ಸರ್ಕಾರ ಶಿಕ್ಷಕರ ಸರ್ವಾನುಮತದ ಅಭಿವೃದ್ದಿಗೆ ಕಂಕಣ ಬದ್ದವಾಗಿದೆ: ಹೆಚ್ ಆಂಜನೇಯ

ರಾಜ್ಯ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿರುವ, ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡುತ್ತಿದೆ, ಅನುದಾನ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನುಳಿಸುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಯ್ಯ ಭರವಸೆಯನ್ನು ನೀಡಿದರು.

 

 

ಚಿತ್ರದುರ್ಗ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಹೋರಾಟವನ್ನು ಮಾಡಲಾಗಿದೆ, ಶಿಕ್ಷಕರ, ವಿದ್ಯಾರ್ಥಿಗಳ ಹಾಗೂ ಸಂಸ್ಥೆಗಳ ಪರವಾಗಿ ಹೋರಾಟವನ್ನು ಮಾಡುವುದರ ಮೂಲಕ ಸರ್ಕಾರದಿಂದ ಸೌಲಭ್ಯಗಳನ್ನು ಕೂಡಿಸಲಾಗಿದೆ. ಇದರಲ್ಲಿ ಯಾವುದೇ ರಾಜಕಾರಣ ಮಾಡಿಲ್ಲ, ಸರ್ಕಾರ ತನ್ನ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ನೀಡಲು ತಯಾರಿದೆ.ಆದರೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬಂದಿದ್ದರಿಂದ ಮಾಡಿಲ್ಲ, ನೀತಿ ಸಂಹಿತೆ ಮುಗಿದ ನಂತರ ಸರ್ಕಾರ ಜಾರಿ ಮಾಡಲಿದೆ ಇದರಲ್ಲಿ ಯಾವುದೇ ಆತಂಕ ಬೇಡ ಎಂದರು.

2006ರ ನಂತರ ಕೆಲಸಕ್ಕೆ ಸೇರಿದವರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ನಿವೃತ್ತಿಯ ನಂತರ ಸಿಗುವುದಿಲ್ಲ. ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಅನುದಾನಿತ ಮತ್ತು ಅನುದಾನ ರಹಿತ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಪರವಾಗಿ ವಿಶೇಷ ಕಾಳಜಿಯನ್ನು ಸರ್ಕಾರ ತೋರಿದ್ದು, ಅವರಿಗೂ ಸಹಾ ಏನಾದರು ಸಹಾಯವನ್ನು ಮಾಡಲು, ಸರ್ಕಾರ ಪಣ ತೊಟ್ಟಿದೆ. ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಬೆಂಗಳೂರಿನಲ್ಲಿ 140 ದಿನ ಹೂರಾಟವನ್ನು ಮಾಡಿದ್ದರು. ಅಂದಿನ ಬಿಜೆಪಿ ಸರ್ಕಾರ ಇದರ ಬಗ್ಗೆ ಯಾವ ಕಾಳಜಿಯನ್ನು ತೋರಿಸಲಿಲ್ಲ. ಅಂದು ನಾನು ಸಹಾ ಬಿಜೆಪಿಯಿಂದ ವಿಧಾನ ಪರಿಷತ್‍ನಲ್ಲಿ ಸದಸ್ಯನಾಗಿದ್ದೆ ಸರ್ಕಾರದ ಮುಂದೆ ಶಿಕ್ಷಕರ ಮತ್ತು ಸರ್ಕಾರ ಮಧ್ಯೆ ಸಂದಾನದ ಸಭೆ ನಡೆಸುವಂತೆ ಮನವಿ ಮಾಡಿದರು ಸರ್ಕಾರ ಇದರ ಬಗ್ಗೆ ಕಿವಿಕೂಡಲಿಲ್ಲ. ಇದರಿಂದ ಬೇಸತ್ತ ನಾನು ವಿಧಾನ ಪರಿಷತ್‍ಗೆ ರಾಜೀನಾಮೆ ನೀಡಿ ಹೊರಬಂದೆ, ತದ ನಂತರ ಡಿ,ಕೆ.ಶಿವಕುಮಾರ್ ಶಿಕ್ಷಕರ ಪ್ರತಿಭಟನಾ ಸ್ಥಳಕ್ಕೆ ಬಂದು ನಿಮ್ಮ ಪರವಾಗಿ ನಾವು ಇದ್ದೇವೆ. ಮುಂದಿನ ದಿನದಲ್ಲಿ ನಮ್ಮ ಸರ್ಕಾರ ಬಂದರೆ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆಯನ್ನು ನೀಡಿದ್ದರು .ಅದರಂತೆ ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಶಿಕ್ಷಕರ ಬೇಡಿಕೆ ಈಡೇರಿಕೆಯ ಸಲುವಾಗಿ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದಾರೆ, ಚುನಾವಣೆ ಮುಗಿದ ಮೇಲೆ ಮುಖ್ಯಮಂತ್ರಿಗಳನ್ನು ಹಾಗೂ ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ನಮ್ಮ ಬೇಡಿಕೆ ಈಡೇರಿಸುವ ಕಾರ್ಯ ಚುರುಕು ಮಾಡುವಂತೆ ಒತ್ತಡವನ್ನು ಹಾಕುವ ಮನವಿ ಮಾಡಲಾಗುವುದೆಂದು ತಿಳಿಸಿದರು.
ಮಾಜಿ ಸಚಿವರಾದ ಹೆಚ್.ಆಂಜನೇಯ ಮಾತನಾಡಿ, ಈ ಚುನಾವಣೆಯನ್ನು, ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಆರು ಕ್ಷೇತ್ರಗಳಲ್ಲಿಯೂ ಸಹಾ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕೆಂದು ತೀರ್ಮಾನ ಮಾಡಿದೆ. ಪರಿಷತ್ ನಲ್ಲಿ ನಮ್ಮ ಪಕ್ಷದ ಸಂಖ್ಯಾ ಬಲ ಕಡಿಮೆ ಇದೆ. ಇದನ್ನು ಹೆಚ್ಚಳ ಮಾಡಲು ಆರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ಅನಿವಾರ್ಯತೆ ಇದೆ. ಇನ್ನು 4 ವರ್ಷ ನಮ್ಮ ಸರ್ಕಾರ ಇರುತ್ತದೆ ಅಧಿಕಾರ ಇದ್ದ ಅಭ್ಯರ್ಥಿ ಪರವಾಗಿ ಮತವನ್ನು ಹಾಕಿ ವಿರೋಧ ಪಕ್ಷದವರಿಗೆ ಮತವನ್ನು ಹಾಕಿ ವೇಸ್ಟ ಮಾಡಿಕೊಳ್ಳಬೇಡಿ, ನಮ್ಮ ಪಕ್ಷದವರನ್ನು ಗೆಲ್ಲಿಸಿದರೆ ಮುಂದಿನ ದಿನದಲ್ಲಿ ಶಿಕ್ಷಕರಿಗೆ ಸಹಾಯವಾಗುವ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ ಇದಲ್ಲದೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಗುತ್ತದೆ. ಸರ್ಕಾರ ಶಿಕ್ಷಕರ ಸರ್ವಾನುಮತದ ಅಭಿವೃದ್ದಿಗೆ ಕಂಕಣ ಬದ್ದವಾಗಿದೆ ಎಂದರು.ಗೋಷ್ಟಿಯಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಕೆಡಿಪಿ ಸಭೆಯ ಸದಸ್ಯರಾದ ಕೆ.ಸಿ.ನಾಗರಾಜ್, ಮುದಸಿರ್ ನವಾಜ್, ಜಿ.ಪಂ.ಮಾಜಿ ಸದಸ್ಯರಾದ ನರಸಿಂಹರಾಜು, ಲಕ್ಷ್ಮೀಕಾಂತ, ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *