ಪರಿಶಿಷ್ಟ ಜಾತಿಗೆ ಸೇರಿಸುವ ಬೇಡಿಕೆ: ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಕ್ರಮ: ಸಿಎಂ ಬೊಮ್ಮಾಯಿ

ರಾಜ್ಯ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆನ್ನುವ ಬೇಡಿಕೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಶ್ರೀಮಾಚಿದೇವ ಮಡಿವಾಳ ಗುರುಪೀಠದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಮಠದ ಶಂಕುಸ್ಥಾಪನೆ, 14 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರ 39 ನೇ ಜನ್ಮದಿನ ಮತ್ತು 5 ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಕಾಯಕ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಡಿವಾಳ ಸಮಾಜಕ್ಕೆ ಯಡಿಯೂರಪ್ಪ ರಾಜಕೀಯ ಸ್ಥಾನಮಾನ ನೀಡಿದ್ದು, ಭೀಷಯಾಗಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಸಮಾಜಕ್ಕೆ ಸಂವಿಧಾನದ ಪ್ರಕಾರ ಎಲ್ಲವನ್ನು ಮಾಡಲಿದ್ದು, ಇತರಿರಿಗೆ ಸಮಾಜದವರಿಗೆ ಅನ್ಯಾಯ ಆಗದ ರೀತಿಯಲ್ಲಿ ನೋಡಕೊಳ್ಳಬೇಕಾದ ಜವಬ್ದಾರಿ ನನ್ನದಾಗಿರುವುದರಿಂದ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕಾನೂನು ಪ್ರಕಾರ ಕೈಗೊಳ್ಳುವುದಾಗಿ ತಿಳಿಸಿದರು.
ಮಡಿವಾಳ ಮಾಚಿದೇವರ ಕಾಯಕ ನಿಷ್ಟೇ ಬಹಳ ದೊಡ್ಡದು. ಬಸವಣ್ಣನರ ಜೊತೆ ಸೇರಿ ಸಮಾಜದ ಏಳ್ಗೆಗಾಗಿ ಅವಿರತ ಶ್ರಮಿಸಿದ್ದಾರೆ. ಎಲ್ಲೂ ಕೂಡ ತಮ್ಮಲ್ಲಿ ಕೀಳರಿಮೆ ತೋರದೆ ತಮ್ಮ ಕಾಯಕವನ್ನು ಮಾಡಿದರೆ‌ ಯಶಸ್ಸು ಸಾಧ್ಯ ಎಂದರು.
ಕಾಯಕದಲ್ಲಿ ಯಾವುದು ಕೂಡ ಸಣ್ಣದು ದೊಡ್ಡದು ಅನುವುದಿಲ್ಲ. ಕಾಯಕ ಮಾಡಿದರೆ ಅದರಲ್ಲೇ ಸ್ವರ್ಗ ಕಾಣಬಹುದು. ಇದನ್ನು ಸಮಾಜದ ಪ್ರತಿಯೊಬ್ಬರು ಮನಗಾಣಬೇಕು ಎಂದು ಕರೆ ನೀಡಿದರು.
ನಿಮ್ಮ ಕಾಯಕವನ್ನು ಇಂದು ದೊಡ್ಡ ದೊಡ್ಡ ಕಂಪನಿಗಳು ಮಾಡುತ್ತಿದ್ದು, ನೀವು ಕೂಡ ವಿದ್ಯೆ ಹಾಗೂ ಆಧುನಿಕವಾದ ತಂತ್ರಜ್ಞಾನದಲ್ಲಿ ಮುಂದೆ ಬಂದಾಗ ನೀವು ಕೂಡ ದೊಡ್ಡ ದೊಡ್ಡ ಕಂಪನಿಗಳನ್ನು ತೆರೆದು ಆರ್ಥಿಕವಾಗಿ ಮುಂದಾಗಬೇಕು. ಇದಕ್ಕೆ ಸರ್ಕಾರದ ವತಿಯಿಂದ ವಿಶೇಷವಾದ ಅನುದಾನವನ್ನು ಮುಂದಿನ ಬಜೆಟ್ ನಲ್ಲಿ ನೀಡುವುದಾಗಿ ಭರವಸೆ ನೀಡಿದರು.ಎಲ್ಲಾ ರೀತಿಯ ಸಹಾಯ ಮಾಡಲು ನಾನು ತಯಾರು.ಬಜೆಟ್ ನಲ್ಲಿ ಕಳೆದ ಬಾರೀಗಿಂತ ಹೆಚ್ವಿನ ಅನುದಾನ ನೀಡಿ, ಯುವಕರಿಗೆ ಸ್ವ ಸಹಾಯ ಸಂಘಗಳಿಗೆ ವಿಶೇಷ ಅನುದಾನ ನೀಡುವುದಾಗಿ ಹೇಳಿದ ಅವರು, ಸಮಾಜದ ಪ್ರತಿಯೊಬ್ಬರು ಸಂಘಟಿತರಾಗಬೇಕು ಎಂದು ಹೇಳಿದರು.
ಮಡಿವಾಳ ಮಾಚಿದೇವ ಪ್ರಶಸ್ತಿ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜಕೀಯ ಸ್ಥಾನಮಾನ ಅಪೇಕ್ಷೇ ಮಾಡದ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ‌ ನೀಡಿ. ನಂತರ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿದ್ದೆನೆ. ನಿಮ್ಮಿಲ್ಲರ ಆಶಿವಾರ್ದ ಹಿಂದಿನಿಂದಲೂ ಇದ್ದು, ಮುಂಬರುವ ಚುನಾವಣೆಯಲ್ಲೂ ಕೂಡ ಹೆಚ್ಚು ಬಹುಮತ ನೀಡಿ ಮತ್ತೊಮ್ಮೆ ಅಧಿಕಾರಕ್ಕೆ ತಂದು ಜನ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಮಠಗಳಿಗೆ ಅನುದಾನ ನೀಡುವ ಪದ್ದತಿ ಇಲ್ಲದ ಸಮಯದಲ್ಲಿ ಮಡಿವಾಳ ಸಮಾಜ ಸೇರಿದಂತೆ ಹಿಂದುಳಿದ ಸಮಾಜಗಳಿಗೆ ಸಾವಿರಾರು ಕೋಟಿ ರೂ.ಅನುದಾನ ನೀಡಿದ್ದೆನೆ. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜದ ಅಭಿವೃದ್ಧಿ ಗೆ ಹೆಚ್ಚಿನ ಅನುಧಾನ ನೀಡಬೇಕು. ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.
ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಬೇಡಿಕೆಗಳ ಸಕಾರ ಗೊಳ್ಳಬೇಕಾದರೆ ಗುರುಪೀಠದ ಸಹಕಾರ ಬಹಳ ಅವಶ್ಯಕವಾಗಿದೆ. ಬಿಜೆಪಿ ಸರ್ಕಾರ ದಲಿತ, ಹಿಂದುಳಿದ ಹಾಗೂ ಶೋಷಿತ ಮಠಗಳಿಗೆ ನೂರಾರು ಕೋಟಿ ರೂ.ಗಳನ್ನು ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು.

 

 


ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಶ್ರೀ ಮಠಕ್ಕೆ ಬಂದಿರುವ ಅನುಧಾನವನ್ನು ವಾಪಸ್ಸು ಪಡೆದು ನಮಗೆ ಶೈಕ್ಷಣಿಕವಾಗಿ ಬೆಳೆಯಲು ಪರಿಶಿಷ್ಟ ಜಾತಿಗೆ ಸೇರಿಸಿ. ಮುಂದಿನ ಬಜೆಟ್ ನಲ್ಲಿ 500 ಕೋಟಿ ರೂ.ಅನುಧಾನವನ್ನು ನೀಡಬೇಕು. ಸಮಾಜದ ಬಂಧುಗಳಿಗೆ ಉಚಿತ ವಿದ್ಯುತ್ ನೀಡಿದರೆ ಸಾಕಷ್ಟು ಕುಟುಂಬಗಳ ಬೆಳೆಯಲಿವೆ ಎಂದು‌ ಮನವಿ ಮಾಡಿದರು.
ಧ್ವನಿ ಇಲ್ಲದ ತಳ ಸಮುದಾಯದಗಳಾದ ನಮ್ಮದು ಅರಣ್ಯ ರೋಧನೆಯಾಗಿದೆ‌. ಇಲ್ಲಿ ಸಮೂಹದ ಧ್ವನಿಗೆ ಮಾತ್ರ ಮನ್ನಣೆ ಇದ್ದು, ನಮ್ಮೆಲ್ಲ ಬೆಳವಣಿಗೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಕಾರಣ. ಅವರ ಮೂಲಕ ನಮ್ಮ ಎಲ್ಲಾ ಬೇಡಿಕೆ ಈಡೇರುವ ನಂಬಿಕೆ ಇದೆ ಎಂದರು.
ಜಲ ಸಂಪನ್ಮೂಲ ಸಚಿವ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಧರ್ಮಗಳಲ್ಲೇ ಬಸವ ಧರ್ಮ ಬಹಳ ಶ್ರೇಷ್ಠವಾದ ಧರ್ಮ. ಪ್ರತಿಯೊಬ್ಬರು ಬಸವಣ್ಣನವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸಮಾಜವನ್ನು ಸಮಾನತೆಯ ಕಡೆಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪರಿ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕರಾದ ಜಿ‌.ಹೆಚ್‌.ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಅರುಣ್ ಕುಮಾರ್ ಪೂಜಾರ್, ಲಿಂಗಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *