ಸಾಂಸ್ಕೃತಿಕ‌ ವಿವಿ ಸ್ಥಾಪನೆಗೆ ಚಿಂತನೆ: ಸಿಎಂ ಬೊಮ್ಮಾಯಿ

ರಾಜ್ಯ

 

“ನಿಮ್ಮನೆಲ್ಲ ನೋಡಿ ಸಂತಸವಾಗಿದೆ. ಬದುಕಿನ ಜಂಜಾಟ ಬಿಟ್ಟು ನಾಟಕ ನೋಡಲು ಬಂದಿದ್ದೀರಿ. ಬದುಕು ಬಹಳ ವಿಸ್ಮಯ. ನಮ್ಮನ್ನು ನಾವು ಮರೆತು ಆಸ್ವಾಧಿಸುವುದು ಬದುಕಿನ ಮಹತ್ವದ ಕ್ಷಣ.

ಇಂತಹ ಕ್ಷಣ ಪಡೆಯಲು, ತಮ್ಮನ್ನು ತಾವೇ ಪಡೆಯಲು ಹಿಮಾಲಯಕ್ಕೆ ಹೋಗಿ ತಪ್ಪಸ್ಸು ಮಾಡುತ್ತಾರೆ.

ಆದರೆ ಬದುಕಿನ ದಿನನಿತ್ಯ ಕೆಲಸ ಮುಗಿಸಿ, ನಾಟಕ ನೋಡಿ ನಿಮ್ಮನ್ನು ನೀವು ಮರೆಯುವುದು ಉತ್ತಮ‌‌ವಾದ ಕೆಲಸ.

 

 

ಆಧ್ಯಾತ್ಮಿಕ ಅನುಭೂತಿ ನಾಟಕದಿಂದ ದೊರಯತ್ತಿದೆ. ಬಸವಣ್ಣ ಕಾಲಗಟ್ಟದಲ್ಲಿ ನಾಟಕ ನೋಡಿ ನಾವು ಬೆರೆತು ಹೋಗುತ್ತೇವೆ. ಇದು ಅಲ್ಪ ಸಾಧನೆ ಅಲ್ಲ. ಇಂದು ಮೌಲ್ಯಗಳ ತುಂಬಿದ ನಾಟಕ ಕಲೆಗಳ ಅಗತ್ಯಯಿದೆ. ಗುರುಗಳ ಪಾತ್ರ ದೊಡ್ಡದು. ಹರ ಮುನಿದರು ಗುರು ಕಾಯತ್ತಾರೆ. ಗುರುಗಳು ಸದಾ ಕಾಲ ಮಾರ್ಗದರ್ಶನ ಮಾಡುವಂತವರು. ಗುರುವಿನ ಕರ್ತವ್ಯ ಪವಿತ್ರವಾದ ಕೆಲಸ. ಗುರುವನ್ನು ಒಲಿಸಿಕೊಳ್ಳಲು ಭಕ್ತಿ ಬೇಕು. ಭಕ್ತಿ ಎಂದರೆ ಉತ್ಕೃಷ್ಟ ಪ್ರೀತಿ. ಭಗವಂತನ ಶುದ್ದ ಮನ್ಸಸ್ಸಿನಿಂದ ಜಪಿಸಿದರೆ ಅದೇ ನಿಜವಾದ ಭಕ್ತಿ. ಮಂಜು ಕರಗಿ ನೀರು ಆಗುವ ರೀತಿಯಲ್ಲಿ ನಮ್ಮಲ್ಲಿ ಭಕ್ತಿ ಬರಬೇಕು. ನಮ್ಮ ಒಳಗಣ್ಣನ್ನು ತೆರೆಯಬೇಕು. ಇಂಥಹ ಸ್ಥಳದಲ್ಲಿ ಕಾಲ ಕಳೆದರೆ ನಮ್ಮ ಒಳಗಣ್ಣು ತೆರೆಯುತ್ತದೆ. ನಾಗರಿಕತೆ ಹಾಗೂ ಸಂಸ್ಕೃತಿಗಳು ವೇಗವಾಗಿ ಬೆಳೆಯುತ್ತಿವೆ. ನಮ್ಮ ಅವಶ್ಯಕತೆ ತಕ್ಕಹಾಗೆ ನಾಗರಿಕತೆ ಬೆಳೆಯತ್ತದೆ. ಮೊದಲು ಬೀಸೆ ಕಲ್ಲಿನಲ್ಲಿ ದವಸ ಬೀಸುತ್ತಿದ್ದರು. ಮೊದಲು ಓನಕೆ ಇತ್ತು. ಇಂದು ಅವುಗಳು ಮೂಲೆ ಸೇರಿವೆ. ನಾಗರಿಕತೆ ಭೌತಿಕ ವಸ್ತಗಳು.

ಸಂಸ್ಕೃತಿ ಎನ್ನುವುದು ನಮ್ಮಲ್ಲಿ ನಿರಂತರವಾಗಿ ಹರಿದು ಬರೆತಿತ್ತಿದೆ. ನಾವು ಏನು ಕೇಳಿಯುತ್ತೇವೆ ಅದು ಸಂಸ್ಕೃತಿ. ನಾವು ಏನಾಗಿದ್ದೇವೆ ಎಂಬುದನ್ನು ತಿಳಿಯಲು ಸಂಸ್ಕೃತಿ ಬೇಕು. ಹಂಗನ್ನು ತೊರೆದು ಸಾಧನೆ ಮಾಡಬೇಕು. ಬುದಕುನ್ನು ಅರಿಯಬೇಕಾದರು ಅನುಭವ ಬೇಕು.

ನಾನು ಆಧ್ಯಾತ್ಮಿಕ ಹಾಗೂ ಅರ್ಥಶಾಸ್ತ್ರ ವಿದ್ಯಾರ್ಥಿ. ಅರ್ಥಶಾಸ್ತ್ರ ಲಾಭ-ನಷ್ಟ ಇದೆ. ಆಧ್ಯಾತ್ಮ ದಲ್ಲಿ ಪಾಪ ಪುಣ್ಯಯಿದೆ. ಆದರೆ ನನ್ನ ಪ್ರಕಾರ ಆಧ್ಯಾತ್ಮದಲ್ಲಿ ಲಾಭ-ನಷ್ಟ ಇದೆ. ಬದುಕಿನಲ್ಲಿ ಎರೆಡು ಕಷ್ಟದ ಕೆಲಸ. ಮಕ್ಕಳಲ್ಲಿ ಮುಗ್ದತೆ ಇದೆ. ನಾವು ಬೆಳೆದಂತೆ ಮುಗ್ದತೆ ನಾಶ ಆಗುತ್ತದೆ. ಇದನ್ನು ಉಳಿಸಿಕೊಳ್ಳುವುದು ಕಷ್ಟ. ಎರೆಡನೆಯದು ಆತ್ಮಸಾಕ್ಷಿಯಾಗಿ ನಡೆಯುವುದು. ಈ ಎರೆಡು ಸಾಧನೆ ಮಾಡಲು ನಿರಂತರ ಪ್ರಯತ್ನ ಆಗಬೇಕು. ಆಧ್ಯಾತ್ಮಿಕ ಮೌಲ್ಯ ಪಡೆದುಕೊಳ್ಳಬೇಕು. ನಾವು ಪಡೆದ ಆಧ್ಯಾತ್ಮಿಕ ಮೌಲ್ಯ ಮಕ್ಕಳಿಗೆ ಬಳುವಳಿಯಾಗಿ ನೀಡಬೇಕು ಎಂದರು.

ಶ್ರೀಗಳು 25 ವರ್ಷಗಳಿಂದ 78 ನಾಟಕ ಗಳ ಪ್ರಯೋಗ ಮಾಡುತ್ತಿದ್ದಾರೆ. ಸಮಾಜದಲ್ಲಿ ಮೌಲ್ಯ ತುಂಬುವ ಕೆಲಸ ಮಾಡಿದ್ದಾರೆ. ರೂ.2 ಕೋಟಿ ಅನುದಾನವನ್ನು ಶಿವಾಚರಕ್ಕೆ ನೀಡುತ್ತೇನೆ. ಶ್ರೀಗಳ ಆಶಯದಂತೆ ಸಾಂಸ್ಕೃತಿಕ ವಿ.ವಿ. ಸ್ಥಾಪನೆ ಬಗ್ಗೆ ಚಿಂತಿಸಲಾಗುವುದು ಎಂದರು.

ನನಗೆ ಸಮಸ್ಯೆ ಗುರುಗಳದಲ್ಲ, ಶಿಷ್ಯರ ಕಾಟ ನನಗೆ. ಪುಣ್ಯಪ್ರಾಪ್ತಿಗೆ ಎಲ್ಲ ದಾರಿಗಳು ಸಾಣೇಹಳ್ಳಿ ಬರಲಿ ಎಂದರು.”

Leave a Reply

Your email address will not be published. Required fields are marked *