ತಹಶೀಲ್ದಾರ್ ರೈಡ್ ರಾಶಿ ರಾಶಿ ಗುಟ್ಕಾ, ಮಧ್ಯದ ಪೌಚ್ ಗಳು ವಶ

ಆರೋಗ್ಯ

ಸಾವರ್ಜನಿಕ ಸ್ಥಳಗಳಲ್ಲಿ ಯಾರಾದರೂ ಗುಟ್ಕಾ ಬಿಡಿ ಸಿಗರೇಟ್ ಸೇವೆನೆ ಕಂಡು ಬಂದರೆ ಅಂತವರ ಮೇಲೆ ಪೋಲಿಸ್ ಪ್ರಕರಣ ದಾಖಲಿಸಿ ಠಾಣೆಯಲ್ಲಿ‌ ಕೂರಿಸಲಾಗುತ್ತದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಇಂದು ಸಮನ್ವಯ ಸಮಿತಿ ಪೋಲಿಸ್ ಇಲಾಖೆ ಆರೋಗ್ಯ ಇಲಾಖೆ ನಗರ ಸಭೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಂಬಾಕು ಮುಕ್ತ ನಗರ ಕಾರ್ಯಕ್ರಮದಲ್ಲಿ ಚಳ್ಳಕೆರೆ ನಗರದ ವಾಸವಿ ಕಾಲೇಜ್ ಸರ್ಕಾರಿ ಪಿಯು ಕಾಲೇಜ್ ಬಾಪೂಜಿ ಕಾಲೇಜ್ ಹಾಗೂ ಸಾರ್ವಜನಿಕ ಸ್ಥಳಗಳಾದ ಕೋರ್ಟ್ ಮುಂಭಾಗ ವಾಲ್ಮೀಕಿ ಸರ್ಕಲ್ ಪರಿವೀಕ್ಷಣಾ ಮಂದಿರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾರಾಟ ಹಾಗೂ ಮಧ್ಯಪಾನ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿದರು. ದಾಳಿಯಲ್ಲಿ ಧೂಮಪಾನದ ಉತ್ಪನ್ನಗಳಾದ ಬೀಡಿ ಸಿಗರೇಟ್ ತಂಬಾಕು ಗುಟುಕ ಹೊಗೆ ಸೊಪ್ಪು ಹಾಗೂ ಮಧ್ಯದ ಪೌಚ್ ಗಳನ್ನು ವಶಕ್ಕೆ ಪಡೆದು ಸುಮಾರು 16 ಪ್ರಕರಣಗಳನ್ನು ದಾಖಲಿಸಿಕೊಂಡರು.
ರಾಶಿ ರಾಶಿ ಗುಟ್ಕಾ ಪ್ಯಾಕೇಟ್ ಗಳು ಕಂಡು ಬಂದಿದ್ದು, ಅಂಗಡಿ‌ ಮಾಲೀಕ ತಹಶೀಲ್ದಾರ್ ಗೆ ಕೈ ಮುಗಿದು ಬಿಟ್ಟು ಬಿಡಯವಂತೆ ಬೇಡಿಕೊಂಡಿದ್ದು ಕಂಡು‌ಬಂತು.

 

 

ಉಳಿದಂತಹ ಅಂಗಡಿ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕರನ್ನು ಕುರಿತು ಮಾತನಾಡಿದ ಅವರು ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕು ಶಾಲಾ ಆಭರಣ ಶಾಲಾ ಮುಂಭಾಗ ಮುಖ್ಯರಸ್ತೆ ಸಾರ್ವಜನಿಕ ಸ್ಥಳ ಆಸ್ಪತ್ರೆ ಸರ್ಕಾರಿ ಕಚೇರಿ ಅಂಗನವಾಡಿ ಇಂತಹ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರು ಇಂತಹ ಸ್ಥಳಗಳಲ್ಲಿ ಧೂಮಪಾನವಾಗಲಿ ಮಧ್ಯಪಾನವಾಗಲಿ, ಮಾಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಟಿ.ಎಚ್.ಓ ಡಾ. ಕಾಶಿ, ಈಗಾಗಲೇ ನಗರದ ಎಲ್ಲಾ ಅಂಗಡಿ ಹಾಗೂ ಡಾಬಾ ಬಸ್ ನಿಲ್ದಾಣ ಶಾಲಾ ಅಕ್ಕಪಕ್ಕ ಅಂಗಡಿಗಳಿಗೆ ತಂಬಾಕು ಮಾರಾಟ ನಿಷೇಧ ನಾಮಫಲಕಾಗುವಂತೆ ಸೂಚನೆ ನೀಡಲಾಗಿದೆ ಅದರಂತೆ ಇಂದು ಸಹ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಹಲವು ಅಂಗಡಿಗಳ ಮೇಲೆ ದಾಳಿ ತಂಬಾಕು ಉತ್ಪನ್ನ ಹಲವು ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ ಎಂದರು ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಬಿ ತಿಪ್ಪೇಸ್ವಾಮಿ, ತಂಬಾಕು ನಿಯಂತ್ರಣ ಅಧಿಕಾರಿ ತಿಪ್ಪೇಸ್ವಾಮಿ, ಸಿಡಿಪಿಓ ಕೃಷ್ಣಪ್ಪ ಪೌರಯುಕ್ತ ಚಂದ್ರಪ್ಪ, ಪಿ ಎಸ್ ಐ ತಿಮ್ಮಪ್ಪ ಆರೋಗ್ಯ ಅಧಿಕಾರಿಗಳಾದ ಮಹಾಲಿಂಗಪ್ಪ ಗಣೇಶ್ ಏ ಎಸ್ ಐ ಗಳಾದ ರವಿ ಪಿಸಿ ಗಳಾದ ಶ್ರೀನಿವಾಸ್ ಚಂದ್ರು ಸೇರಿದಂತೆ ನಗರಸಭೆ ಅಧಿಕಾರಿಗಳು ಆರೋಗ್ಯ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಇದ್ದರು.

 

Leave a Reply

Your email address will not be published. Required fields are marked *