ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ: ಛಲವಾದಿ ನಾರಾಯಣಸ್ವಾಮಿ

ರಾಜ್ಯ

ಗವರ್ನರ್ ಪ್ರಾಸಿಕ್ಯೂಷನ್‍ಗೆ ಏಕೆ ಕೊಟ್ಟರೆಂದು ಕೇಳುವ ಅಧಿಕಾರ ಇಲ್ಲ. ಕಾನೂನು ಮೂಲಕ ಸಿದ್ಧರಾಮಯ್ಯ ಹೋರಾಟ ಮಾಡಲಿ. ಅಲ್ಲಿಯವರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಆರೋಪ ಸುಳ್ಳು ಎಂದು ಸಾಬೀತಾದಾಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರ ಅನುಮತಿ ವಿಚಾರಕ್ಕೆ, ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ಬಿ.ಎಸ್.ವೈ ವಿಚಾರದಲ್ಲಿ ಅಂದು ಕಾಂಗ್ರೆಸ್ ಸ್ವಾಗತಿಸಿತ್ತು.ಈಗ ರಾಜ್ಯಪಾಲರ ನಿರ್ಧಾರ ವಿರೋಧಿಸುವ ಬದಲು ಸ್ವಾಗತಿಸಬೇಕಿತ್ತು. ಸಿದ್ದರಾಮಯ್ಯರವರ ಬಳಿ ದೇಶಪ್ರೇಮವಿದೆ. ಈ ಆರೋಪವನ್ನು ಒಪ್ಪಿಕೊಂಡಿದ್ದರೆ ಭ್ರಷ್ಟಾಚಾರ ವಿರೋಧಿಗಳೆನ್ನಬಹುದಿತ್ತು. ಈ ರೀತಿ ಪ್ರತಿಭಟಿಸಿದರೆ, ಭ್ರಷ್ಟಾಚಾರಕ್ಕೆ ಅವಕಾಶ ಕೊಡಿ ಎಂದಾಗುತ್ತದೆ. ಸಿಎಂ ಸಿದ್ಧರಾಮಯ್ಯ ಭ್ರಷ್ಟಾಚಾರ ಈಗ ಬಯಲಾಗಿದೆ ಎಂದರು.

187 ಕೋಟಿ ರೂ ಎಸ್.ಟಿ ಸಮುದಾಯದ ಹಣ ಕಬಳಿಕೆ ಮಾಡಿ ಚುನಾವಣೆಗೆ, ಲ್ಯಾಂಬರ್ ಗಿನಿ ಕಾರ್ ಖರೀದಿಗೆ ಹಣ ಬಳಕೆ ಮಾಡಿದ್ದಾರೆ.ವೈನ್ ಶಾಪ್ ಖಾತೆಗೆ, ಚಿನ್ನ ಖರೀದಿ ಮಾಡಿದ್ದಾರೆ, ಜಮೀನು ಖರೀದಿಗೆ ಎಸ್.ಟಿ ನಿಗಮದ ಹಣ ವರ್ಗಾವಣೆ ಆಗಿದೆ. ದಲಿತನಿಗೆ ಸೇರಬೇಕಾದ ಜಮೀನ ಪರಿಹಾರ ಸಿಎಂ ಪಡೆದಿದ್ದಾರೆ.ಅದು ಸರ್ಕಾರದ ಜಮೀನಾಗಿತ್ತು, ಇವೆಲ್ಲ ಭ್ರಷ್ಟಾಚಾರದ ಭಾಗ.ಸಿಎಂ ರಾಜೀನಾಮೆ ಕೊಡಲ್ಲ ಎಂದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ಧರಾಮಯ್ಯ ಇನ್ನೋರ್ವ ಕೇಜ್ರಿವಾಲ್ ಆಗೋದಾದರೆ ಆಗಲಿ.ಕೋರ್ಟ್ ನಲ್ಲಿ ನ್ಯಾಯ ಪಡೆದು ಮತ್ತೆ ಬನ್ನಿ ತೊಂದರೆ ಇಲ್ಲ. ಸಿಎಂ ಸ್ಥಾನದಲ್ಲಿದ್ದರೆ ಪ್ರಕರಣ ಮುಚ್ಚಿ ಹಾಕುವ ಸಂದರ್ಭ ಇರುತ್ತದೆ ಎಂದು ದೂರಿದರು.

 

 

ಸಿಎಂ ಸಿದ್ಧರಾಮಯ್ಯ ಬಂಧನ ಆಗಲೇಬೇಕಾಗುತ್ತದೆ.ಬಂಧನ ಆಗದೆ ತನಿಖೆ ಹೇಗೆ ಎದುರಿಸುತ್ತೀರಿ.?ಬಿಎಸ್ ವೈ ಪ್ರಕರಣದಲ್ಲಿ ರಾಜ್ಯಪಾಲರು ಕಾನೂನು ಪಾಲನೆ ಮಾಡಬೇಕು ಎಂದಿದ್ದೀರಿ.ಈಗ ರಾಜ್ಯಪಾಲರು ಕಾನೂನು ಉಲ್ಲಂಘಿಸಿದ್ದಾರೆ ಎನ್ನುತ್ತೀರಿ.ಗೃಹ ಸಚಿವ ಪರಮೇಶ್ವರ್‍ ಅವತ್ತು ಗೊತ್ತಿರಲಿಲ್ಲವೇ ಸಂವಿಧಾನದ ಹುದ್ದೆಯಲ್ಲಿರುವವರಿಗೆ ಗೌರವಿಸುವುದು ಕಲಿಯಿರಿ. ಕಾಂಗ್ರೆಸ್ ಕಾಲದಲ್ಲಿ ಅನೇಕ ರಾಜ್ಯ ಸರ್ಕಾರಗಳ ವಜಾ ಮಾಡಲಾಗಿತ್ತು. ಆದರೆ ಬಿಜೆಪಿ ಕಾಲದಲ್ಲಿ ಯಾವುದೇ ರಾಜ್ಯ ಸರ್ಕಾರವನ್ನೂ ಬೀಳಿಸಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಲಾಗುತ್ತದೆ.ಹೆಚ್.ಡಿ.ಕೆ, ನಿರಾಣಿ, ಜೊಲ್ಲೆ ಕೇಸ್ ಪ್ರಾಸಿಕ್ಯೂಷನ್‍ಗೆ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋರ್ಟ್‍ಗೆ ಹೋಗಿ ಈ ಬಗ್ಗೆ ಪ್ರಶ್ನೆ ಮಾಡಲಿ, ರಾಜ್ಯಪಾಲರಿಗೆ ದಾಖಲೆ ಅವಲೋಕಿಸಿ ನಿರ್ಧಾರಿಸುವ ಹಕ್ಕಿದೆ.ಅವರಿಗೇಕೆ ಕೊಟ್ಟಿಲ್ಲ, ನಮಗೇಕೆ ಕೊಟ್ಟಿರೆನ್ನುವುದು ಮಕ್ಕಳಾಟ.ಯೋಗ್ಯವಲ್ಲದ ಪ್ರಕರಣ ಪ್ರಾಸಿಕ್ಯೂಷನ್ ಕೊಟ್ಟಿರಲಿಕ್ಕಿಲ್ಲ.ಇಡೀ ರಾಜ್ಯ ಹೋರಾಟ ಮಾಡುವಾಗ ರಾಜ್ಯಪಾಲ ಕೈಕಟ್ಟಿರಬೇಕಾ…? ಎಂದರು.

136 ಜನ ಶಾಸಕರಿದ್ದಾರೆಂದು ಹೇಳುತ್ತೀರಿ. ಹೋಗಿ ಅವರಂತೆ ಅವಿವೇಕೆತನದಿಂದ ಮಾತಾಡಬೇಡಿ, ವಿವೇಕದಿಂದ ಮಾತಾಡಿ. ಸಂವಿಧಾನ, ಪ್ರಜಾಪ್ರಭುತ್ವ, ಅಂಬೇಡ್ಕರ್ ಬಗ್ಗೆ ಗೌರವ ಇದ್ದರೆ ರಾಜೀನಾಮೆ ಕೊಡಿ, ನ್ಯಾಯಾಲಯಕ್ಕೆ ಹೋಗಿ ಹೋರಾಟ ಮಾಡಿ ತಡ ಮಾಡದೆ ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ಕೊಡಲಿ ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಉತ್ತಮವಾದ ಮಳೆಯಾಗಿದೆ, ಅದೇ ರೀತಿ ವಿವಿಧ ಕಡೆಗಳಲ್ಲಿ ಆನಾಹುತವಾಗಿದೆ. ಕೆಲವಡೆಗಳಲ್ಲಿ ಮನೆಗಳು ಹಾಳಾಗಿವೆ, ಹೊಲದಲ್ಲಿ ಬೆಳೆ ಕೊಚ್ಚಿಹೋಗಿದೆ, ಸಿಡಿಲಿನ ಬಡಿತಕ್ಕೆ ಕುರಿಗಳ ಸಾವಾಗಿದೆ, ಸರ್ಕಾರ ಇವುಗಳನ್ನು ಪರಿಶೀಲಿಸಿ ಅನಾಹುತಕ್ಕೆ ತಕ್ಕಂತೆ ಪರಿಹಾರವನ್ನು ನೀಡಬೇಕಿದೆ ಈ ಕಾರ್ಯ ಶೀಘ್ರವಾಗಿ ಆಗಬೇಕಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ವರದಿ ತರಿಸಿಕೊಂಡು ಶೀಘ್ರ ಪರಿಹಾರ, ನೀಡುವ ಕಾರ್ಯ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಜಿ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ವಕ್ತಾರ ದಗ್ಗೆ ಶಿವಪ್ರಕಾಶ್, ಶಿವಣ್ಣಚಾರ್, ತಿಪ್ಪೇಸ್ವಾಮಿ ಛಲವಾದಿ, ಭಾರ್ಗವಿ ದ್ರಾವಿಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *