ಇನ್ನೊಬ್ಬರ ಮುಖದಲ್ಲಿ ನಗು ಕಂಡಾಗ ನಮ್ಮ ಜೀವನ ಸಾರ್ಥಕ: ರಘುಮೂರ್ತಿ

ಜಿಲ್ಲಾ ಸುದ್ದಿ

ಇನ್ನೊಬ್ಬರ ನಗುವಿಗೆ ನಾವು ಕಾರಣವಾದಾಗ ನಮ್ಮ ಬದುಕು ಸಾರ್ಥಕವೆನಿಸುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಮಾತನಾಡಿದರು. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮಸ್ಥರು ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಮಾಡಿದ್ದ ಮನವಿ‌ ಮೇರೆಗೆ ಅವರು ಮುದ್ದಾಪುರ ಗ್ರಾಮಕ್ಕೆ ತೆರಳಿ ಸಮಸ್ಯೆಗಳನ್ನು ಆದಷ್ಟು ಬಗೆಹರಿಸಿ ನಂತರ ಮಾತನಾಡಿದರು. ಗ್ರಾಮದಲ್ಲಿ ಸ್ಮಶಾನ ಮತ್ತು ದಾರಿಯ ಸಮಸ್ಯೆಗಳುತುಂಬಾ ಗಂಭೀರವಾಗಿದ್ದು ಇವುಗಳನ್ನು ಬಗೆಹರಿಸುವಂತೆ ಮಾಡಿದ್ದರು, ಇದಕ್ಕೆ ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ಎನ್ ರಘುಮೂರ್ತಿ ಸ್ಥಳೀಯ ಕಂದಾಯ ಪರಿ ವೀಕ್ಷಕರು ಗ್ರಾಮ ಲೆಕ್ಕಾಧಿಕಾರಿ ಮತ್ತು ಉಪ ತಹಶೀಲ್ದಾರ್ ರೊಂದಿಗೆ ಮುದ್ದಾಪುರ ಗ್ರಾಮಕ್ಕೆ ಭೇಟಿ ನೀಡಿ ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಈ ಗ್ರಾಮಗಳಲ್ಲಿ ಇರುವ ಸಮಸ್ಯೆಗಳಾದ ಸ್ಮಶಾನ ಒತ್ತುವರಿ ತೆರವು, ದಾರಿ ವಿವಾದ, ಸಾಮಾಜಿಕ ಭದ್ರತಾ ಪಿಂಚಣಿಗಳು, ಪೌತಿ ಖಾತೆಗಳು, ದರಖಾಸ್ತು, ಜಮೀನಿನ ಪೋಡಿ, ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಸಮಸ್ಯೆಗಳನ್ನು ಕೂಡ ನೂರಕ್ಕೆ ನೂರರಷ್ಟು ನಾಲ್ಕು ದಿನಗಳೊಳಗೆ ಬಗೆಹರಿಸುವಂತೆ ಉಪ ತಹಶೀಲ್ದಾರ್ ರಾಜಸ್ವ ನೀರಿಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ತಹಸಿಲ್ದಾರ್ ಎನ್. ರಘುಮೂರ್ತಿ ಸೂಚಿಸಿದರು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಶೋಷಿತರ ಬಡವರ ಮತ್ತು ಅಸಾಹಾಯಕರ ಪರ ಕೆಲಸಗಳನ್ನು ಆಂದೋಲನ ರೂಪದಲ್ಲಿ ಕಾಲ ನಿಗದಿ ಮಾಡಿಕೊಂಡು ಮಾಡು ವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಸರ್ಕಾರದ ನಿರ್ದೇಶನವೂ ಕೂಡ ಇದೇ ಆಗಿದೆ ಹಾಗೂ ಸರ್ಕಾರದ ಆಶಯವಿದೆ ಹಾಗಾಗಿ ಯಾವುದೇ ಸಾರ್ವಜನಿಕರು ಕಂದಾಯ ಇಲಾಖೆಯ ಎಂತಹ ಸಮಸ್ಯೆಗಳು ಇದ್ದರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಇಲಾಖೆಯಿಂದ ಕೂಡುವ ಎಲ್ಲಾ ಸವಲತ್ತುಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು ಗಂಭೀರವಾದ ಸಮಸ್ಯೆಗಳಿದ್ದಲ್ಲಿ ತಕ್ಷಣ ಇಲಾಖೆಯ ಗಮನಕ್ಕೆ ತರುವಂತೆ ಪಂಚಾಯಿತಿಯ ಪ್ರತಿನಿಧಿಗಳಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ನಾಗರಾಜ್ ಉಪಾಧ್ಯಕ್ಷ ಸಂತೋಷ್ ಗ್ರಾಮ ಪಂಚಾಯತಿ ಸದಸ್ಯ ಲಿಂಗರಾಜು ರಾಜಶೇಖರ್ ರೂಮಗಟ್ಟೆ ಮಂಜು ಕಪ್ಪನಹಳ್ಳಿ ಸಂತೋಷ ರೈತ ಸಂಘದ ರುದ್ರಸ್ವಾಮಿ ಉಪತಾಶಿಲ್ದಾರ್ ಪ್ರಕಾಶ್ ರಾಜಸ್ಥ ನಿರೀಕ್ಷಕರದಂತ ಯೋಗೀಶ್ ಮತ್ತು ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *