ವೈದ್ಯಕೀಯ ಪರೀಕ್ಷೆಗೊಳಗಾಗಿ ಬಾಲಮಂದಿರಕ್ಕೆ ತರಳಿದ ಬಾಲಕಿಯರು

ರಾಜ್ಯ

ಚಿತ್ರದುರ್ಗ ಸಿಡಬ್ಲಿಯೂಸಿ ಕಚೇರಿಯ ಬಾಲ‌ ಮಂದಿರದಲ್ಲಿದ್ದ ಮಕ್ಕಳ ಪ್ರಾಥಮಿಕ ಹೇಳಿಕೆಯನ್ನು ಪಡೆದಿರುವ ಪೊಲೀಸರು ಇದೀಗ ಸಂತ್ರಸ್ತ ಬಾಲಕಿಯರನ್ನು ಅಂಬ್ಯುಲೆನ್ಸ್ ನಲ್ಲಿ ಸರ್ಕಾರಿ‌ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಕರೆದುಕೊಂಡು‌ ಹೋಗಿದ್ದು ವೈದ್ಯಕೀಯ ಪರೀಕ್ಷೆ ಮುಗಿಸಿದ ಬಾಲಕಿಯರು ಮತ್ತೆ ಬಾಲಮಂದಿರಕ್ಕೆ ವಾಪಾಸ್ಸು ಹೊರಟರು. ಈ ಮಧ್ಯೆ ಬಾಲಕಿಯರು ಅಂಬ್ಯುಲೆನ್ಸ್ ಹತ್ತುವಾಗ ನಮ್ಮ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ದಲಿತ ಸಂಘಟನೆಗಳು ಕೂಗಿದ ಘಟನೆಯೂ ನಡೆಯಿತು. ಹೆಣ್ಣು ಮಕ್ಕಳ ಪರ ನಾವಿದ್ದೇವೆ ಸತ್ಯ ಹೇಳಿ ಎಂದು ಸಿ ಡಬ್ಲಿಯೂಸಿ ಕಚೇರಿ ಹಾಗೂ ಬಾಲ ಮಂದಿರದ ಮುಂದೆ ಘೋಷಣೆ ಕೂಗಿದರು.

 

 

ಜನ ಸಾಮಾನ್ಯರಿಗೊಂದು ಬೇರೆಯವರಿಗೊಂದು‌ ನ್ಯಾಯನಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ನಡುವೆ ವೈದ್ಯಕೀಯ ‌ಪರೀಕ್ಷೆಗೆ ಬಾಲಕಿಯರನ್ನು‌ ಕರೆದುಕೊಂಡು ಬಂದಿದ್ದು ಪರೀಕ್ಷೆ ಮುಗಿದ ತಕ್ಷಣ ವಾಪಸ್ಸು ಸಿಡಬ್ಲಿಯೂಸಿ ಕಚೇರಿಯ ಬಾಲ‌‌ ಮಂದಿರಕ್ಕೆ ಹೋದರು. ಕಚೇರಿಯ ಸುತ್ತಲೂ ಪೊಲೀಸ್ ಬಿಗಿ‌ ಭದ್ರತೆಯನ್ನು‌ ಹಾಕಲಾಗಿದೆ. ಇಂದು‌ ಭಾನುವಾರವಾಗಿರುವ ಕಾರಣ ನಾಳೆ ನ್ಯಾಯಾಲಯದ‌ ಮುಂದೆ ‌ಹಾಜರು‌ಪಡಿಸುವ ಸಾಧ್ಯತೆ ಇದೆ. ಇದರ ನಡುವೆ ಎಸ್ಪಿ ಪರುಶುರಾಂ ವೈದ್ಯಕೀಯ ಪರೀಕ್ಷೆ ನಡೆಯುತ್ತಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ‌ ನೀಡಿದ್ದು ಮಾಹಿತಿಯನ್ನು ಪಡೆಯುತ್ತಿದ್ದಾರೆ. ಸತತ ಒಂದು‌ ಗಂಟೆಯಿಂದ ‌ನಡೆಯುತ್ತಿರುವ ವೈದ್ಯಕೀಯ ಪರೀಕ್ಷೆ ಹಿನ್ನೆಲೆಯಲ್ಲಿ ಎಸ್ಪಿ‌‌ ಆಗಮಿಸಿದ್ದು, ಎ‌ಎಸ್ ಪಿ‌ ಕುಮಾರಸ್ವಾಮಿ‌ ಅವರಿಗೆ ಸಾಥ್ ನೀಡಿದ್ದಾರೆ.

Leave a Reply

Your email address will not be published. Required fields are marked *