ಹವಾಮಾನಕ್ಕೆ ತಕ್ಕಂತೆ ಅಧುನಿಕ‌ ಬೆಳೆ‌ ಬೆಳೆಯಿರಿ

ಜಿಲ್ಲಾ ಸುದ್ದಿ

ರೈತರು ವೈಜ್ಞಾನಿಕವಾಗಿ ಮತ್ತು ಆಧುನಿಕವಾಗಿ ಕೃಷಿಯಲ್ಲಿ ತೊಡಗಿ ಸ್ವಾವಲಂಬಿಗಳಾದಷ್ಟು ಸರ್ಕಾರಕ್ಕೆ ಸಾರ್ಥಕವಾದ ಭಾವನೆ ಬರುತ್ತದೆ ಹೆಚ್ಚು ಹೆಚ್ಚು ರೈತರು ವೈಜ್ಞಾನಿಕವಾಗಿ ಬಗೆ ಬಗೆಯ ತಳಿಗಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ತಹಶೀಲ್ದಾರ್ ಎನ್ ರಘುಮೂರ್ತಿ ರೈತರಿಗೆ ಸಲಹೆ ನೀಡಿದರು. ಕೊಂಡಲಹಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ ರವರ ಮನೆಯಲ್ಲಿ ತೋಟಗಾರಿಕೆ ಬೆಳೆಯ ಪ್ರಾತ್ಯಕ್ಷಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬೀಳುವ ಮಳೆ ಪ್ರಮಾಣ ಅತಿ ಕಡಿಮೆಯಾದರೂ ಕೂಡ ಹೀಗಿರುವ ನೀರಿನ ಸಾಂದ್ರತೆಗನುಸಾರವಾಗಿ ಆಧುನಿಕವಾಗಿ ಬೆಳೆಗಳನ್ನು ಬೆಳೆದು ಇಲ್ಲಿಯ ಹವಾಮಾನ ಮತ್ತು ಮಣ್ಣಿನ ಗುಣಗಳ ಅನುಗುಣವಾಗಿ ಉತ್ಕೃಷ್ಟವಾದ ಬೆಳೆಗಳನ್ನು ಬೆಳೆಯಲು ಸಲಹೆ ನೀಡಿದರು. ಹೆಚ್ಚು ಹೆಚ್ಚು ಯುವಕರು ಮತ್ತು ಕಾಲೇಜ್ ವಿದ್ಯಾರ್ಥಿಗಳು ಈ ಒಂದು ಪ್ರಾತ್ಯಕ್ಷಿತೆಯ ಪ್ರಯೋಜನ ಪಡೆಯಬೇಕು ಯುವಕರು ಹೆಚ್ಚು ಕೃಷಿಯಲ್ಲಿ ತೊಡಗಿದಷ್ಟು ತಮ್ಮಲ್ಲಿ ಗಟ್ಟಿತನ ಬೆಳೆಯುತ್ತದೆ ಎಂತಹ ಸಮಸ್ಯೆಗಳು ಬಂದರೂ ಕೂಡ ಮುಂದಿನ ದಿನಗಳಲ್ಲಿ ನಿರ್ಭೀತಿಯಿಂದ ಎದುರಿಸಲುಸಹಕಾರಿಯಾಗುತ್ತದೆ ಹಾಗಾಗಿ ಹೆಚ್ಚು ಹೆಚ್ಚು ಯುವಕರು ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪರಿಚಯ ಮಾಡಿಕೊಳ್ಳಬೇಕು ಇದರ ಮುಖಾಂತರ ಸ್ವಾವಲಂಬಿಗಳಾಗಿ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು ಈ ಸಂದರ್ಭದಲ್ಲಿ ಪ್ರಗತಿಪರ ರೈತರದಂತದಯಾನಂದ ಮತ್ತು ಮುಖಂಡರಾದ ಕೃಷ್ಣಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *