ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ ಜಿಲ್ಲಾಸ್ಪತ್ರೆ: ಡಿಎಸ್ ಡಾ. ಎಸ್ಪಿ ರವೀಂದ್ರ

ರಾಜ್ಯ

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ, ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ ಹೇಳಿದ್ದಾರೆ.
ಈ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಂಗಳವಾರ ಜಿಲ್ಲಾ ಆಸ್ಪತ್ರೆಯ ಕಾರ್ಯವೈಖರಿಯಲ್ಲಿ ಉಂಟಾದ ಬದಲಾವಣೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಧ್ಯಮ ಮಿತ್ರರಿಗೆ ಅಂಕಿ ಸಂಖ್ಯೆಗಳ ಸಮೇತ ಮಾಹಿತಿ ನೀಡಿದ್ದಾರೆ.
26,090 ಒಳರೊಗಿಗಳಿಗೆ ಉಚಿತ ಚಿಕಿತ್ಸೆ:
ಕಳೆದ ಅಕ್ಟೋಬರ್ ನಿಂದ ಇಲ್ಲಿಯವರೆಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಎ.ಬಿ.ಆರ್.ಕೆ (ಆಯಷ್ಮಾನ್ ಭಾರತ ಆರೋಗ್ಯ ಕರ್ನಾಟಕ) ಅಡಿ 26,090 ಒಳರೋಗಿಗಳು ದಾಖಲಾಗಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲಾ ಆಸ್ಪತ್ರೆಯಿಂದ ಸುವರ್ಣ ಕರ್ನಾಟಕ ಆರೋಗ್ಯ ಟ್ರಸ್ಟ್ಗೆ ಎ.ಬಿ.ಆರ್.ಕೆ ಅಡಿ ಚಿಕಿತ್ಸೆ ನೀಡಿದ 24,620 ಕ್ಲೇಮ್‌ಗಳನ್ನು ಸಲ್ಲಿಕೆ ಮಾಡಲಾಗಿದೆ. ಬಿಡುಗಡೆಯಾದ ಕ್ಲೇಮ್ ಮೊತ್ತದಲ್ಲಿ ಶೇ.20 ರಷ್ಟ ಮೊತ್ತವನ್ನು ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಇನ್ಸೆಟಿವ್ ರೂಪದಲ್ಲಿ ನೀಡಿ, ಮತ್ತಷ್ಟು ಉತ್ತಮ ಕಾರ್ಯಕ್ಕೆ ಪ್ರೇರಣೆ ನೀಡಲಾಗುತ್ತಿದೆ. ಈ ವರ್ಷದಲ್ಲಿ ರೂ.1.10 ಕೋಟಿ ಇನ್ಸೆಟಿವ್ ನೀಡಲಾಗಿದೆ.
ಏರಿಕೆಯಾದ ಶಸ್ತ್ರಚಿಕಿತ್ಸೆ ಪ್ರಮಾಣ :
ಶಸ್ತ್ರಚಿಕಿತ್ಸಕರು ಹಾಗೂ ವೈದ್ಯರು ಬೇರೆಡೆಗೆ ರೋಗಿಗಳನ್ನು ಶಿಫಾರಸ್ಸು ಮಾಡುವುದನ್ನು ತಡೆಗಟ್ಟಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತಿದೆ. ಒಂದು ವರ್ಷ ಅವಧಿಯಲ್ಲಿ 2520 ಜನರಲ್ ಸರ್ಜರಿ, 1510 ಮೂಳೆ ಶಸ್ತ್ರಚಿಕಿತ್ಸೆ, 1100 ಕಣ್ಣ ಪೊರೆ, 100 ಇತರೆ ಕಣ್ಣಿನ ಶಸ್ತ್ರಚಿಕಿತ್ಸೆ, 450 ಲ್ಯಾಪ್ರೋಸ್ಕೋಪಿಕ್ ಸರ್ಜರಿ, 15 ಪುರುಷ ಸಂತಾನಹರಣ ಸೇರಿದಂತೆ, ಜಿಲ್ಲಾ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ 4651 ಸಿಜೆರಿಯನ್, ಗರ್ಭಕೋಶ ಇತರೆ ತೊಂದರೆ ಇರುವ 300 ವಿವಿಧ ಶಸ್ತ್ರಚಿಕಿತ್ಸೆ, 2100 ಸಹಜ ಹೆರಿಗೆಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಇದರೊಂದಿಗೆ 722 ಹಾವು ಕಡಿತ, 3626 ರಸ್ತೆ ಅಪಘಾತ, 3246 ಹೊಡದಾಟ, 2194 ವಿಷಪ್ರಾಶನದಂತಹ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
ನೂತನ ಕಟ್ಟಡದಲ್ಲಿ ತಾಯಿ ಮಕ್ಕಳ ಆಸ್ಪತ್ರೆ:
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಪೂರ್ವದಲ್ಲಿ ನಿರ್ಮಾಣವಾದ ನೂತನ ಕಟ್ಟಡದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಕಾರ್ಯಾರಂಭ ಮಾಡಿದೆ. ನೂತನ ಕಟ್ಟಡದಲ್ಲಿ ಹೆರಿಗೆ ಕೇಂದ್ರ, ಆಪರೇಷನ್ ಥಿಯೇಟರ್, ವಾರ್ಡ್ ಹಾಗೂ ಔಷಧ ವಿತರಣೆ ಘಟಕಗಳನ್ನು ಪ್ರತ್ಯೇಕವಾಗಿ ತೆರದು ಚಿಕಿತ್ಸೆ ನೀಡಲಾಗುತ್ತಿದೆ. 4651 ಸಿಜೆರಿಯನ್, 2100 ಸಹಜ ಹೆರಿಗೆ ಸೇರಿದಂತೆ 6751 ಸುರುಕ್ಷಿತ ಹೆರಿಗೆಗಳನ್ನು ತಾಯಿ ಮತ್ತು ಮಕ್ಕಳ ವಿಭಾಗದಿಂದ ಮಾಡಲಾಗಿದೆ. ಸದ್ಯ ತಾಯಿ ಮಕ್ಕಳ ವಿಭಾಗ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. 160 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಇರುವುದರಿಂದ 50 ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲು ಸಿದ್ದತೆ ನಡೆಸಲಾಗಿದೆ. ಅಪೌಷ್ಠಿಕ ಮಕ್ಕಳು ಹಾಗೂ ತಾಯಿಯ ಆರೈಕೆಗೆ 10 ಬೆಡ್‌ಗಳ ಎನ್‌ಆರ್‌ಸಿ ಕೇಂದ್ರವನ್ನು ಸಹ ಇಲ್ಲಿ ತೆರೆಯಲಾಗಿದೆ. ನವಜಾತ ಮ್ಕಕಳಲ್ಲಿ ಕಂಡುಬರುವ ಅಂಗವಿಕಲತೆ ಹಾಗೂ ಇತರೆ ಸಮಸ್ಯೆಗಳನ್ನು ಆರಂಭದಲ್ಲಿಯೇ ಗುರುತಿಸಿ ವಿಶೇಷ ಚಿಕಿತ್ಸೆ ನೀಡಲು ಡಿ.ಇ.ಐ.ಸಿ (ಡಿಸ್ಟ್ರಿಕ್ಟ್ ರ‍್ಲೀ ಇನ್ಟರ್‌ವೆನ್ಷನ್ ಸೆಂಟರ್) ವಿಶೇಷ ಕೇಂದ್ರ ತೆರೆಯಲಾಗುವುದು ಒಂದು ವರ್ಷದಲ್ಲಿ ಶ್ವಾಶಕೋಶ, ಉಸಿರಾಟ ಸೇರಿದಂತೆ ಇತರೆ ತೊಂದರೆ ಅನುಭವಿಸುವ 2370 ನವ ಜಾತ ಶಿಶುಗಳಿಗೆ ಚಿಕತ್ಸೆ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿಯೇ 1913 ಮಕ್ಕಳ ಸಂಪೂರ್ಣ ಚಿಕಿತ್ಸೆ ಮಾಡಿ ಬಿಡುಗಡೆ ಮಾಡಲಾಗಿದೆ. 275 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಶಿಫಾರಸ್ಸು ಮಾಡಲಾಗಿದೆ. 1000.ಗ್ರಾಂಗಿಂತಲೂ ಕಡಿಮೆ ತೂಕದ 25 ಮಕ್ಕಳಿಗೆ ತಿಂಗಳಾನುಗಟ್ಟಲೇ ವಿಶೇಷ ಆರಕೈ ನೀಡಲಾಗಿದೆ. 1000 ರಿಂದ 1500 73 ಮಕ್ಕಳ ಚಿಕಿತ್ಸೆ ನೀಡಲಾಗಿದೆ. ನವಜಾತ ಶಿಶು ಪ್ರಮಾಣವನ್ನು ತಗ್ಗಸಿಲಾಗಿದೆ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *