ಹಳೇ ದ್ವೇಷ ಕೊಲೆ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ

ಕ್ರೈಂ

ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ‌ಕೊಲೆ ಮಾಡಿದ್ದ ಆರೋಪಿಗಳಿಗೆ ಇಂದು 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಾಲ್ಕನಿ ಅವರು ಆದೇಶಿಸಿ ತೀರ್ಪು ನೀಡಿದ್ದಾರೆ.

 

 

ಹೊಳಲ್ಕೆರೆ ತಾಲೂಕಿನ ಅವಳೆ‌ಹಟ್ಟಿ ಗ್ರಾಮದಲ್ಲಿ ಕೊಲೆಯಾಗಿದ್ದ ತಿಪ್ಪೇಸ್ವಾಮಿ ಅವರು ಮನೆಯ ಮುಂದೆ ನಿಂತಿದ್ದು, ಅವರ ಮೇಲೆ 1 ರಿಂದ 12 ಜನ ಆರೋಪಿಗಳು ಹಳೆಯ ದ್ವೇಷದಿಂದ ತಮ್ಮ ಮನೆಯ ಹಿತ್ತಲಿನ ಹುಲ್ಲಿನ‌ ಬಣವೆ ‌ಕಳುವಾಗಿರುವ ನೆಪ‌ ಇಟ್ಟುಕೊಂಡು ಕೈಯಲ್ಲಿ‌ ದೊಣ್ಣೆ, ಕಲ್ಲು ಹಾಗೂ ಕಬ್ಬಿಣದ ರಾಡು ಹಿಡಿದುಕೊಂಡು‌ ಕೊಲೆ ಮಾಡುವ ಉದ್ದೇಶದಿಂದ ಬಂದು ಅವಾಚ್ಯ ಶಬ್ದದಿಂದ ಬೈದು ಹೊಡೆದು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಈ ಜಗಳದಲ್ಲಿ ಗಾಯಗೊಂಡಿದ್ದ ಸಾಕ್ಷಿಯು ಕೊಟ್ಟ ದೂರಿನ ಮೇರೆ ಹೊಳಲ್ಕೆರೆ ಪೋಲಿಸ್ ಇನ್ಸಪೆಕ್ಟರ್ ರವೀಶ್ ಅವರು ದೂರು ದಾಖಲು ಮಾಡಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆಯೂ 2ನೇ ಅಪರ ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಆರೋಪಿತರ ಮೇಲಿನ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶರು ಒಂದನೇ ಆರೋಪಿಗೆ ಜೀವಾವಧಿ‌ ಶಿಕ್ಷೆ ಒಂದು ಲಕ್ಷ ದಂಡ, ಎರಡನೇ ಆರೋಪಿಗೆ ಹತ್ತು ವರ್ಷ ಕಠಿಣ ಶಿಕ್ಷೆ ಐವತ್ತು ಸಾವಿರ ದಂಡ ವಿಧಿಸಿದ್ದಾರೆ. ಒಂದನೇ ಮತ್ತು ಎರಡನೇ ಆರೋಪಿಗಳಾದ ನಾಲ್ಕು ಜನರಿಗೆ ತಲಾ ನಾಲ್ಕು ತಿಂಗಳ ಕಠಿಣ ಶಿಕ್ಷೆ ಹಾಗೂ ಒಂದು ಸಾವಿರ ದಂಡ ಹಾಗೂ ಇನ್ನೊಬ್ಬ ಆರೋಪಿಗೆ ಒಂದು ತಿಂಗಳ‌ ಕಠಿಣ ಸಜೆ ಮತ್ತು ಒಂದು ಸಾವಿರ ದಂಡ ವಿಧಿಸಿ‌ ತೀರ್ಪು ನೀಡಿದ್ದಾರೆ.

Leave a Reply

Your email address will not be published. Required fields are marked *