ಉತ್ತಮ ಸಮಾಜ ನಿರ್ಮಾಣಕ್ಕೆ ದೀಕ್ಷೆ ಪಡೆಯಬೇಕು

ಜಿಲ್ಲಾ ಸುದ್ದಿ

ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈಚಾರಿಕವಾಗಿ ವಿಶ್ವೇಶ್ವರ ಪುರ ಗ್ರಾಮ ತನ್ನದೇ ಆದ ಹಿರಿಮೆಯನ್ನು ಹೊಂದಿದೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಈ ಒಂದು ಗ್ರಾಮದ ನಿರ್ಮಾತೃ ವಿಶ್ವೇಶ್ವರಯ್ಯನವರ ಮನೋಧರ್ಮ ಸಮಯ ಪಾಲನೆ ಮತ್ತು ಪರಿಶ್ರಮವನ್ನು ಈ ಗ್ರಾಮದ ಪ್ರತಿಯೊಬ್ಬ ಯುವಕರು ಕೂಡ ರೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ರಘುಮೂರ್ತಿ ಮನವಿ ಮಾಡಿದರು ಅವರು ಇಂದು ಚಳ್ಳಕೆರೆ ತಾಲೂಕಿನ ವಿಶ್ವೇಶ್ವರಪುರ ಗ್ರಾಮದಲ್ಲಿ ಗೌರಿ ಪೂಜೆಯನ್ನು ಹಮ್ಮಿಕೊಂಡು ಗಂಗೆಗೆ ಗೌರಿಯನ್ನು ಸಮರ್ಪಿಸುವ ಕಾರ್ಯಕ್ರಮಕ್ಕೆ ಬೆಳಗ್ಗೆ ಭೇಟಿ ನೀಡಿ ಪೂಜಾ ಕೈoಕಾರ್ಯಗಳಲ್ಲಿ ಭಾಗಿಯಾಗಿ ನಮ್ಮ ದೇಶದ ಪರಂಪರೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳಿಗೆ ವಿಶೇಷವಾದ ಸ್ಥಾನಮಾನವಿದೆ ಇದರಿಂದಲೇ ವಿಶ್ವಶಾಂತಿಗೆ ಪ್ರೇರೇಪಿಸಲು ಸಾಧ್ಯವಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿರುವ ಯುವಕರು ಹೆಚ್ಚು ಹೆಚ್ಚು ಜ್ಞಾನಾರ್ಜನೆಯನ್ನು ಪಡೆಯಬೇಕು ಸ್ವಾಮಿ ವಿವೇಕಾನಂದ ರಾಮಕೃಷ್ಣ ಪರಮಹಂಸರು ಮಹಾತ್ಮ ಗಾಂಧೀಜಿ ಮತ್ತು ಡಾಕ್ಟಾರ್ ಬಿಆರ್ ಅಂಬೇಡ್ಕರ್ ಅವರ ಆದರ್ಶಗಳನ್ನ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ದೀಕ್ಷೆ ಪಡೆಯಬೇಕು ಎಂದು ಮನವಿ ಮಾಡಿದರು ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಸಂದರ್ಭದಲ್ಲಿ ತಹಶೀಲ್ದಾರ್ ರಘು ಮೂರ್ತಿಯವರು ನಂದಿದ್ವಜವನ್ನು ಹೊತ್ತು ಸಂಭ್ರಮಿಸಿದರು ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವಿಶ್ವನಾಥ್ ಚಂದ್ರಣ್ಣ ಆಂಜನಪ್ಪ ಸಾಲಿ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *