ಸಂಪನ್ಮೂಲ ಬಳಕೆ, ತಾಂತ್ರಿಕತೆ ಉನ್ನತೀಕರಣದಿಂದ ಯಶಸ್ವಿ ಉದ್ಯಮದಾರರಾಗಲು ಸಾಧ್ಯ

ಜಿಲ್ಲಾ ಸುದ್ದಿ

ಸಂಪನ್ಮೂಲ ಬಳಕೆ, ತಾಂತ್ರಿಕತೆ ಉನ್ನತೀಕರಣದಿಂದ ಯಶಸ್ವಿ ಉದ್ಯಮದಾರರಾಗಲು ಸಾಧ್ಯ

 

 

ಉದ್ಯಮದ ಮಾರುಕಟ್ಟೆ ವ್ಯಾಪ್ತಿ, ಹಣಕಾಸಿನ ಸೌಲಭ್ಯಗಳು. ಸಂಪನ್ಮೂಲಗಳ ಸರಿಯಾದ ಬಳಕೆ ಹಾಗೂ ಕಾಲಕ್ಕೆ ತಕ್ಕಂತೆ ತಾಂತ್ರಿಕ ಉನ್ನತೀಕರಣಗೂಂಡಲ್ಲಿ  ಮಾತ್ರ ಖಂಡಿತವಾಗಿಯೂ ಯಶಸ್ವಿ ಉದ್ಯಮದಾರರಾಗಲು ಸಾಧ್ಯ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಕೆ.ಮಂಜುನಾಥಸ್ವಾಮಿ ಸಲಹೆ ನೀಡಿದರು.
ಚಳ್ಳಕೆರೆಯ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಧಾರವಾಡ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಮತ್ತು ಚಳ್ಳಕೆರೆ ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸಂಘಟಿಸಲಾದ  “ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮದÀ”ದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಉದ್ಯಮವನ್ನು ಸ್ಥಾಪಿಸುವದಷ್ಟೇ ಅಲ್ಲದೇ ಉದ್ಯಮದ ಕುರಿತು ಸಂಪೂರ್ಣವಾದ ಜ್ಞಾನ ಹೊಂದುವುದು ಅತ್ಯಂತ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಸಿಡಾಕ್ ಸಂಸ್ಥೆಯು ಉದ್ಯಮಶೀಲತೆ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುತ್ತಿರುವುದಕ್ಕೆ ಸಿಡಾಕ್‍ಗೆ ಅಭಿನಂದನೆಗಳನ್ನ ತಿಳಿಸಿದ ಅವರು, ಜಿಲ್ಲಾ ಕೈಗಾರಿಕಾ ಕೇಂದ್ರಲ್ಲಿ ಸ್ವಯಂ ಉದ್ಯಮ ಮಾಡಲು ಉತ್ತೇಜಿಸುವ ಯೋಜನೆಗಳಾದ ಪಿಎಂಇಜಿಪಿ, ಇತರೆ ಯೋಜನೆಗಳ ಕುರಿತು ಮಾಹಿತಿ ತಿಳಿಸಿದರು.
ಹೆಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಯು.ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ಕೆಲಸಗಳನ್ನು ಅವಲಂಬಿಸದೇ ಸ್ವತಂತ್ರವಾಗಿ, ಸ್ವಾವಲಂಬಿ ಜೀವನ ನಡೆಸಲು ಹಾಗೂ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸಲು ಉದ್ಯಮಶೀಲತೆ ಜ್ಞಾನ ಪಡೆಯುವುದು ಅತ್ಯವಶ್ಯಕ ಎಂದು ತಿಳಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳು ತಪ್ಪದೇ ಮೂರು ದಿನಗಳ ಕಾರ್ಯಗಾರದಲ್ಲಿ ಭಾಗವಹಿಸಿ ಭೋಧಿಸುವ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.
ಸಿಡಾಕ್ ಜಂಟಿನಿರ್ದೇಶಕ ಆರ್.ಪಿ.ಪಾಟೀಲ್ ಮಾತನಾಡಿ, “ಸಿಡಾಕ್ ಸಂಸ್ಥೆಯ ಕಾರ್ಯವೈಖರಿ, ಸಿಡಾಕ್‍ನಲ್ಲಿ ನಡೆಸುವ ಕಾರ್ಯಕ್ರಮಗಳು ಹಾಗೂ ತರಬೇತಿಗಳಾದ, ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಬಿರ, ಮೂರು ದಿನಗಳು ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ಮತ್ತು ಹತ್ತು ದಿನಗಳ ಉದ್ಯಮಶೀಲತಾಭಿವೃದಿ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ತಿಳಿಸಿದರು. ಶಿಭಿರಾರ್ಥಿಗಳಾದ  ನೀವು ಕಠಿಣ ಪರಿಶ್ರಮದಿಂದ ಛಲ ಬಿಡದೆ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಲ್ಲಿ ಉದ್ಯಮದಲ್ಲಿ ಯಶಸ್ವಿಯಾಗಲು ಸಾದ್ಯ ಎಂದು ತಿಳಿಸಿದರು. ಉದ್ಯಮದಾರರು ಸದಾ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು. ಶಿಬಿರಾರ್ಥಿಗಳು ತಾವು ಕಂಡ ಕನಸು ನನಸಾಗಲಿ ಎಂದು ಶುಭ ಹಾರೈಸಿದರು.”
ಸಂಪನ್ಮೂಲ ವ್ಯಕ್ತಿಗಳಾದ ಜನಶಿಕ್ಷಣ ಸಂಸ್ಥಾನ ನಿವೃತ್ತ ನಿರ್ದೇಶಕ ಬಿ.ಮುಕುಂದಪ್ಪ ಮಾತನಾಡಿ, ಉದ್ಯಮಶೀಲರ ಗುಣಲಕ್ಷಣಗಳು ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು,  ಉದ್ಯಮವನ್ನ ಯಾವ ರೀತಿಯಲ್ಲಿ ಪ್ರಾರಂಭಿಸಬೇಕು, ಉದ್ಯಮ ಆರಂಭಿಸಲು ಇರುವಂತಹ ಅವಕಾಶಗಳನ್ನ ಗುರುತಿಸುವುದು ಹೇಗೆ ಮತ್ತು ಸವಾಲುಗಳನ್ನು ಎದುರಿಸುವ ಬಗೆ ಕುರಿತು ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಶಿಭಿರಾರ್ಥಿಗಳು ಯಾವ ರೀತಿಯಲ್ಲಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಯಾದ ಭಾಗ್ಯ ಪಿ. ಪ್ರಾರ್ಥಿಸಿದರು. ಸಿಡಾಕ್ ತರಬೇತುದಾರ ಜಿ.ಬಿ.ಬಸವರಾಜ ಸ್ವಾಗತಿಸಿದರು. ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಿ.ಎನ್.ರಘುನಾಥ್, ಗ್ರಂಥಪಾಲಕ ಪಾಪಣ್ಣ, ಸಿಡಾಕ್ ತರಬೇತುದಾರ ಪಿ.ವಿಜಯಕುಮಾರ, ಶಿಬಿರಾರ್ಥಿಗಳು ಇದ್ದರು

Leave a Reply

Your email address will not be published. Required fields are marked *