ಸಂತ್ರಸ್ತರು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ ಆರೋಗ್ಯ ಇಲಾಖೆ

ಆರೋಗ್ಯ

ಹಿರಿಯೂರು‌ ತಾಲೂಕಿನ ವಾಣಿ ವಿಲಾಸ ಜಲಾಶಯ ತುಂಬಿ‌ ಕೋಡಿ‌ಬಿದ್ದಿದ್ದು, ಇದರಿಂದ. ಎಲ್ಲೆಡೆ ಮನೆಗಳಿಗೆ ನೀರು‌ನುಗ್ಗಿದೆ ಇದರ ಜೊತೆಗೆ‌ ಮಳೆಯಿಂದಲೂ ಕೂಡ ನೀರು ನುಗ್ಗಿದ್ದು, ನೀರು ನಿಂತಿರುವ ಕಾರಣ ಸಾಂಕ್ರಾಮಿಕ‌ ರೋಗಗಳು‌ ಹರಡುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯೂ ಮುಂಜಾಗ್ರತಾ ಕ್ರಮವಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ಯಾವ ಕ್ರಮ‌ತೆಗೆದು ಕೊಳ್ಳಬೇಕು ಎಂದು ಆರೋಗ್ಯ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿದರು.
ಹಿರಿಯೂರಿನ‌ ಅಮ್ಮನಹಟ್ಟಿ ಗ್ರಾಮದಲ್ಲಿನ ಕಾಳಜಿ ಕೇಂದ್ರಗಳಿಗೆ ಭೇಟಿ‌ ಮಾಡಿದ್ದು, ಕಾಳಜಿ ಕೇಂದ್ರ ಸಮೂದಾಯ ಭವನಗಳಲ್ಲಿ ಗ್ರಾಮದ ಎಂಟು‌ ಕುಟುಂಬಗಳ 30 ಜನರು ತಂಗಲು ವ್ಯವಸ್ಥೆ ಮಾಡಲಾಗಿದೆ.‌ಇಲ್ಲಿನ‌ಜನರಿಗೆ ಸಾಂಕ್ರಾಮಿಕ ರೋಗದ ಬಗ್ಗೆ ಹಾಗೂ ಮುನ್ನೆಚ್ಚರಿಕೆಯ ಬಗ್ಗೆ ಅರಿವನ್ನು ಮೂಡಿಸಲಾಯಿತು. ಇದರಲ್ಲಿ ಮೊದಲಿಗೆ ನೀರಿನ ಮಾದರಿ ‌ಹಾಗೂ ಸ್ವಚ್ಚತೆ ಬಗ್ಗೆಯೂ ಕೂಡ ಮಾಹಿತಿಯನ್ನು ನೀಡಿದ್ದು, ಈ ಸಮಯದಲ್ಲಿ ಸಿಎಂಡಿ ವಿಭಾಗದ ಆರೋಗ್ಯ ಮೇಲ್ವಿಚಾರಕರಾದ ಎಂ‌ಬಿ ಹನುಂಮತಪ್ಪ, , ಆಂಜನೇಯ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ಯೋಗೇಶ್, ಪುನೀತ್ ಸಿರೀಶ್ ,ಪ್ರಸನ್ನ , ಶಿವಕುಮಾರ್ ಹಾಗೂ ರುದ್ರಮುನಿ‌ ಇದ್ದರು

 

 

Leave a Reply

Your email address will not be published. Required fields are marked *