ಮಂಕಿಪಾಕ್ಸ್ ಮತ್ತು ಡೆಂಗಿ ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ

ಆರೋಗ್ಯ

ಮಂಕಿಪಾಕ್ಸ್ ಮತ್ತು ಡೆಂಗಿ ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ
ಸಾಂಕ್ರಮಿಕ ರೋಗಗಳಾದ ಮಂಕಿಪಾಕ್ಸ್ ಮತ್ತು ಡೆಂಗಿ ಜ್ವರದ ಬಗ್ಗೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಮಂಕಿಪಾಕ್ಸ್: ಮಂಕಿಪಾಕ್ಸ್ ಪ್ರಾಣಿ ಜನ್ಯ ರೋಗವಾಗಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. 1958ರಲ್ಲಿ ಮೊದಲಬಾರಿಗೆ ಈ ರೋಗ ಕಂಡುಬಂದಿದ್ದು, 1970ರಲ್ಲಿ ಮಾನವರಲ್ಲಿ ಕಂಡುಬಂದಿರುತ್ತದೆ.
ಮಂಕಿಪಾಕ್ಸ್ ವೈರಸ್‍ನಿಂದ ಹರಡುತ್ತದೆ. ಇಲಿ, ಹೆಗ್ಗಣ, ಅಳಿಲು ಹಾಗೂ ಇತರೆ ಚಿಕ್ಕ ಪ್ರಾಣಿಗಳಲ್ಲಿ ಈ ವೈರಸ್ ಕಂಡುಬರುತ್ತದೆ. ಆಫ್ರೀಕಾದ ಇಲಿಗಳಲ್ಲಿ ಈ ವೈರಸ್ ಪ್ರಥಮ ಬಾರಿಗೆ ಪತ್ತೆಯಾಯಿತು. ಇತ್ತೀಚಿನ ದಿನಗಳಲ್ಲಿ ಅಮೇರಿಕಾ, ಯೂರೋಪ್ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ವೈರಸ್ ಹರಡಿದೆ. ಮಂಕಿಪಾಕ್ಸ್ ರೋಗದಲ್ಲಿ ಮಧ್ಯ ಆಫ್ರಿಕಾ ಹಾಗೂ ಪಶ್ಚಿಮ ಆಫ್ರಿಕಾ ಎಂಬ 2 ಪ್ರಭೇದಗಳಿವೆ. ಮಧ್ಯ ಆಫ್ರಿಕಾ ಪ್ರಭೇದ ಮಾರಕವಾಗಿದೆ.

 

 

 


ರೋಗ ಹರಡುವ ಬಗ್ಗೆ: ಈ ರೋಗದ ವೈರಸ್ ಇರುವ ಪ್ರಾಣಿಗಳು ಕಚ್ಚಿದಾಗ, ನೆಕ್ಕಿದಾಗ ವೈರಸ್ ಮಾನವನ ದೇಹದೊಳಗೆ ಹೋಗಿ ಪ್ರಭಾವ ಬೀರುತ್ತದೆ. ವೈರಸ್ ಹೊಂದಿದ ಪ್ರಾಣಿಗಳನ್ನು ಸೇವಿಸುವುದರಿಂದಲೂ ಈ ರೋಗ ಬರುತ್ತದೆ. ಮಾನವನಿಂದ ಮಾನವನಿಗೆ ಉಸಿರಾಟದ ಮೂಲಕ ಹರಡುತ್ತದೆ. ಕೆಮ್ಮು, ತಲೆನೋವು, ಮೈಕೈನೋವು, ಸುಸ್ತು, ದುಗ್ಧಗ್ರಂಥಿಗಳ ಊತ (ಗುಳ್ಳೆ) ಈ ರೋಗದ ಲಕ್ಷಣವಾಗಿದೆ. ಗುಳ್ಳೆಗಳು ಮುಖ್ಯವಾಗಿ ಮುಖ, ಕೈ, ಕಾಲುಗಳಲ್ಲಿ ಕಂಡುಬರುತ್ತದೆ. ಈ ಗುಳ್ಳೆಗಳು ನೋಡಲು ಸ್ಮಾಲ್ ಫಾಕ್ಸ್ ಗುಳ್ಳೆಗಳಂತೆ ಕಾಣುತ್ತವೆ. 5 ರಿಂದ 21 ದಿನದೊಳಗೆ ಈ ರೋಗವು ಹರಡುತ್ತದೆ ಎಂದು ಹೇಳಿದರು.

ಸುದ್ದಿ‌ಜಾಹೀರಾತಿಗೆ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *