರೋಪಿಸಿದ್ದಾರೆ.
ವಾಲ್ಮೀಕಿ ಹಗರಣದಲ್ಲಿ ಸಚಿವ ನಾಗೇಂದ್ರರವರ ರಾಜೀನಾಮೆ ಪಡೆಯಲಾಯಿತು.ಮುಡ ಹಗರಣದಲ್ಲಿ ಸಿದ್ದರಾಮಯ್ಯನವರು ನೇರವಾಗಿ ಕಾರಣರಿದ್ದರೂ ಸಹ ಕೇವಲ ಅಧಿಕಾರಿಗಳನ್ನು ಮಾತ್ರ ಅಮಾತ್ತು ಗೊಳಿಸಲಾಗಿದೆ.ಸಿದ್ದರಾಮಯ್ಯರವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ 187 ಕೋಟಿ ಅಲ್ಲ 89 ಕೋಟಿ ರೂ ಎಂದು. ಇಷ್ಟೆಲ್ಲಾ ಹಗರಣ ಮಾಡಿರೋ ಸಿದ್ದರಾಮಯ್ಯನವರೇ ಈ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಹೇಗೆ ಭಾಗವಹಿಸುತ್ತೀರಿ.? ಎಂದು ಪ್ರಶ್ನಿಸಿದರು. ನಗರದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ 30 ಎಕರೆ ಜಮೀನು ಬೇಕಾಗಿದೆ. ಅದನ್ನು ಜಿಲ್ಲಾಡಳಿತ ನೀಡಿದರೆ ನಮ್ಮ ನಾಯಕರಾದ ಅಮಿತ್ ಶಾ ನೀಡಿದ ಭರವಸೆಯನ್ನು ಈಡೇರಿಸಲಿದ್ದೇವೆ.ಪ್ರವಾಸೋದ್ಯಮ ಇಲಾಖೆಯ ಭೂಮಿ ಯಾರ ಒಡೆತನಕ್ಕೆ ಸೇರಿದೆ ಎಂಬುದು ಮಾಹಿತಿ ನೀಡುತ್ತಿಲ್ಲ.ತಿಮ್ಮಣ್ಣನಾಯಕನ ಕೆರೆಯಲ್ಲಿ ಜಮೀನು ಸಿಗುತ್ತೆ ಅಲ್ಲಿ ನಿರ್ಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.ಇನ್ನೂ ವಾಲ್ಮೀಕಿ ಜಯಂತಿಯಂದೆ ವಾಲ್ಮೀಕಿ ಪ್ರತಿಮೆ ಮುಂದೆಯೇ ನಿಂತು ರಾಜೀನಾಮೆ ನೀಡಬೇಕು ಎಂದು ಎಂ ಎಲ್ ಸಿ ಕೆ ಎಸ್ ನವೀನ್ ಆಗ್ರಹ ಮಾಡಿದ್ದಾರೆ.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸÀಂಪತ್ ಕುಮಾರ್, ಮಾಧುರಿ ಗಿರೀಶ್,ವಕ್ತಾರ ನಾಗರಾಜ್ ಬೇದ್ರೇ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *