ಜಲ‌ಜೀವನ ಮಿಷನ್ ಅನುಷ್ಠಾನ ಪ್ರತೀ‌ ಗ್ರಾಮದಲ್ಲಿಯೂ ಆಗಬೇಕು

ಜಿಲ್ಲಾ ಸುದ್ದಿ

ದೇಶದ ಪ್ರತಿ ಹಳ್ಳಿಗಳ ಮನೆಗಳಿಗೆ ನಳ ಸಂಪರ್ಕವನ್ನು 2024ರ ಒಳಗೆ ಕಲ್ಪಿಸಿ ಕೊಡಲು ಹಾಗು ಪ್ರಧಾನಿ ನರೇಂದ್ರ ಮೋದಿ ಯವರು ಕಂಡ ಕನಸು ನನಸು ಮಾಡಲು ಈ ಜಲ ಜೀವನ್ ಮಿಷನ್ ಯೋಜನೆ ಸಹಕರಿಯಾಗಲಿದೆ ಎಂದು ಸಂಘಟಕರಾದ ಹುಸೇನ್ ತಿಳಿಸಿದರು.

ಮೊಳಕಾಲ್ಮರು ತಾಲೂಕಿನ ರಾಂಪುರ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯತ್ ವಿವಿಧ ಇಲಾಖೆ ಹಾಗು ಸಂಘಟನೆಗಳ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಕಾರ್ಯಾಗಾರ ಕುರಿತು ಮಾತನಾಡಿದರು.

 

 

ನೀರು ಸರಬರಾಜು ಮೂಲ ಸೌಕರ್ಯಗಳ ರಚನೆ ಮಾಡುವುದರ ಮೂಲಕ ಪ್ರತಿ ಗ್ರಾಮೀಣ ಕುಟುಂಬ ಕ್ಕೆ 2024ರ ವೇಳೆಗೆ ಕ್ರಿಯಾತ್ಮಕ ನಳ ಸಂಪರ್ಕ ಕಲ್ಪಿಸುವುದು ಮತ್ತು ನಿಗದಿತ ಗುಣ ಮಟ್ಟದ ನೀರನ್ನು ಒದಗಿಕೊಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತಿಯ ಸಮುದಾಯದಲ್ಲಿ ನೀರಿನ ಮಹತ್ವದ ಕುರಿತು ಜಾಗೃತಿ ಮಾಡಿಸಿ ಜನರ ಜೀವನ ಸುಧಾರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ಯೋಜನೆಯ ವ್ಯವಸ್ಥೆಯನ್ನು ತಿಳಿದು ಕೊಂಡು ಅದರ ಉಪಯೋಗ ಉತ್ತಮ ರೀತಿಯಲ್ಲಿ ಬಳಸುವುದು ನಮ್ಮ ಜವಾಬ್ದಾರಿ. ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವುದು. ಜಲ ಜೀವನ್ ಮಿಷನ್ ಯೋಜನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರು ಕನಿಷ್ಠ 10% ಮತ್ತು sc st ಸಮುದಾಯದ ಸಮಾಜಕ್ಕೆ 5% ನೀಡಿ ನಳದ ಮಾಲೀಕತ್ವ ಪಡೆಯಿರಿ ಎಂದು ಸಲಹೆ ನೀಡಿದರು.
ಸಂದರ್ಭದಲ್ಲಿ ರಾಂಪುರ ಗ್ರಾಮ ಪಂಚಾಯತಿ ಪಿ ಡಿ ಒ ಗುಂಡಪ್ಪ, ಗ್ರಾ ಪ ಸದಸ್ಯರು ವಡೆರಹಳ್ಳಿ ಬಸವರಾಜ್, ಭೀಮಲಿಂಗಪ್ಪ ಯಾರಿಸ್ವಾಮಿ, ಶಿವರಾಜ್ ಅಬ್ದುಲ್ ರಹೀಮ್ ಜಿ ಆರ್ ರವಿ ಮುಖ್ಯ ಶಿಕ್ಷಕರು ಹನುಮಂತಪ್ಪ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು

ಸಂದರ್ಭದಲ್ಲಿ ರಾಂಪುರ ಗ್ರಾಮ ಪಂಚಾಯತಿ ಪಿ ಡಿ ಒ ಗುಂಡಪ್ಪ, ಗ್ರಾ ಪ ಸದಸ್ಯರು ವಡೆರಹಳ್ಳಿ ಬಸವರಾಜ್, ಭೀಮಲಿಂಗಪ್ಪ ಯಾರಿಸ್ವಾಮಿ, ಶಿವರರಾಜ್ ಅಬ್ದುಲ್ ರಹೀಮ್, ಜಿ ಆರ್ ರವಿ ಮುಖ್ಯ ಶಿಕ್ಷಕರು ಹನುಮಂತಪ್ಪ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯರು , ಹಾಗೂ ಗ್ರಾ ಪ ಸಿಬ್ಬಂದಿ ಹಾಜರಿದ್ದರು.

ಸುದ್ದಿಗಾಗಿ ಸಂಪರ್ಕಿಸಿ : 8660924503

 

Leave a Reply

Your email address will not be published. Required fields are marked *