ಸಹಾಯ ಮಾಡುವ ನೆಪದಲ್ಲಿ ಸಿಪಿಐಯಿಂದ ಅತ್ಯಾಚಾರ?

ಜಿಲ್ಲಾ ಸುದ್ದಿ

ಸಹಾಯ ಮಾಡುವುದಾಗಿ ನಂಬಿಸಿ ವಿದ್ಯಾರ್ಥಿನಿ‌ ಮೇಲೆ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಚಳ್ಳಕೆರೆ ಸಿಪಿಐ ಜಿಬಿ ಉಮೇಶ್ ಮೇಲೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪೊಲೀಸ್ ಇನ್ಸ್ ಪೆಕ್ಟರ್ ಜಿಬಿ ಉಮೇಶ್ ವಿರುದ್ಧ ಚಿತ್ರದುರ್ಗದ ಮಹಿಳಾ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು,

 

 

5 ವರ್ಷದ ಹಿಂದೆ ದಾವಣಗೆರೆಯಲ್ಲಿ ಇನ್ಸ್​ಪೆಕ್ಟರ್ ಆಗಿದ್ರು, ನಿವೇಶನ ಸಮಸ್ಯೆ ಹಿನ್ನೆಲೆ‌ ಉಮೇಶ್​ ಬಳಿ ಸಹಾಯ ಕೇಳಿದ್ದೆವು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದರು. ಯುವತಿ ಶಿವಮೊಗ್ಗದಲ್ಲಿ ಓದುತ್ತಿರುವಾಗಲೂ ಅತ್ಯಾಚಾರ..?-
5 ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪವಿದೆ.

ಸಿಪಿಐ ಉಮೇಶ್​ ಈಗಾಗ್ಲೆ ಇಬ್ಬರನ್ನ ಮದುವೆಯಾಗಿದ್ದರು. 3ನೇ ಹೆಂಡ್ತಿ ತರ ಇರು ಎಂದು ಯುವತಿಗೆ ಉಮೇಶ್​ ಒತ್ತಡ ಹಾಕುತ್ತಿದ್ದರು. ಯುವತಿ ಹಾಗೂ ಪೋಷಕರಿಗೂ ಉಮೇಶ್​ ಪ್ರಾಣ ಬೆದರಿಕೆ ಹಾಕಿದ್ಧಾರೆ. ಉಮೇಶ್​ ವಿರುದ್ಧ ಕಲಂ 376 ಕ್ಲಾಸ್ (2)(k)(n), 323 ,504, 506 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾಗ್ತಿದ್ದಂತೆ ಉಮೇಶ್ ನಾಪತ್ತೆಯಾಗಿದ್ಧಾರೆ.

Leave a Reply

Your email address will not be published. Required fields are marked *