ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷಗಳ ಶಾಸಕರಿಗೆ ಅನುದಾನ ತಾರತಮ್ಯ

ರಾಜಕೀಯ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೇ 2280 ಕೋಟಿ ವೆಚ್ಚದಲ್ಲಿ 4 ನಾಲ್ಕು ತಾಲೂಕುಗಳಿಗೆ ಕುಡಿಯುವ ನೀರುಣಿಸುವ ಕೆಲಸ ಮಾಡಿದ್ದು ಕಾಂಗ್ರೆಸ್ ಬದ್ದತೆ ಜನಪರ ಕಾಳಜಿಗೆ ನಿದರ್ಶನ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. 
ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ತುಂಗಭದ್ರಾ ಹಿನ್ನಿರು ಯೋಜನೆಯಡಿ ಮತ್ತು ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ  ಮನೆ ಮನೆಗೆ ನಲ್ಲಿ ನೀರು ಸಂಪರ್ಕದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು‌.
ನಮ್ಮ  ಕಾಂಗ್ರೆಸ್ ಸರ್ಕಾರದಲ್ಲಿ ಪಕ್ಷ ರಾಜಕಾರಣ  ಮಾಡದೇ ಜನರ ಹಿತ ಕಾಯುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದರು. ಮೊಳಕಾಲ್ಮುರು ಬಿಎಸ್ ಆರ್ ಶಾಸಕ, ಕೂಡ್ಲಿಗಿ ಪಕ್ಷೇತರ ಶಾಸಕ, ಪಾವಗಡ ಜೆಡಿಎಸ್ ಶಾಸಕರಿದ್ದರು ಸಹ ನಮಗೆ ಪಕ್ಷಕ್ಕಿಂತ ಜನರಿಗೆ ಕುಡಿಯುವ ನೀರು ಹರಿಸಬೇಕು ಎಂಬ ಕಾಳಜಿಯಿಂದ ಕಾಂಗ್ರೆಸ್ ಸರ್ಕಾರದಲ್ಲಿ ಆದೇಶ ಹೊರಡಿಸಿದರು.ಎಸ್ಸಿಇಪಿ, ಟಿಎಸ್ಪಿ ಯೋಜನೆಯಲ್ಲಿ 50 % ಅನುದಾನ ತುಂಗಾ ಭದ್ರಾ ಹಿನ್ನೆರು ಯೋಜನೆ ಒದಗಿಸಲಾಗಿದೆ. ಇದರ ಪರಿಣಾಮವಾಗಿ ಎಲ್ಲಾ ಕೆಲಸ ಮುಗಿದಿದ್ದು ಪೈಪ್ ಲೈನ್ ಮತ್ತು ಟ್ಯಾಂಕ್ ಕಾಮಗಾರಿ ಕೆಲಸ ಮುಗಿದಿದ್ದು ಮೂರರಿಂದ ನಾಲ್ಕು ತಿಂಗಳಲ್ಲಿ ಎಲ್ಲಾ ಕೆಲಸ ಮುಗಿದು ನೀರಿನ ಸರಬರಾಜು ಮಾಡಲಾಗುತ್ತದೆ ಎಂದರು.
ಜಲಜೀವನ್ ಮಿಷನ್ ಯೋಜನೆಯಲ್ಲಿ    ಹುಣಸೇಕಟ್ಟೆ, ಕೂನಬೇವು, ಕಡಬನಕಟ್ಟೆ ಗ್ರಾಮಗಳಲ್ಲಿ ಇಂದು ಪೂಜೆ ಸಲ್ಲಿಸಿದ್ದು  ಕ್ಷೇತ್ರದಾದ್ಯಂತ ವೇಗವಾಗಿ ಕೆಲಸ ಮುಗಿಸಬೇಕು ಎಂದು ಸೂಚಿಸಿದ್ದೇನೆ. ತುರುವನೂರು ಹೋಬಳಿ ತುಂಗಾ ಭದ್ರ ಯೋಜನೆಯಲ್ಲಿ ಸೇರಿರಲಿಲ್ಲ ನಮ್ಮ ಕ್ಷೇತ್ರವಾದ್ದರಿಂದ ವಿಶೇಷ ಸಭೆ ಮೂಲಕ ನಮ್ಮ ಸರ್ಕಾರದಲ್ಲಿ ಯೋಜನೆಯ ಪಟ್ಟಿಗೆ ಸೇರಿಸುವ ಕೆಲಸ ಮಾಡಿದ್ದೇನೆ.
ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷಗಳ ಶಾಸಕರಿಗೆ ಅನುದಾನ ತಾರತಮ್ಯ ಮಾಡುವ ಮೂಲಕ ಅಭಿವೃದ್ಧಿ ಕೆಲಸ ಸಹಕಾರ ನೀಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಎಲ್ಲಾ ಶಾಸಕರಿಗೆ ಹಣ ನೀಡುವ ಕೆಲಸ ಮಾಡಿತ್ತು. ಶಕ್ತಿ ಮೀರಿ ನನ್ನ ಶಾಸಕರ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದು ಜನರಿಗೆ ಸತ್ಯ ಗೊತ್ತಿದೆ. ಯಾವ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂಬುದು ತೆರೆದ ಪುಸ್ತಕ ಮುಂದೇ ಜನರ ಆಶೀರ್ವಾದದಿಂದ ನಮ್ಮ ಸರ್ಕಾರ ಬರುವುದು ಖಚಿತವಿದ್ದು ಜನರು ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದು  ಕಾಂಗ್ರೆಸ್ ಸರ್ಕಾರಕ್ಕೆ ಮತ ನೀಡುವ ಮೂಲಕ‌ ರಾಜ್ಯದಲ್ಲಿ ಸರ್ಕಾರ ಆಸ್ತಿತ್ವಕ್ಕೆ ಬರಲಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಯಾಗಿದ್ದ ಯೋಜನೆಗಳಿಗೆ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡದೇ ಅಭಿವೃದ್ಧಿಯನ್ನಯ ತಡೆಹಿಡಿಯುವ ಕೆಲಸ ಮಾಡಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ನಿಂಗಮ್ಮ,ಸದಸ್ಯರಾದ ಅರ್ಚನಾ, ಯಶೋಧಮ್ಮ, ಎಸ್.ಪಾಲಯ್ಯ, ಮುಖಂಡರಾದ ಪಿ.ಸಿ.ವೆಂಕಟೇಶ್,ಮೈಲಾರಪ್ಪ, ಮಹಂತೇಶ್, ರೈತ ಮುಖಂಡ ಕಾಂತರಾಜ್,ಏಕಣ್ಣ, ಕೃಷ್ಣಮೂರ್ತಿ, ಮಾರುತಿ,ಗುರುಮೂರ್ತಿ ಇದ್ದರು.
ವಾಲ್ಮೀಕಿ ನಿಗಮದ ಪಂಪು ಮೋಟರ್ ವಿತರಣೆ: ತುರುವನೂರು ಗ್ರಾಮದಲ್ಲಿ  ವಾಲ್ಮೀಕಿ ನಿಗಮದ 30 ಜನ ಫಲಾನುಭವಿಗಳಿಗೆ ಶಾಸಕ ಟಿ.ರಘುಮೂರ್ತಿ ಅವರು ಪಂಪು ಮೋಟರ್  ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ಮಂಜುಳ, ತಾಲೂಕು ಅಭಿವೃದ್ಧಿ ಅಧಿಕಾರಿ ಉಸ್ಮಾನ್ ಮತ್ತು ಫಲಾನುಭವಿಗಳು ಇದ್ದರು.

 

 

Leave a Reply

Your email address will not be published. Required fields are marked *