ವೈಯುಕ್ತಿಕ ನಿಂದನೆ ಮಾಡುತ್ತಿರುವವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ

ರಾಜ್ಯ

ನನ್ನ ಮೇಲೆ ಆರೋಪ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಮಾರ್ಗದರ್ಶಕರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕಳೆದ ನಾಲ್ಕೈದು ದಿನಗಳಿಂದ ನನ್ನ ಮೇಲೆ ವೈಯಕ್ತಿಕವಾಗಿ ಸುರೇಶ್ ಬಾಬು @ ಸೈಟ್ ಬಾಬಣ್ಣ ಹಾಗೂ ಇತರೆ ಕೆಲವರು, ವೈಯುಕ್ತಿಕ ವಿಷಯಗಳನ್ನಿಟ್ಟುಕೊಂಡು ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ನೆನ್ನೆಯು ಸಹ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ಯಾವುದೋ ಆಡಿಯೋ ವೈರಲ್ ಆಗಿದೆ ಎಂದು ಹೇಳಿ ಡಿ.ಸಿ ಕಛೇರಿಗೆ ಹಾಗೂ ಡಿ.ವೈ.ಎಸ್.ಪಿ ದೂರು ನೀಡಿದ್ದಾರೆ.ನಾನು ಯಾವುದೋ ಮುಸ್ಲಿಂ ಸಂಘಟನೆಗಳ ಜೊತೆ ಸೇರಿ ಸಂಘ ಪರಿವಾರದ ಕಾರ್ಯಕರ್ತರಿಗೆ ಬೆದರಿಕೆವೊಡ್ಡಿ ಮೂರು ಕೋಟಿ ರೂಪಾಯಿಗಳ ಡೀಲ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅದರಲ್ಲಿ ಸ್ಪಷ್ಟವಾಗಿ ಇದೆ ನನ್ನ ಜೊತೆ ಮಾತನಾಡಿರುವುದು ಯಾವುದೇ ಮುಸ್ಲಿಂ ಸಂಘಟನೆಯವರಲ್ಲ, ನನ್ನ ಜೊತೆ ಮಾತನಾಡಿರುವುದು ಮುಸ್ಲಿಂ ಸಂಘಟನೆ ಜೊತೆ ಸೇರಿ ಡೀಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವ ಯರ್ರಿಸ್ವಾಮಿ ರವರ ಜೊತೆ ನಾನು ಮಾತಾಡಿದ್ದು, ನಮ್ಮ ಕುಟುಂಬ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿದರು.

 

 

ಅನಿಲ್ ಮೆಟಲ್ ಸ್ಟೋರ್‌ನ ಮಾಲೀಕರಾದ ಚಂದ್ರಕಾಂತ್ ಜೈನ್ ಹಾಗೂ ನಮ್ಮ ಮಧ್ಯೆ ಸುಮಾರು 50 ವರ್ಷಗಳಿಂದ ಸ್ನೇಹ, ಸ್ನೇಹದ ಜೊತೆಗೆ ವ್ಯವಹಾರ ಇದೆ. ನನ್ನ ಸಹೋದರ ಚಂದ್ರಕಾಂತ್ ಜೈನ್ ರವರಿಗೆ ಹಣವನ್ನು ಸಾಲ ಸಹ ಕೊಡಿಸಿದ್ದರು. ಕೊಡಿಸಿದ ಸಾಲ ಹಿಂದುರುಗಿ ಕೊಡದೇ ಇದ್ದಾಗ. ವಾಪಾಸ್ ಕೇಳಿದಾಗ ಯರ್ರಿಸ್ವಾಮಿ ಎಂಬ ವ್ಯಕ್ತಿ ಅಡ್ಡಿ ಪಡಿಸುವ ಕೆಲಸ ಮಾಡಿದ್ದಾನೆ.ಅದನ್ನು ಯರಿಸ್ವಾಮಿಗೆ ಪರಿಚಯದ ಕಾರಣಕ್ಕೆ ತೊಂದರೆ ಏಕೆ ಮಾಡುತ್ತಿದ್ದೀಯ ನಮ್ಮ ಅಣ್ಣನಿಗೆ ಎಂದು ಕೇಳಿದ್ದೇನೆ. ಸಾಲದ ವಿಚಾರ ಪೊಲೀಸ್ ಠಾಣೆಯಲ್ಲಿದೆ.ವೈಯುಕ್ತಿಕ ವಿಚಾರವನ್ನು ಹಿಂದೂ ಮಹಾಗಣಪತಿಗೆ ತಳುಕು ಹಾಕುವ ಕೆಟ್ಟ ಕೆಲಸವನ್ನು ಸೈಟ್ ಬಾಬು ಮಾಡುತ್ತಿದ್ದಾರೆ.
ನಮ್ಮ ಕುಟುಂಬದ 3 ಕೋಟಿ ವ್ಯವಹಾರದ ಬಗ್ಗೆ ಮಾತನಾಡಿದ್ದು, ಡೀಲ್ ಎಂಬ ಪದ ಬಳಸಿದ್ದೇನೆ. 3 ಕೋಟಿ ಸುಪಾರಿ ಕೊಡುವಂತವರು ಚಿತ್ರದುರ್ಗದಲ್ಲಿ ಯಾರು ಇಲ್ಲ. ನನ್ನ ಖಾಸಗೀ ವ್ಯವಹಾರವನ್ನ ಹಿಂದೂ ಮಹಾ ಗಣಪತಿ ಜೊತೆ ತಳಕು ಹಾಕುವ ಜೊತೆಗೆ, ನನ್ನ ಆಡಿಯೋ ತಿರುಚಿ ಪೊಲೀಸ್ ಇಲಾಖೆಗೆ ಕೊಟ್ಟು ನನ್ನನ್ನ ಹಿಂದೂ ಮಹಾ ಗಣಪತಿ ಕಡೆ ಬರಬಾರದು ಎಂದು ಹೇಳುತ್ತಿದ್ದಾರೆ. ಈ ಉತ್ಸವ ಸಮಿತಿ ಮಾಡುವುದು ಸಂಘಟನೆಯಾಗಿದ್ದು ಅದರಲ್ಲಿ ನಾನು ಇದ್ದೇನೆ. ನನ್ನ ವಯುಕ್ತಿಕ ನಿಂದನೆ ಮಾಡಿದ್ದರಿಂದಾಗಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು ಮಾಡಲು ನಿರ್ಧರಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೆ.ಎನ್.ವಿಶ್ವನಾಥಯ್ಯ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *