ಮದುವೆಯಾಗಿ 11 ನೇ ದಿನಕ್ಕೆ‌ಇಹ ಲೋಕ ತ್ಯಜಿಸಿದ ವಿನಾಯಕ್ ಕುಟುಂಬ ಕೈ ಸೇರಿದ ಪರಿಹಾರದ ಮೊತ್ತ

ರಾಜ್ಯ

ಮದುವೆಯಾಗಿ 11 ದಿನಕ್ಕೆ
ಕೋವಿಡ್ ಗೆ ಬಲಿಯಾಗಿದ್ದ
ರಾಜ್ ಟಿವಿ ಕ್ಯಾಮರಾಮೆನ್
ಕುಟುಂಬಕ್ಕೆ ಪರಿಹಾರ

ಯೌವ್ವನದ ಹೊಸ್ತಿಲಿನಲಿ ದುಡಿಯುವಂತಾದಾಗ ಮದುವೆ ಮಾಡಬೇಕು ಎನ್ನುವುದು ಎಲ್ಲರ ಮನೆಯಲ್ಲಿರುವ ಸಹಜ ತವಕ. ವಿನಾಯಕನ ಬಾಳಿನಲ್ಲಿಯೂ ಆಗಿದ್ದು ಇದೆ.‌ ಆದರೆ ವಿಧಿಯಾಟ ಬೇರೆಯೇ ಆಗಿತ್ತು.

ಚಿತ್ರದುರ್ಗ ಸ್ಥಳೀಯ ಚಾನಲ್ ಗಳಲ್ಲಿ ಕ್ಯಾಮರಾಮೆನ್ ಆಗಿದ್ದ ಜಿ.ಕೆ.ವಿನಾಯಕ ಉದಯ ಟಿವಿ ಕ್ಯಾಮರಾಮೆನ್ ಆಗಿ ಕೆಲಸ‌ ಮಾಡಿದ. ಬಳಿಕ ರಾಜ್ ಟಿವಿ ಕ್ಯಾಮರಾಮೆನ್ ಆಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ.

ಇನ್ನೇನು ಬದುಕು ಒಂದು ನೆಮ್ಮದಿಯ ಹಂತಕ್ಕೆ ಬಂದಿದೆ ಎಂದು ಅನ್ನಿಸತೊಡಗಿತ್ತು. ಮೂವತ್ತು ವಸಂತಗಳನ್ನ ಕಂಡ ವಿನಾಯಕನ ಮನಸಿನಲ್ಲಿ ಮದುವೆ ಮಾತು ಮೊಳೆಯತೊಡಗಿತು. ಗುರುಹಿರಿಯರ ಆರ್ಶೀವಾದಿಂದ ಕಂಕಣಬಲ ಕೂಡಿ ಬಂದಾಗ ಸ್ವರ್ಗಕ್ಕೆ ಮೂರು ಗೇಣು ಎನ್ನುವಷ್ಟು ಸಂಭ್ರಮ. ಸ್ನೇಹಿತರ ಜೊತೆಗೆ ಮದುವೆ ಸಿಹಿ ಸುದ್ದಿ ಹೇಳಿಕೊಂಡಿದ್ದ. ಕೋವಿಡ್ ಸಂದರ್ಭದಲ್ಲಿ ಸಪ್ತಪದಿ ತುಳಿಯಲು ಗಟ್ಟಿ ಮನಸ್ಸು ಮಾಡಿ ನಿರ್ಧರಿಸಿದ. ಎಡವಟ್ಟಾಗಿದ್ದು ಆಗಲೇ.

ಮದುವೆ ಊಟ ಮಾಡಿ ಬಂದವರಿಗೆ ಅವನ ಸಾವಿನ ಊಟವನ್ನು ಮಾಡಬೇಕಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

 

 

ಮದುವೆ ಮುಗಿದ ವಾರಕ್ಕೆ ವಿನಾಯಕನ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ಆ ಮಧುಮಗಳಿಗೆ ಹೇಗಾಗಿರಬೇಡ? ಸಂಭ್ರಮದ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿತು.

ದೇವರ ಮೇಲೆ ಭಾರ ಹಾಕಿ ಚಿತ್ರದುರ್ಗ ಆಸ್ಪತ್ರೆಗೆ ದಾಖಲು ಮಾಡಿದಾಗ ಕೋವಿಡ್ ಧೃಡಪಟ್ಟಿತು. ಚಿಕಿತ್ಸೆಯೂ ಶುರುವಾಯಿತು. ಸುದ್ದಿ ಮನೆಯ ಗೆಳೆಯರೆಲ್ಲ ಬೇಗ ಉಷಾರಾಗಿ ಬಾ ಎಂದು ಪ್ರಾರ್ಥಿಸಿದರು. ಮದುವೆಯಾಗಿ ಹತ್ತನೆ ದಿನವೂ ಆಸ್ಪತ್ರೆಯಲ್ಲಿ ಮಾತನಾಡಿದವ, ಹನ್ನೊಂದನೆಯ ದಿನಕ್ಕೆ ಉಸಿರು ಚೆಲ್ಲಿದಾಗ ಹೆತ್ತವರ ಕರಳು ಹೇಗಾಗಿರಬೇಡ?

ರಾಜ್ ಟಿವಿ ಕ್ಯಾಮರಾಮೆನ್ ಕೋವಿಡ್ ಗೆ ಬಲಿಯಾದ ನೋವಿನ ಸಂಗತಿಯನ್ನು ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ನನ್ನ ಗಮನಕ್ಕೆ ತಂದಿತು. ಏನಾದರೂ ಸಹಾಯ ಮಾಡಿಸಬೇಕು ಎಂದು ಮನವಿ ಮಾಡಿತು.

ವಿನಾಯಕನ ಕುಟುಂಬಕ್ಕೆ ನೆರವು ಕೇಳಿ ಮುಖ್ಯಮಂತ್ರಿ ಎದುರು ಅರ್ಜಿ ಹಿಡಿದು ನಿಂತಿದ್ದೆ. ಅವರ ಕುಟುಂಬಕ್ಕೆ ತಕ್ಷಣ ಪರಿಹಾರ ಮಂಜೂರು ಆಯಿತು. ಇದೆಲ್ಲ ಘಟನಾವಳಿಗಳಿಗೆ ವರ್ಷ ತುಂಬಿದೆ.

ಮೊನ್ನೆ ವಿನಾಯಕ ಕುಟುಂಬದವರು ಚಿತ್ರದುರ್ಗದಿಂದ ಪೋನ್ ಮಾಡಿದ್ದರು. ಬೆಂಗಳೂರಿಗೆ ಬಂದವರು ವಿಧಾನಸೌಧಕ್ಕೆ ಹುಡುಕಿಕೊಂಡು ಬಂದರು.

ತಾಂತ್ರಿಕ ಕಾರಣಕ್ಕಾಗಿ ಅಕೌಂಟ್ ಗೆ ಹಣ ಹೋಗಿರಲಿಲ್ಲ. ಸಮಸ್ಯೆ ಸರಿಪಡಿಸಿದ ಬಳಿಕ
ಬ್ಯಾಂಕ್ ಅಕೌಂಟ್ ಗೆ ಪರಿಹಾರ ಹಣ ಬಂದಿದೆ ಎಂದು ವಿನಾಯಕನ‌ ಸಹೋದರ ಶ್ರೀಧರ ಅವರು ಬ್ಯಾಂಕ್ ಪಾಸ್ ಬುಕ್ ಹಿಡಿದು ಬಂದು ಎರಡು ಲಕ್ಷ ಜಮೆ ಆಗಿದೆ ಎಂದು ಧನ್ಯವಾದ ಹೇಳಿದಾಗ ನನಗೂ ನೊಂದ ಕ್ಯಾಮರಾಮೆನ್ ಕುಟುಂಬಕ್ಕೆ ಪರಿಹಾರ ಕೊಡಿಸಿದ ಸಮಾಧಾನ.
ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅವಿರತ ಹೋರಾಟಕ್ಕೆ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.

ನಮ್ಮ ಜಿಲ್ಲೆಯ ಮೂವರು ಪತ್ರಕರ್ತರ ಸಂಕಷ್ಟ ಗಳಿಗೆ ನೆರವಾಗುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ರವರಿಗೆ ನಮ್ಮ ಜಿಲ್ಲಾ ಸಂಘದಿಂದ ಮನವಿ ಮಾಡಲಾಗಿತ್ತು ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಈಗಾಗಲೇ . ಪತ್ರಕರ್ತರುಗಳಾದ ಸುರೇಶ್ ಪಟ್ಟಣ್ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇವರಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷರೂ
ಕೋವಿಡ್ ನಿಂದ ಮೃತಪಟ್ಟಿದ್ದ ಜಿ.ಕೆ.ವಿನಾಯಕ ಇವರ ಕುಟುಂಬಕ್ಕೆ ಎರಡು ಲಕ್ಷರೂ ಕೊಡಿಸಿದ್ದಾರೇ ಇದಕ್ಶೆ ಶ್ರಮಿಸಿದ್ದಾರೆ. ಪಬ್ಲಿಕ್ ಟಿವಿ ಕ್ಯಾಮರಾಮೆನ್ ದಿ. ಬಸವರಾಜ್ ಕೋಟಿ ಅವರ ಕಡತ ಹಣ ಬಿಡುಗಡೆಗೆ ಮುಖ್ಯ ಮಂತ್ರಿಗಳ ಒಪ್ಪಿಗಗೆ ಹೋಗಿದೆ ಶೀಘ್ರದಲ್ಲೇ ಅವರ ಕುಟುಂಬಕ್ಕೂ ಹಣ ಸಂದಾಯ ವಾಗಲಿದೆ.
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕೆಯುಡ್ಲ್ಯೂಜೆಗೆ ಜಿಲ್ಲಾ ಸಂಘ ಮತ್ತು ನೆರವು ಪಡೆದ ಕುಟುಂಬದ ಪರವಾಗಿ ಅಭಿನಂದನೆಗಳು ತಿಳಿಸುತ್ತದೆ

Leave a Reply

Your email address will not be published. Required fields are marked *