ಸರ್ಕಾರದಿಂದಲೇ ಓಬವ್ವ‌ ಜಯಂತಿ‌ ಆಚರಣೆ

ರಾಜ್ಯ

ಬೆಂಗಳೂರಿನ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅರವಿಂದ ಭವನ ನೃಪತುಂಗ ರಸ್ತೆ ಕಚೇರಿಯಲ್ಲಿ ಇಂದು ರಾಜ್ಯ ಮಟ್ಟದ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ನವೆಂಬರ್ 27 ಭಾನುವಾರದಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ಅದ್ದೂರಿಯಾಗಿ ಸರ್ಕಾರದ ವತಿಯಿಂದ ಜಯಂತಿಯನ್ನು ಆಚರಣೆ ಮಾಡಲು
ಈಗಾಗಲೇ ಆದೇಶ ಹೊರಡಿಸಿದೆ. ಈ ಕಾರ್ಯ ಕ್ರಮಕ್ಕೆ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ಮಾನ್ಯಮುಖ್ಯಮಂತ್ರಿಗಳ ವಿಶೇಷ ಅನುದಾನಡಿ ರೂ 2 ಕೋಟಿ ಹಣವನ್ನು ಮಂಜೂರು ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ರಾಜ್ಯ ಛಲವಾದಿ ಸಮುದಾಯದ ಪರವಾಗಿ ಅವರಿಗೆ ಹೃದಯ ಪೂರ್ವಕ ಕೃತಘ್ನತೆಗಳನ್ನು ಈ ಸಂದರ್ಭದಲ್ಲಿ ತಿಳಿಸುತ್ತೇನೆ . ಒನಕೆ ಓಬವ್ವಳ ಜಯಂತಿಗೆ ರಾಜ್ಯದಲ್ಲಿರುವ ಛಲವಾದಿ ಸಮುದಾಯದ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ ಎಂದು ಹಾವೇರಿ ಶಾಸಕ ಹಾಗೂ ಎಸ್.ಸಿ .ಎಸ್.ಟಿ ಆಯೋಗದ ಅಧ್ಯಕ್ಷರಾದ ನೆಹರು ಚ ಓಲೇಕಾರ ಪೂರ್ವ ಭಾವಿ ಸಭೆಯಲ್ಲಿ ತಿಳಿಸಿದರು.ವಿಧಾನ ಪರಿಷತ್ತಿನ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ ಅವರು ಜಯಂತ್ಯೋತ್ಸವಕ್ಕೆ ರಾಜ್ಯದ ಹಲವಾರು ಗಣ್ಯವ್ಯಕ್ತಿಗಳನ್ನು ಆಹ್ವಾನಿಸುವ ಬಗ್ಗೆ ಸಲಹೆ ಸೂಚನೆಗಳನ್ನು ಹೇಳಿದರು. ಸಭೆಯಲ್ಲಿ ನಿವೃತ್ತ ಸರ್ಕಾರದ ಅಧೀನ ಕಾರ್ಯದರ್ಶಿ(I A S) ಬಿ.ಸಿದ್ದಯ್ಯ .ಮಾತನಾಡಿ ಈ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಲಹೆ ನೀಡಿದರು.ಛಲವಾದಿ ಯುವನಾಯಕ ಹೆಚ್.ಪಿ.ಕುಮಾರ್.ಚಲನಚಿತ್ರ ನಾಯಕ ನಿರ್ದೇಶಕ ಮದನ್ ಮಲ್ಲು.ಡಾ. ಬಿ.ಆರ್.ಅಂಬೇಡ್ಕರ್ ನಿಗಮದ ಮಾಜಿ ಅಧ್ಯಕ್ಷ ಹೆಬ್ಬಾಳದ ಕೃಷ್ಣಮೂರ್ತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ.ಬೆಸ್ಕಾಂ ಅಧಿಕಾರಿಗಳಾದ ಮುರಾರಿ .ಪುಟಸ್ವಾಮಿ. ಪ್ರೊ.ಲಿಂಗೇಶ್ .ಪ್ರೊ.ದೇವಾನಂದ್. ಚೆಲುವರಾಜ.ವೆಂಕಟೇಶ. ಶಂಭುಕಳಸದ ಇನ್ನೂ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *