ಶಿಕ್ಷಣ ಕ್ಷೇತ್ರ ಕಲುಷಿತವಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿ

ರಾಜ್ಯ

 

 

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿಲ್ಲ. ಎನ್..ಪಿ. ಕಿತ್ತಾಕಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಶಿಕ್ಷಣ ಕ್ಷೇತ್ರ ಕಲುಷಿತವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಆರೋಪಿಸಿದ್ದಾರೆ

 

ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ..ನಾರಾಯಣಸ್ವಾಮಿರವರ ಪರ ಹಮ್ಮಿಕೊಳ್ಳಲಾಗಿದ್ದ ಮತ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳಿಗೆ ಕಳೆದ ಹದಿನೆಂಟು ವರ್ಷಗಳಿಂದಲೂ ಧ್ವನಿಯಾಗಿ ಕೆಲಸ ಮಾಡುತ್ತಿರುವ ಡಾ.ವೈ..ನಾರಾಯಣಸ್ವಾಮಿರವರನ್ನು ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಹುಮತಗಳಿಂದ ಗೆಲ್ಲಿಸಿ ವಿಧಾನಪರಿಷತ್ಗೆ ಕಳಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು

 

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿಲ್ಲ. ಎನ್..ಪಿ. ಕಿತ್ತಾಕಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಶಿಕ್ಷಣ ಕ್ಷೇತ್ರ ಕಲುಷಿತವಾಗಿದೆ. ಶಿಕ್ಷಕರಿಗೆ ಸವಲತ್ತುಗಳನ್ನು ಕೊಡುವ ಕೆಲಸ ಮಾಡಿದ್ದು, ಬಿ.ಎಸ್.ಯಡಿಯೂರಪ್ಪನವರು ಎನ್ನುವುದನ್ನು ಶಿಕ್ಷಕರುಗಳು ಮರೆಯುವಂತಿಲ್ಲ. ಹಾಗಾಗಿ ಚುನಾವಣೆಯಲ್ಲಿ ಹೋರಾಟಗಾರನನ್ನು ಆಯ್ಕೆ ಮಾಡಬೇಕೆನ್ನುವುದನ್ನು ಮರೆಯಬಾರದೆಂದು ಶಿಕ್ಷಕರುಗಳನ್ನು ಎಚ್ಚರಿಸಿದರು.

 

ವಿಧಾನ ಪರಿಷತ್ತಿನಲ್ಲಿ ಬಹುಮತಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಮಹತ್ವದಾಗಿದ್ದು, ವೈ..ನಾರಾಯಣಸ್ವಾಮಿ ಅವರನ್ನು ಗೆಲ್ಲಿಸುವುದು ಅಗತ್ಯವಾಗಿರುತ್ತದೆ ಮೊದಲಿನಿಂದಲೂ ಶಿಕ್ಷಕರ, ಪದವೀಧರರ ಒಲವು ಬಿಜೆಪಿ ಮೇಲೆ ಇದೆ, ನಮ್ಮ ಅಭ್ಯರ್ಥಿ ವೈ. ನಾರಾಯಣಸ್ವಾಮಿಯವರು ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದಲ್ಲದೆ ಅವರ ಆಗುಹೋಗುಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಮತ್ತು ಅವರ ಶಿಕ್ಷಣ ಸಚಿವರ ಎಡವಟ್ಟು ಇತ್ತೀಚಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಯಲಾಗಿದೆ.ಇವೆಲ್ಲಾವೂ ಕಾಂಗ್ರೇಸ್ ಸರ್ಕಾರದಲ್ಲಿ ಶಿಕ್ಷಕರ ಮತ್ತು ಶಿಕ್ಷಣ ಕ್ಷೇತ್ರದ ಬಗೆಗಿನ ಅಸಡ್ಡೆ ತೋರಿಸುತ್ತದೆ ಎಂದರು.

 

ಬಿಜೆಪಿ. ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಶಿಕ್ಷಕರ ಬಲ ಹೊಂದಿರುವ ವೈ..ನಾರಾಯಣಸ್ವಾಮಿ ಹಾಗೂ ಹಣ ಬಲವುಳ್ಳ ಕಾಂಗ್ರೆಸ್ ಅಭ್ಯರ್ಥಿ ನಡುವೆ ನಡೆಯುತ್ತಿರುವ ಚುನಾವಣೆಯಲ್ಲಿ ಒಂದೊಂದು ಮತಕ್ಕೂ ಪ್ರಾಮುಖ್ಯತೆಯಿದೆ. ಹಾಗಾಗಿ ಪ್ರಥಮ ಸುತ್ತಿನಲ್ಲಿಯೇ ವೈ..ಎನ್. ಗೆಲ್ಲಿಸಿ ತೊಘಲಕ್ ದರ್ಬಾರ್ ನಡೆಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪನಿಗೆ ಸಂದೇಶ ಕಳಿಸಬೇಕಿದೆ ಎಂದು ಶಿಕ್ಷಕರುಗಳಲ್ಲಿ ಮನವಿ ಮಾಡಿದರು.

 

 

 

ಅನುದಾನಿತ ಶಾಲೆಗಳು ಮುಚ್ಚುತ್ತಿವೆ. ಓಪಿಎಸ್. ಇನ್ನು ಕೈಸೇರಿಲ್ಲ. ಆತ್ಮನಿರ್ಭರ, ಭಾರತವನ್ನು ವಿಶ್ವಗುರುವಾಗಿಸಲು ಪ್ರಧಾನಿ ಮೋದಿರವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಅದು ಬೇಕಿಲ್ಲ. ಶಿಕ್ಷಣದ ಜೊತೆ ರಾಜಕೀಯವಾಟವಾಡುತ್ತಿದೆ. ಶಿಕ್ಷಕರಿಗೆ ಬರೆ ಎಳೆಯುವ ನೀತಿ ಅನುಸರಿಸುತ್ತಿರುವ ಕನ್ನಡ ಬಾರದ ಶಿಕ್ಷಣ ಸಚಿವರನ್ನು ನಾಡಿಗೆ ಕೊಟ್ಟಂತ ಅಪಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು ಎಂದು ತರಾಟೆ ತೆಗೆದುಕೊಂಡರು.

ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಾಲ್ಕನೆ ಬಾರಿಗೆ ಸ್ಪರ್ಧಿಸುತ್ತಿರುವ ವೈ..ನಾರಾಯಣಸ್ವಾಮಿ ಶಿಕ್ಷಕರ ಕಷ್ಟಸುಖದಲ್ಲಿ ಮೊದಲಿನಿಂದಲೂ ಭಾಗಿಯಾಗುತ್ತ ಬರುತ್ತಿದ್ದಾರೆ. ಶಿಕ್ಷಕರುಗಳಿಗೆ ನಿಜವಾಗಿಯೂ ಶಕ್ತಿ ಬರಬೇಕಾಗಿರುವುದರಿಂದ ಚುನಾವಣೆ ಅತ್ಯಂತ ಮಹತ್ವದ್ದು, ಹಣ ಬಲವೋ ಶಿಕ್ಷಕರು ಬಲವೋ ಎನ್ನುವುದನ್ನು ನೀವುಗಳು ತೀರ್ಮಾನಿಸಬೇಕೆಂದು ಶಿಕ್ಷಕರುಗಳಲ್ಲಿ ಕೇಳಿಕೊಂಡರು.

 

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡುತ್ತ ಐದನೆ ವೇತನ ಆಯೋಗ ಒಪ್ಪಿಕೊಂಡಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು. ಕಾಂಗ್ರೆಸ್ ಸರ್ಕಾರ ಎಂದಿಗೂ ಶಿಕ್ಷಕರುಗಳ ಪರವಾಗಿಲ್ಲ. ನೌಕರರ ವಿರೋಧಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಳನೆ ವೇತನ ಆಯೋಗವನ್ನು ಒಪ್ಪಿಕೊಂಡಿಲ್ಲ. ಬಡ ಮಕ್ಕಳು, ನೌಕರರ ಪರವಾಗಿರುವ ವೈ..ನಾರಾಯಣಸ್ವಾಮಿರವರನ್ನು ಗೆಲ್ಲಿಸಿ ಎಂದು ಶಿಕ್ಷಕರುಗಳಲ್ಲಿ ಮನವಿ ಮಾಡಿದರು.

 

ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ..ನಾರಾಯಣಸ್ವಾಮಿ ಶಿಕ್ಷಕರುಗಳಲ್ಲಿ ಮತ ಯಾಚಿಸಿ ಮಾತನಾಡುತ್ತ ಕಳೆದ ಹದಿನೆಂಟು ವರ್ಷಗಳಿಂದಲೂ ಯಾವುದೇ ಕಪ್ಪು ಚುಕ್ಕೆಯಿಲ್ಲದಂತೆ ನಿಮ್ಮ ಸೇವೆ ಮಾಡಿದ್ದೇನೆ. ಅತಿ ಹೆಚ್ಚು ಅಭಿಮಾನ, ನಂಬಿಕೆ, ಪ್ರೀತಿ ತೋರಿದ್ದೀರ, ಕೊಟ್ಟ ಮಾತಿಗೆ ತಪ್ಪಿಲ್ಲ. ನೀವುಗಳು ಹೇಳಿದ ಕೆಲಸ ಮಾಡಿದ್ದೇನೆ. ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ವಿಧಾನಪರಿಷತ್ಗೆ ಕಳಿಸಿಕೊಡಿ. ನಿಮ್ಮ ಸಮಸ್ಯೆಗಳಿಗೆ ಸದಾ ಹೋರಾಡುತ್ತೇನೆಂದು ಭರವಸೆ ನೀಡಿದರು.

 

ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರಿಗೆ ಶಿಕ್ಷಣದ ಬಗ್ಗೆ ಜ್ಞಾನವಿಲ್ಲ. ಮಕ್ಕಳು, ಪೋಷಕರುಗಳು ಕಂಗಾಲಾಗಿದ್ದಾರೆ. ನಿಮ್ಮ ಋಣ ನನ್ನ ಹೆಗಲ ಮೇಲಿದೆ. ವಿರೋಧಿಗಳ ಅಬ್ಬರಕ್ಕೆ ಮಾರು ಹೋಗಬೇಡಿ ಎಂದು ಶಿಕ್ಷಕರುಗಳನ್ನು ಜಾಗೃತಿಗೊಳಿಸಿದರು

 

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ ಗುರು ಪರಂಪರೆಯನ್ನು ಎತ್ತಿಹಿಡಿಯುವ ಸರ್ಕಾರ ಯಾವುದಾದರೂ ಇದ್ದರೆ ಅದು ಬಿಜೆಪಿ. ಆರು ವರ್ಷಗಳ ಕಾಲ ಶಿಕ್ಷಕರುಗಳ ಜೊತೆ ಒಡನಾಟವಿಟ್ಟುಕೊಂಡು ಸಮಸ್ಯೆಗಳಿಗೆ ಧ್ವನಿ ಎತ್ತಬೇಕಾಗಿರುವುದರಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪ್ರಾಮುಖ್ಯತೆಯಿದೆ. ಮೂರು ಬಾರಿ ಗೆದ್ದು ನಿಮ್ಮ ಸೇವೆ ಮಾಡಿರುವ ವೈ..ನಾರಾಯಣಸ್ವಾಮಿರವರನ್ನು ನಾಲ್ಕನೆ ಬಾರಿಗೆ ಗೆಲ್ಲಿಸಿ. ಐದು ಜಿಲ್ಲೆಗಳಲ್ಲಿ ಲೀಡ್ ಕೊಡಿ ಎಂದು ಶಿಕ್ಷಕರುಗಳಲ್ಲಿ ಕೋರಿದರು.

 

ಮಾಜಿ ಸಚಿವ ಭೈರತಿ ಬಸವರಾಜ್, ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಹೆಚ್.ಎಸ್.ಶಿವಶಂಕರ್, ಎಸ್.ತಿಪ್ಪೇಸ್ವಾಮಿ, ಬಿಜೆಪಿ. ಜಿಲ್ಲಾಧ್ಯಕ್ಷ .ಮುರಳಿ, ನಗರ ಮಂಡಲ ಅಧ್ಯಕ್ಷ ನವೀನ್ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್, ಚಿದಾನಂದಗೌಡ, ಎಸ್.ಲಿಂಗಮೂರ್ತಿ, ರವೀಂದ್ರಪ್ಪ, ಹನುಮಂತೆಗೌಡ, ಮಲ್ಲಿಕಾರ್ಜುನ್, ತಮ್ಮೇಶ್, ಎನ್.ಆರ್.ಲಕ್ಷ್ಮಿಕಾಂತ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯ್ಯಣ್ಣ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ ಕಾರ್ಯಾಧ್ಯಕ್ಷರಾದ ಜಿ.ಬಿ.ಶೇಖರ್, ತಾಲ್ಲೂಕು ಅಧ್ಯಕ್ಷರಾಧ ಸಣ್ಣ ತಮ್ಮಣ್ಣ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *