ಮುರುಘಾ ಮಠದಲ್ಲಿ ಹೆಣ್ಣು ಮಗು ಪತ್ತೆ: ಅಲರ್ಟ್ ಆದ ಅಧಿಕಾರಿಗಳು

ರಾಜ್ಯ

ಚಿತ್ರದುರ್ಗದ ಮುರುಘಾ ಮಠದಲ್ಲಿ ನಾಲ್ಕುವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಮಠದ ವಸತಿ ಶಾಲೆಯಲ್ಲಿ ಪತ್ತೆಯಾಗಿದ್ದು, ಪೋಷಕರ ಮಾಹಿತಿ ಲಭ್ಯವಾಗಿಲ್ಲ.

 

 

ಚಿತ್ರದುರ್ಗದ ಮುರುಘಾ ಮಠದ ವಸತಿ ಶಾಲಾ ಆವರಣದಲ್ಲಿ ವಸತಿ ಶಾಲೆಯಲ್ಲಿ ಕಂಡು ಬಂದಿದೆ, ಆಗಸ್ಟ್ 26 ರಂದು ಶ್ರೀಗಳ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅಂದೇ ವಸತಿ ಶಾಲಾ ಮಕ್ಕಳನ್ನು ಅಲ್ಲಿಂದ ಸರ್ಕಾರಿ ವಸತಿ ಶಾಲೆಗೆ ಶಿಫ್ಟ್ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ‌ ಮಗುವು ಪತ್ತೆಯಾಗಿದ್ದು, ಪೋಷಕರ ಪತ್ತೆಗಾಗಿ ಪ್ರಕಟಣೆಯನ್ನು ಕೊಡಲಾಗಿತ್ತು. ಮಗುವಿನ ಹೆಸರು ಚಿಗುರು ಎಂದು ತಿಳಿದು ಬಂದಿದ್ದು, ಮಠದ ಹಾಸ್ಟೆಲ್ ನಲ್ಲಿ ಅನಧಿಕೃತವಾಗಿ ಮಗುವಿರಿಸಿಕೊಂಡಿರುವ ಆರೋಪವೂ ಇದೆ. ಜೊತೆಗೆ ಮಡಿಲು ಯೋಜನೆಗೆ ಮಗುವನ್ನು ಸೇರಿಸಿರುವ ಆರೋಪವನ್ನು ಸಮಾಜಿಕ ಕಾರ್ಯಕರ್ತ ಮಧು ಮಾಡಿದ್ದು, ಮಕ್ಕಳ‌ ಕಲ್ಯಾಣ ಸಮಿತಿಗೆ ದೂರ‌ನೀಡಿ ತನಿಖೆಗೆ ಆಗ್ರಹಿಸಿದ್ದಾರೆ. ಇದರಿಂದ ಅಲರ್ಟ್ ಆಗಿರುವ ಅಧಿಕಾರಿಗಳು ಸ್ಥಳ‌ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಅನಧಿಕೃತವಾಗಿ ಮಠದಲ್ಲಿ ಇಟ್ಟುಕೊಂಡರೂ ಕೂಡ. ಯಾಕೆ ಅಧಿಕಾರಿಗಳು ಮೌನ ವಹಸಿದ್ದರು ಎಂದು ಅನುಮಾನ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *