ಪಡಿತರ ಅಕ್ಕಿ ಹೇಗೆ ಮೆಕ್ಕೆ ಜೋಳ ಆಯ್ತು‌ ?

ಆರೋಗ್ಯ

ಅಕ್ರಮ ಪಡಿತರ ಅಕ್ಕಿ ವಶ

ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಕ್ವಿಂಟಾಲ್ ಗಟ್ಟಲೆ ಅಕ್ಕಿ ಸಮೇತ ಲಾರಿ ವಶಕ್ಕೆ ಪಡೆದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.

 

 

ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಿದ್ದು, ಬಳ್ಳಾರಿಯಿಂದ ತುಮಕೂರು ಕಡೆಗೆ ಪಡಿತರ ಅಕ್ಕಿ ತುಂಬಿಕೊಂಡು ಹೊರಟಿದ್ದ ಇಚರ್ ಲಾರಿಯನ್ನ ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ತಡೆದ ಲಾರಿಯನ್ನು ಪರಿಶೀಲನೆ ನಡೆಸಿದ್ದಾರೆ. ಲಾರಿಯಲ್ಲಿ ಪಡಿತರ ಅಕ್ಕಿ ತುಂಬಿದ್ದ ಸುಮಾರು 220 ಬ್ಯಾಗ್ ಕಂಡು ಬಂದಿದ್ದು ತಕ್ಷಣವೇ ಲಾರಿ ಚಾಲಕನ್ನು ಎಲ್ಲಿಂದ ಎಂದು ಕೇಳಿದರೆ ನನಗೆ ಗೊತ್ತಿಲ್ಲಾ ನಾನು ತಳುಕಿನಿಂದ ಲಾರಿ ಹತ್ತಿಕೊಂಡು‌ ಬಂದಿದ್ದೇನೆ ಲಾರಿಯಲ್ಲಿ ಮೆಕ್ಕೆ ಜೋಳ ಇದೆ ಎಂದು ಸುಳ್ಳು ಹೇಳಿದ್ದಾನೆ ತಕ್ಷಣವೇ ಬ್ಯಾಗ್ ಬಿಚ್ಚಿ ನೋಡಿದರೆ ಪಡಿತರ ಅಕ್ಕಿ ಇದ್ದಿದ್ದು ಕಂಡು ಬಂದಿದೆ. ಅಕ್ಕಿ ತುಂಬಿದ ಲಾರಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಸುದ್ದಿಗಾಗಿ ಈ ದೂರವಾಣಿ‌ ನಂಬರ್ ಗೆ ಕರೆ ಮಾಡಿ 8660924503
ನಂತರ ಮಾತನಾಡಿದ ಅವರು ಈ ಭಾಗದಲ್ಲಿ ಕಡು ಬಡವರಿದ್ದು ಸರ್ಕಾರ ಉಚಿತವಾಗಿ ಅಕ್ಕಿ ನೀಡುತ್ತದೆ ಇಂತಹ ಬಡವರ ಅಕ್ಕಿಯನ್ನ ಹೀಗೆ ಅಕ್ರಮವಾಗಿ ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಇಂತಹ ಕೃತ್ಯಕ್ಕೆ ಅವಕಾಶ ನೀಡುವುದಿಲ್ಲ .ಯಾವುದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಗಡಿ ಭಾಗಗಳಲ್ಲಿ ಆಹಾರ ಹಾಗೂ ಕಂದಾಯ ಅಧಿಕಾರಿಗಳನ್ನು ನೇಮಿಸಿ ಬರುವಂತಹ ಲಾರಿಗಳ ಬಗ್ಗೆ ಗಮನ ಹರಿಸಲಾಗುವುದು ಮಾಹಿತಿ ಬಂದ ತಕ್ಷಣವೇ ಅನುಮನಸ್ಪದವಾಗಿ ತಿರುಗಾಡುವಂತಹ ಲಾರಿಗಳ ಪಡೆದು ಪರಿಶೀಲಿಸಲಾಗುವುದು ಇಂತಹ ಘಟನೆಗಳು ಪುನಃ ಪುನಃ ಜರಗದಂತೆ ಕ್ರಮವಹಿಸಲಾಗುವುದು ಯಾವುದೇ ಕಾರಣಕ್ಕೂ ಬಡವರ ಅಕ್ಕಿ ಮಾರಾಟ ಮಾಡುವುದಕ್ಕೆ ಬಿಡುವುದಿಲ್ಲ,ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *