ಕೈ ಮುಗಿದು ಪ್ರಾರ್ಥಿಸುತ್ತೇನೆ ಹೀಗೆ ಮಾತಾಡಬೇಡಿ: ಗೋವಿಂದ ಕಾರಜೋಳ

ರಾಜ್ಯ

ಕರ್ನಾಟಕ ರಾಜ್ಯ ಇಬ್ಬಾಗ ಮಾಡವುದು ಸರಿಯಲ್ಲ: ಕಾರಜೋಳ

ರಾಜ್ಯವನ್ನು ಇಬ್ಬಾಗ ಮಾಡಬೇಕೆಂದು ಚಂದ್ರಶೇಖರ ಸ್ವಾಮಿ ಹೇಳಿಕೆಯನ್ನು ಖಂಡಿಸಿರುವ ಚಿತ್ರದುರ್ಗ ಸಂಸದ ಕಾರಜೋಳ, ಈ ಹಿಂದೆ ಹರಿದು ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸುವ ಮೂಲಕ ಕರ್ನಾಟಕ ರಾಜ್ಯವನ್ನಾಗಿ ಮಾಡಲಾಗಿದೆ.ಈಗ ಮತ್ತೆ ರಾಜ್ಯ ಇಬ್ಬಾಗ ಮಾಡುವ ಹೇಳಿಕೆ ಸರಿಯಲ್ಲ ಎಂದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ರಾಜ್ಯ ಯಾವಾಗಲೂ ಒಂದಾಗಿರಬೇಕು, ಒಂದು ಧ್ವಜ ಒಬ್ಬ ಸಿಎಂ‌ ಇರಬೇಕು ಎಂದು ಪೂರ್ವಜರು, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ್ದಾರೆ. ಈ ಸಮಯದಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಅನೇಕರು ಜೈಲು ಸೇರಿದ್ದಾರೆ.ಅವರ ಹೋರಾಟ ಇಂದಿನ ಜನಾಂಗಕ್ಕೆ ಗೊತ್ತಿಲ್ಲ.‌ಇದನ್ನು ತಿಳಿಯದೆ ರಾಜ್ಯದ ಇಬ್ಭಾಗದ ಬಗ್ಗೆ ಮಾತಾಡುತ್ತಿದ್ದಾರೆ ಇದು ಸರಿಯಲ್ಲ. ಮಾಹಿತಿ ಕೊರತೆಯಿಂದ ಈ ಹೇಳಿಕೆ ಬರುತ್ತಿದೆ. ಯಾವುದೇ ಕಾರಣಕ್ಕೆ ಅಖಂಡ ಕರ್ನಾಟಕ ಒಂದಾಗಿರಬೇಕು.‌ಯಾರೂ ಕೂಡ ಕರ್ನಾಟಕ ಇಬ್ಭಾಗ ಆಗಬೇಕು ಎಂದು ಧ್ವನಿ ಎತ್ತಬಾರದೆಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಕರ್ನಾಟಕ ಇತಿಹಾಸವನ್ನು ಓದಬೇಕು. ಈ ದೇಶದ ಸ್ವಾತಂತ್ರ್ಯದ ಬಗ್ಗೆ ಒಂದಾಗಿರುವ ಬಗ್ಗೆ ಇತಿಹಾಸ ತಿಳಿದುಕೊಳ್ಳಬೇಕು. 1956 ರ ನವೆಂಬರ್ ನಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಅದು ಮುಂದುವರೆಯಬೇಕು. ಚಿತ್ರದುರ್ಗ ಸೇರಿದಂತೆ ಹೈದ್ರಾಬಾದ್ ಕರ್ನಾಟಕ ಕ್ಕೆ ಅಭಿವೃದ್ದಿಯಲ್ಲಿ ಮಲತಾಯಿ ಧೋರಣೆಯಿಂದ ಅನ್ಯಾಯವಾಗಿದೆ. ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಾಗಿಲ್ಲ ಎಂದು ಹೇಳಿದರೆ, ಕೆಲವರಿಗೆ ಮೂಗಿನ ಮೇಲೆ ಕೋಪ‌ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

 

ಎಸ್ಟಿ ನಿಗಮದ ಹಗರಣದ ಬಗ್ಗೆ:

ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡು, ಖಜಾನೆ ಲೂಟಿ ಮಾಡಿದೆ ಎಂದು ಜನರ ಅಭಿಪ್ರಾಯವಾಗಿದೆ. ಖಜಾನೆ ಲೂಟಿ ಮಾಡಿದವರು, ಸಮಾಜದ ಹೊರಗೆ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಇದರ ಹಿಂದೆ ಸರ್ಕಾರದ ಕೈವಾಡ ಇದೆ ಎಂದು ಸ್ಪಷ್ಟವಾಗಿ ರಾಜ್ಯದ 6.5 ಕೋಟಿ ಜನರಿಗೆ ಗೊತ್ತಾಗಿದೆ. ಸರ್ಕಾರ ಕೂಡಲೇ 187 ಕೋಟಿ ಹಣವನ್ನು ಸರ್ಕಾರದ ಖಜಾನೆಗೆ ವಾಪಾಸ್ಸು‌ಇಟ್ಟು ದಲಿತರ ಉದ್ಧಾರಕ್ಕಾಗಿ ವೆಚ್ಚ ಮಾಡಬೇಕು, ಸಂಬಂಧ ಪಟ್ಟವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಈ ಸಮಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ ಮುರುಳಿ, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ ಇದ್ದರು.

Leave a Reply

Your email address will not be published. Required fields are marked *