ಸೌತ್ ಆಫ್ರಿಕಾ ಮಣಿಸಿ T20 world cup ಮುಡಿಗೇರಿಸಿಕೊಂಡ ಭಾರತ

ದೇಶ

ಹರಿಣಗಳ ‌ಮಣಿಸಿ  ಟಿ ಟ್ವೆಂಟಿ ವರ್ಲ್ಡ್ ಕಪ್ ನ್ನು ಮುಡಿಗೇರಿಸಿಕೊಂಡ ಭಾರತ

 

 

ಹರಿಣಗಳ ವಿರುದ್ಧದ ರೋಚಕ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ಐಸಿಸಿ ವರ್ಲ್ಡ್ ಕಪ್ ನ್ನು ಮುಡಿಗೇರಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 177 ರನ್ ಗಳಿಸಿತ್ತು. ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಶಿವಂದುಭೆ ಹಾಗೂ ಅಕ್ಸರ್ ಪಟೇಲ್ ಇಂದಿನ‌ ಪಂದ್ಯಕ್ಕೆ ಆಧಾರವಾಗಿ‌ ನಿಂತು ಆಡಿದರು.
ಸೌತ್ ಆಫ್ರಿಕಾವು ಭಾರತ ನೀಡಿದ 177 ರನ್ ಗಳ ಗುರಿಯನ್ನು ತಲುಪಲು‌ ವಿಫಲವಾಯ್ತು.ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಹೆಂಡ್ರಿಕ್ಸ್ 4 ರನ್ ಗಳಿಸಿ ಬುಮ್ರ ಬೌಲಿಂಗ್ ನಲ್ಲಿ‌ನ.ಬೋಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.ನಂತರ ನಾಯಕ ಐಡೆನ್ ಮಾರ್ಕರಂ ಅವರ ಕೂಡ ಆರ್ಶ್ ದೀಪ್ ಸಿಂಗ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಕ್ಯಾಚ್ ನೀಡುವ ಮೂಲಕ ಒಪ್ಪಿಸಿದರು.

ಭಾರತದ ಬೌಲರ್ ಗಳನ್ನು ಕಾಡಿದ ಕ್ಲಾಸೆನ್ : ಪಂದ್ಯದ ಮಧ್ಯದಲ್ಲಿ‌ ಆಡಲು‌ ಬಂದ ಕ್ಲಾಸೆನ್ ಅವರು ಬೀಸಾಟವಾಡುವ ಮೂಲಕ ಪಂದ್ಯದ ದೆಸೆಯನ್ನೆ ಬದಲಿಸಿದರು. ಅವರು ಚೈನಾಮನ್ ಕುಲ್ದೀಪ್ ಯಾದವ್ ಹಾಗು ಅಕ್ಸರ್ ಪಟೇಲ್ ಅವರ ಮೇಲೆ ಸವಾರಿ‌ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ಕಡೆಗೆ ಪಂದ್ಯ ವಾಲುವಂತೆ ಮಾಡಿದ್ದರು. ಅಂತಿಮವಾಗಿ ಕ್ಲಾಸೆನ್ ಅವರು ವರ್ಲ್ಡ್ ಕಪ್ ಮೊದಲ ಅತೀ‌ ವೇಗದ ಅರ್ಧ ಶತಕ ಪೂರೈಸಿ, ನಂತರ ಹಾರ್ಧಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು. ಪಂದ್ಯದ ಕೊನೆಯ ಓವರ್ ಮಾಡಲು ಬಂದ ಹಾರ್ದಿಕ್ ಪಾಂಡ್ಯಾ, ಪಂದ್ಯದ ಗತಿಯನ್ನೆ ಬದಲಿಸುವ ಸಾಮಾರ್ಥ್ಯ ಇದ್ದ ದೇವಿಡ್ ಮಿಲ್ಲರ್ ಅವರನ್ನು‌ ಔಟ್ ಮಾಡುವ ಮೂಲಕ ಮತ್ತೆ ಪಂದ್ಯ ಭಾರತದ ಕಡೆಗೆ ತರುವಲ್ಲಿ‌ಪಂದ್ಯ ಗೆಲ್ಲಿಸುವಲ್ಲಿ ಯಶಸ್ವಿಯಾದರು.
ಇದಕ್ಕೂ‌ ಮುನ್ನ ಟಾಸ್ ಗೆದ್ದು ಮೊದಲು‌ ಬ್ಯಾಟ್ ಮಾಡಲು‌ ಬಂದ ಭಾರತ ಪವರ್ ಪ್ಲೇ ಒಳಗೆಡೆಯೇ ಪ್ರಮುಖ‌ ಮೂರು ವಿಕೆಟ್ ‌ಕಳೆದುಕೊಂಡು ಆತಂಕಕ್ಕೆ‌ ಸಿಲುಕಿತ್ತು. ಆದರೆ ಕಿಂಗ್ ಕೊಹ್ಲಿ ಮತ್ತು ಅಕ್ಸರ್ ಪಟೇಲ್ ಜೋಡಿಯಾಗಿ 54 ಎಸೆತಗಳಲ್ಲಿ 72 ರನ್ ಗಳಿಸಿದರು.ವರ್ಲ್ಡ್ ಕಪ್ ಅರಂಭದಿಂದಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿಕೊಂಡು‌ ಬಂದಿದ್ದ ಕೊಹ್ಲಿ ಇಂದು ಸ್ಪೋಟಕ‌ ಬ್ಯಾಟಿಂಗ್ ನೆಡೆಸಿದರು. 59 ಎಸೆತಗಳನ್ನು ಎದುರಿಸಿ 6 ಬೌಂಡರಿ, 2 ಸಿಕ್ಸರ್ ಗಳನ್ನು ಗಳಿಸಿ‌ ಒಟ್ಟು 76 ಓಟಗಳನ್ನು‌ ಕದಿಯುವ ಮೂಲಕ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾದರು.

Leave a Reply

Your email address will not be published. Required fields are marked *