ಮೀಸಲಾತಿ ಬಗ್ಗೆ ವಿದ್ಯಾರ್ಥಿಗಳಿಗೆ ಸರಿಯಾಗಿ ಆರ್ಥ ಮಾಡಿಕೊಂಡಿಲ್ಲ

ಜಿಲ್ಲಾ ಸುದ್ದಿ

ಮೀಸಲಾತಿ ವಿಚಾರ ಬಂದಾಗ 2018 ರಲ್ಲಿ‌ ನಾನು ಸಂವಿಧಾನ ಓದು ಎಂಬ ಪುಸ್ತಕವನ್ನು ಬರೆದಿದ್ದು ಇದರಲ್ಲಿ ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎನ್ನುವ ಅಭಿಯಾನವನ್ನು ಶುರು ಮಾಡಿದ್ದೆವು ಎಂದು ನಿವೃತ್ತ ನಾಯಾಧೀಶರಾದ ನಾಗಮೋಹನ್ ದಾಸ್ ಹೇಳಿದರು. ಅವರು ಖಾಸಗಿ ಹೋಟೇಲ್ ಮೀಸಲಾತಿ ಸಂಬಂಧಪಟ್ಟಂತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

 

 


ಸಂವಿಧಾನದ ಮಹತ್ವವನ್ನು ತಿಳಿದರೆ ದೇಶದ ಭವಿಷ್ಯದಲ್ಲಿ ಒಳಿತಾಗುತ್ತದೆ. ಎಂಬುದಾಗಿತ್ತು.‌ಅದರಿಂದ ಸಂವಿಧಾನ ಓದು ಅಭಿಯಾನವನ್ನು ಮಾಡಿದ್ದೆವು, ಸಂವಿಧಾನ ಓದು ಅಭಿಯಾನದಲ್ಲಿ ಮೂಡಿದ್ದು ಮೀಸಲಾತಿಯ ಬಗೆಗಿನ ಪ್ರಶ್ನೆಗಳು ಇದರಿಂದ ತಿಳಿದು ಬಂದಿದ್ದು, ವಿದ್ಯಾರ್ಥಿಗಳಿಗೆ ಮೀಸಲಾತಿಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲವಾಗಿದೆ. ಅವರಿಗೆ ತಪ್ಪು ಅಭಿಪ್ರಾಯಗಳನ್ನು ಮಾಹಿತಿಯನ್ನು‌ ನೀಡಲಾಗಿದೆ. ಎಂಬ ಸತ್ಯ ನಮಗೆ ತಿಳಿದು ಬಂತು.ಇದರಿಂದ ನಾನು ಮತ್ತೊಂದು ಪುಸ್ತಕವನ್ನು ಬರೆದಿದ್ದು, ಅದು ಮೀಸಲಾತಿ ಮತ್ತು ಭ್ರಮೆ ಎನ್ನುವ ಹೆಸರಿದ್ದಾಗಿದೆ. ಸಂವಿಧಾನದಲ್ಲಿ ಮೀಸಲಾತಿಯನ್ನು ಏಕೆ ಸೇರಿಸಿದ್ದಾರೆ ಎಂದರೆ ನಮ್ಮದು ಜಾತಿ ವ್ಯವಸ್ಥೆ, ಜಾತಿ ಮತ್ತು ಕಸುಬು ಬದಲಾಯಿಸುವ ಹಾಗಿಲ್ಲ, ಅಂತರ ಜಾತಿ ವಿವಾಹ ಮಾಡಿಕೊಳ್ಳುವಾಗಿಲ್ಲ‌, ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಾಗಿಲ್ಲ, ಸತ್ತ ಮೇಲೂ ಒಂದೆ ಸ್ಮಶಾನದಲ್ಲಿ ಸಂಸ್ಕಾರ ಮಾಡುವ ಹಾಗಿಲ್ಲ, ಜಾತಿಗೊಂದು ಸ್ಮಶಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾತಿ ವ್ಯವಸ್ಥೆಯಲ್ಲಿ ಮೇಲ್ಜಾತಿಗಳು ಕೆಳ ಜಾತಿಗಳೂ ಇವೆ.ಮೀಸಲಾತಿ ಎಂದರೆ ಬಡತನ ನಿವಾರಣೆ, ಜಾತಿ ವಿನಾಶದ ಕಾರ್ಯಕ್ರಮವಲ್ಲ, ಮೀಸಲಾತಿ ಎಂದರೆ ನೂರಾರು ವರ್ಷಗಳಿಂದ ಮೀಸಲಾತಿಯಿಂದ ವಂಚಿರಾಗಿರುವವರಿಗೆ ಅವಕಾಶ ನೀಡಬೇಕು ಎಂದು ಮೀಸಲಾತಿ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂಕೆ ತಾಜ್ ಪೀರ್, ಪ್ರಧಾನ‌ಕಾರ್ಯದರ್ಶಿ ಸಂಪತ್ ಕುಮಾರ್ ಎಸ್ಟಿ ಸೆಲ್ ಅಧ್ಯಕ್ಷ ಅಂಜಿನಪ್ಪ,ವಕೀಲರಾದ ಅನಂತ್ ಹಾಗೂ ಕಾಂಗ್ರೆಸ್ ಮುಖಂಡ ರಘು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *