ವಿಶ್ವ ಕರ್ಮ ಸಮಾಜದವರು ಮುನ್ನೆಲೆಗೆ ಬರಬೇಕು

ಜಿಲ್ಲಾ ಸುದ್ದಿ

ಹಿರಿಯರು ಹಾಗೂ ಸಾಧಕರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ವಿಶ್ವಮರ್ಕ ಸಮುದಾಯಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು, ಸಮುದಾಯದ ಎಲ್ಲಾ ಭಾಂಧವರು ಸೇರಿ ಅರ್ಥಗರ್ಭಿತವಾಗಿ ಜಯಂತಿಯನ್ನು ಆಚರಿಸಿರುವುದು ಸಂತಸ ತಂದಿದೆ ಆದೇ ರೀತಿಯಲ್ಲಿ ಮಕ್ಕಳನ್ನು ಕೂಡ ಉನ್ನತ ಮಟ್ಟದ ವ್ಯಾಸಂಗ ಕೊಡಿಸುವ ಮೂಲಕ ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ವಿಶ್ವಕರ್ಮ ಸಮುದಾಯದ ತಾಯಿ ಸಮಾಜವನ್ನು ಮೊದಲು ನಾವು ಗೌರವಿಸಬೇಕು ಇದು ಸಣ್ಣ ಸಮುದಾಯವಾದರೂ ಜಗತ್ತಿಗೆ ತನ್ನ ಕಸೂತಿ ಮೂಲಕ ಬೆಳಕು ಚೆಲ್ಲಿದೆ, ಇಡೀ ಪ್ರಪಂಚದಲ್ಲಿ ಸುಮಾರು ದೇವರಿಗೆ ತನ್ನ ರಕ್ಷಣೆಯ ವಸ್ತುಗಳನ್ನು ನೀಡಿದ ಮಹಾನ್ ಕಾಯಕ ಸಮಾಜ ವಿಶ್ವ ಕರ್ಮ ಸಮಾಜ ಎಂದರು.
ಇದೇ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್, ಮುಂಬವರುವ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಪಿ.ತಿಪ್ಪೆಸ್ವಾಮಿ, ಕವಿತಾ ಬೋರಯ್ಯ, ವೃತ್ತ ನೀರೀಕ್ಷ ಉಮೇಶ್ ಮಾತನಾಡಿದರು,
ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸದಸ್ಯ ಮಲ್ಲಿಕಾರ್ಜುನಾ, ಕವಿತಾ, ಸುಜಾತಾ, ನಾಗಮಣಿ, ಸುಮಾ, ವಿ.ವೈ.ಪ್ರಮೋದ್, ನಿರ್ಮಾಲ, ಜೈತುನ್‌ಬಿ, ಸಂಘದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸಿಇ ಪ್ರಸನ್ನ, ಮಹಿಳಾ ಘಟಕ ಅಧ್ಯಕ್ಷೆ ಕಮಲಮ್ಮ, ಮಹಿಳಾ ಜಾಗೃತಿ ಸಂಘದ ಗೌರವಾಧ್ಯಕ್ಷೆ ಸರಸ್ವತಿ, ಬಿಸಿ ವೆಂಕಟೇಶ್, ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ವರ್ತಕರಾದ ಬಿಜಿ.ಶಶಿಕುಮಾರ್, ನಾಗರಾಜ್‌ಚಾರ್, ಪದ್ಮನಾಭಚಾರ್, ಲಕ್ಷ್ಮಣಾಚಾರ್, ನಾಗರಾಜ್‌ಚಾರ್, ರಾಮಚಾರ್, ಲಕ್ಷ್ಮಿನಾರಾಯಣ, ಭರತ್ ರಂಜಿತ್, ಚೇತನ್, ಕಿರಣ್, ಉಮಾದೇವಿ, ಸವಿತ, ಕವಿತಾ, ಶಿವಮ್ಮ, ಲತಮ್ಮ, ರಾಜಮ್ಮ, ಮಂಜುನಾಥ್, ವಿಎ.ಶ್ರೀನಿವಾಸ್, ಆರ್.ಶ್ರೀನಿವಾಸ್, ಪಿಎಸ್‌ಐ ತಿಮ್ಮಣ್ಣ ಇತರರು ಪಾಲ್ಗೊಂಡಿದ್ದರು.

 

 

Leave a Reply

Your email address will not be published. Required fields are marked *