ನನ್ನ ಕ್ಷೇತ್ರದಲ್ಲಿ 250 ಕೋಟಿ ರೂ. ಅಕ್ರಮ; ಸಂಸದ ಡಿ.ಕೆ.ಸುರೇಶ್

ರಾಜಕೀಯ

ಬೆಂಗಳೂರು: ಕರೊನಾ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲಿ 250 ಕೋಟಿ ರೂ. ಅಕ್ರಮ ನಡೆದಿದೆ ಎಂದು ಬೆಂ.ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್​ ಗಂಭೀರ ಆರೋಪ ಮಾಡಿದ್ದಾರೆ.ಲೋಕಸಭಾ ಕ್ಷೇತ್ರದ ವ್ತಾಪ್ತಿಯಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ವಿವಿಧ ಕಾಮಗಾರಿಗಳಿಗೆ ನಕಲಿ ಬಿಲ್​ ಸೃಷ್ಟಿಸಿ ಅವ್ಯವಹಾರವಾಗಿದ್ದು, ತನಿಖೆ ನಡೆಸಿ ಎಂದು ಸುರೇಶ್​ ಬುಧವಾರ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೋರಿ ಕ್ಲೀನ್​ ಮಾಡಿದೆ, ರಸ್ತೆ ಕ್ಲೀನ್​ ಮಾಡಿದೆ ಅಂತ ನಕಲಿ ಬಿಲ್​ ಆಗಿದೆ. ಮುನಿರತ್ನ ಆ ಕ್ಷೇತ್ರದ ಮಾಜಿ ಶಾಸಕರು. ಅವರು ಭಾಗಿಯಾಗಿದ್ದಾರೆ ಎಂದು ನಾನು ಹೇಳಲ್ಲ. ನಾನು ಯಾವುದೇ ಆರೋಪ ಮಾಡಲು ಹೋಗಲ್ಲ. ಈ ಹಗರಣಕ್ಕೆ ಬಿಬಿಎಂಪಿಯ ಎಂಜಿನಿಯರ್​ಗಳು, ಅಧಿಕಾರಿಗಳೇ ನೇರ ಕಾರಣ. ನಕಲಿ ಬಿಲ್​ ಬಗ್ಗೆ ಎಲ್ಲ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿ ದೂರು ದಾಖಲಿಸಿದ್ದೇನೆ ಎಂದರು.
ಜನವರಿಯಲ್ಲಿ ನಕಲಿ ಬಿಲ್​ ಆಗಿದೆ. ಒಟ್ಟು 130 ಕಾಮಗಾರಿಗಳು ನಕಲಿ ಬಿಲ್​ ಆಗಿದೆ. ಕ್ಷೇತ್ರದ ಎಲ್ಲ ಬಿಬಿಎಂಪಿ ಅಧಿಕಾರಿಗಳೇ ಇದಕ್ಕೆ ನೇರ ಕಾರಣ. ಅಧಿಕಾರಿಗಳೇ ಟೆಂಡರ್​ ತೆಗೆದುಕೊಳ್ಳುವುದು, ಕೆಲಸ ಮಾಡೋದು ಅವರೇ, ಹಣ ಪಡೆಯೋದು ಅವರೇ ಎಂದು ಡಿ.ಕೆ.ಸುರೇಶ್​ ಆರೋಪಿಸಿದರು.ಕರೊನಾ ಸಂದರ್ಭದಲ್ಲಿ ಈ ರೀತಿ ಲೂಟಿ ಹೊಡೆದಿದ್ದಾರೆ. ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮುನಿರತ್ನ ರಾಜೀನಾಮೆ ಕೊಟ್ಟು ಒಂದೂಕಾಲು ವರ್ಷ ಆಗಿದೆ. ಇದರಲ್ಲಿ ಇಂಜಿನಿಯರ್​ಗಳ ಪಾತ್ರ ಇದೆಯೇ ಹೊರತು ಬೇರೆ ಯಾರ ಪಾತ್ರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

 

 

Leave a Reply

Your email address will not be published. Required fields are marked *