ಸೋಮವಾರ ಪೇಟೆ ಗುಡ್ಡಗಾಡಿನಲ್ಲಿ‌ ರೋಮಾಂಚನಗೊಳಿಸಿದ ಜೀಪ್ ರೇಸ್

ರಾಜ್ಯ

ಸೋಮವಾರಪೇಟೆ ಗುಡ್ಡಗಾಡಿನಲ್ಲಿ ಜೀಪುಗಳ ಘರ್ಜನೆ

 

 

ಕೋವಿಡ್ ನಂತರ ಎರಡು ವರ್ಷಗಳ ನಂತರ ಸ್ಥಗಿತಗೊಂಡಿದ್ದ ಸೋಮವಾರಪೇಟೆಯ “ಎಸ್ಕೇಪ್ ಟು ನೇಚರ್ ” ಆಫ್ ರೋಡ್ ಈ ಭಾರಿ ಅದ್ದೂರಿಯಾಗಿ ನಡೆಯಿತು. ಇಲ್ಲಿನ ಶಾಂತಳ್ಳಿ ದೇವಾಲಯದಿಂದ ಚಾಲನೆ ದೊರೆತು ಮಲ್ಲಳ್ಳಿ ಜಲಪಾತದ ಮಾರ್ಗ ಸೇರಿದಂತೆ, ಸುತ್ತಮುತ್ತಲಿನ ಬೆಟ್ಟಗುಡ್ಡದ ಏರಿಳಿತದ ನದಿ ತೊರೆಯ ನಡುವಿನ ಕೆಸರುಮಯ ರಸ್ತೆಯಲ್ಲಿ ಜೀಪುಗಳು ಘರ್ಜಿಸಿದವು,

ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಜೀಪು, ಜಿಪ್ಸಿ, 4×4 ,ಇನ್ವೇಡರ್, ಕಮಾಂಡರ್, ಡಿಐ, 540,ಲಾಂಗ್ ಚಾಸಿಯಂತಹಾ ವಾಹನಗಳು ಕಲ್ಲಿನ ಬೆಟ್ಟದಲ್ಲಿ ಏರಿಳಿತದ ಸಾಗುತ್ತಿದ್ದ ದೃಶ್ಯ ರೋಮಾಂಚನವಾಗಿತ್ತು, ಕೆಲವೊಂದೆಡೆ ವಾಹನಗಳು ಸಿಲುಕಿಕೊಂಡು ಮತ್ತೊಂದು ವಾಹನದಲ್ಲಿ ಎಳೆದು ತೆಗೆಯುವ ದೃಶ್ಯವ ಮೈ ನವಿರೇಳಿಸುತ್ತದೆ. ಇಲ್ಲಿ ಓವರ್ ಟೇಕ್ ಮಾಡುವಂತಿಲ್ಲ ಬದಲಾಗಿ ಎಲ್ಲಾ ಅಡರುತೊಡರು ದಾಟಿ ಫಿನಿಷಿಂಗ್ ಲೈನಿಗೆ ತಲುಪುವುದೇ ಈ ಆಫ್ ರೋಡ್ ರೇಸ್ ನ ಉದ್ದೇಶ.

Leave a Reply

Your email address will not be published. Required fields are marked *