ಗ್ರಾಮ ನೈರ್ಮಲ್ಯ ಯೋಜನೆ ಕುರಿತು ಒಂದು ದಿನದ ಕಾರ್ಯಗಾರ

ಜಿಲ್ಲಾ ಸುದ್ದಿ

ಗ್ರಾಮ ನೈರ್ಮಲ್ಯ ಯೋಜನೆ ಕುರಿತು ಒಂದು ದಿನದ ಕಾರ್ಯಗಾರ

 

 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿತ್ರದುರ್ಗ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಗ್ರಾಮ ನೈರ್ಮಲ್ಯ ಯೋಜನೆ ತಯಾರಿಸುವ ಕುರಿತು ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಮುಖ್ಯ ಯೋಜನಾ ಅಧಿಕಾರಿಗಳ  ಅಧ್ಯಕ್ಷತೆಯಲ್ಲಿ ಗ್ರಾಮ ನೈರ್ಮಲ್ಯ ಯೋಜನೆ ಕುರಿತು ಗುರುವಾರ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಗಾರ ನಡೆಯಿತು.


ಚಿತ್ರದುರ್ಗ ತಾಲ್ಲೂಕಿನ ಮೇದೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗಳಹಳ್ಳಿ ಗ್ರಾಮದಲ್ಲಿ ಗ್ರಾಮ ನೈರ್ಮಲ್ಯ ಯೋಜನೆ ಕುರಿತು ತರಬೇತಿ ಅಂಗವಾಗಿ Participated Rural appraisal ಮೂಲಕ ಪ್ರಾಯೋಗಿಕ ಗ್ರಾಮ ನಕ್ಷೆ ತಯಾರಿಸಿ ಪರಿಣಾಮಕಾರಿಯಾಗಿ ಮಾಹಿತಿ ನೀಡಲಾಯಿತು.
ಕೇಂದ್ರ  ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-1ಅನ್ನು ಅನುμÁ್ಠನಗೊಳಿಸುತ್ತಿದೆ.
ಈ ಯೋಜನೆಯು ಎಲ್ಲಾ ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ಮುಕ್ತತೆಯ ಸುಸ್ಥಿರತೆಯನ್ನು ನಿರಂತರಗಾಗಿ ಕಾಯ್ದುಕೊಳ್ಳುವುದು ಹಾಗೂ ಗ್ರಾಮಗಳನ್ನು ಓಡಿಎಫ್ ಪ್ಲಸ್ ಮಾಡಲು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ವಿಲೇವಾರಿಯನ್ನು ಖಾತರಿಪಡಿಸಿಕೊಳ್ಳುವ ಉದ್ದೇಶದೊಂದಿಗೆ ಸಮುದಾಯದ ನೇತೃತ್ವ ಯೋಜನೆಯ ಅನುμÁ್ಠನ ನೈರ್ಮಲ್ಯ ಮೂಲ ಸೌಕರ್ಯಗಳ ಕಾರ್ಯಚರಣೆ ನಿರ್ವಹಣೆಯನ್ನು ಕೇಂದ್ರಿಕರಿಸಿರುತ್ತದೆ.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಅಭಿಯಾನವು ವಿಕೇಂದ್ರಿಕೃತ ಯೋಜನೆಯನ್ನು ಉತ್ತೇಜಿಸುತ್ತದೆ. ಗ್ರಾಮದ ಜನರು ತಮ್ಮ ಊರಿನ ನೈರ್ಮಲ್ಯದ ಸ್ಥಿತಿಯನ್ನು ವಿಶ್ಲೇಷಿಸಲು ಮತ್ತು ಅವರು ಸಾಧಿಸಲು ಉದ್ದೇಶಿಸಿರುವ ಸುಧಾರಣೆಯನ್ನು ತರಲು ಅಲ್ಲಿನ ಸ್ಥಳೀಯ ಜನರ ಭಾಗವಹಿಸುವಿಕೆ ಮತ್ತು ಪಾಲ್ಗೊಳ್ಳುವಿಕೆಯು ಬಹಳ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಆಪೇಕ್ಷಿತ ಮಟ್ಟದ ಸೇವೆ ಮತ್ತು ಸುಧಾರಣೆಗಳನ್ನು ಸಾಧಿಸಲು ಮೂರು ಹಂತದಲ್ಲಿ ನೈರ್ಮಲ್ಯ ಕ್ರಿಯಾ ಯೋಜನೆಯನ್ನು ತಯಾರಿಸಲಾಗುವುದು.
ಗ್ರಾಮ ಹಂತದ ನೈರ್ಮಲ್ಯ ಯೋಜನೆ, ತಾಲ್ಲೂಕು ಹಂತದ ನೈರ್ಮಲ್ಯ ಯೋಜನೆ, ಜಿಲ್ಲಾ ಹಂತದ ನೈರ್ಮಲ್ಯ ಯೋಜನೆ, ರಾಜ್ಯ ಹಂತದ ನೈರ್ಮಲ್ಯ ಯೋಜನೆ ತಯಾರಿ. ಎಲ್ಲಾ ಗ್ರಾಮಗಳನ್ನು ಓಡಿಎಫ್ + ಮಾಡುವ ಹಾಗೂ ಘನ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ, ನಿರಂತರ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳಿಗಾಗಿ ಈಗಾಗಲೇ ಅಭಿವೃದ್ಧಿಪಡಿಸಿರುವ ಮೂಲಭೂತಸೌಕರ್ಯಗಳ ಸುಸ್ಥಿರ ಕಾರ್ಯಕ್ಷಮತೆಯನ್ನು ಸಹ ಕಾಯ್ದುಕೊಳ್ಳುವುದು ಈ ಓಡಿಎಫ್ + ಸುಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಾಧಾನ್ಯ ಅಂಶವಾಗಿರುತ್ತದೆ.
ಕಾರ್ಯಗಾರದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ನರೇಗಾ ಮತ್ತು ಪಂ.ರಾ) ಎಸ್‍ಬಿಎಮ್-ಜಿ ಜಿಲ್ಲಾ ಸಮಾಲೋಚಕರು, ಹಾಗೂ ಜೆಜೆಎಮ್- ಡಿಪಿಎಮ್ ಸಂಯೋಜಕರು, ಐಎಸ್‍ಎ ಹಾಗೂ ಐಎಸ್‍ಆರ್‍ಎ ತಂಡದ ಸದಸ್ಯರು, ಮೇಗಳಹಳ್ಳಿ ಗ್ರಾಮದ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *