ಶಿಕ್ಷಣವೊಂದೆ ಮೂಲ ಮಂತ್ರವಾಗಬೇಕು

ಜಿಲ್ಲಾ ಸುದ್ದಿ

ಬುಡಕಟ್ಟು ಧಾರ್ಮಿಕ ಆಚರಣೆಗಳ ಜೊತೆ ವೈಚಾರಿಕವಾದ ಸಾಮಾಜಿಕ ಬದಲಾವಣೆ ಮೂಲಕ ಜನಾಂಗವು ಹೊಸ ಪರಿವರ್ತನೆಯಾಗುವ ಅವಶ್ಯಕತೆ ಇದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು ಅವರು ಇಂದು ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯ ಬೊಗನಹಳ್ಳಿ ಗ್ರಾಮದಲ್ಲಿ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ದೇವರ ಎತ್ತುಗಳಿಗೆ ಪೂಜೆ ಕಾರ್ಯಗಳ ಚಾಲನೆ ನೀಡಿ ಮಾತನಾಡಿದರು. ಈ ತಾಲೂಕಿನಲ್ಲಿ ಬುಡಕಟ್ಟು ಸಂಸ್ಕೃತಿ ಇರುವ ಗ್ರಾಮಗಳಲ್ಲಿ ಬಹುತೇಕ ಶಾಂತಿ ಮತ್ತು ಸಾಮರಸ್ಯ ನೆಲೆಸಿದೆ ಈ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಹೊಸ ಆಯಾಮದಲ್ಲಿ ಈ ಜನ ಜೀವನವನ್ನುಬೆಸೆಯಬೇಕಾಗಿದೆ ಈ ಭಾಗದ ಹೆಚ್ಚು ಹೆಚ್ಚು ರೈತರು ಈ ಹವಾಮಾನಕ್ಕೆ ತಕ್ಕಂತೆ ಬೆಳೆಗಳನ್ನುಬೆಳೆಯಬೇಕಾಗಿದೆ. ಯಾವುದೇ ಕಾರಣಕ್ಕೂ ಪ್ರತಿ ಕುಟುಂಬದಲ್ಲಿ ಯಾವುದೇ ಮಗುವನ್ನು ಶಾಲೆಯಿಂದ ಹೊರಗೆ ಉಳಿಯುವಂತೆ ಮಾಡ ಕೂಡದು ಪ್ರತಿಯೊಂದು ಮಗುವಿಗೂ ಉನ್ನತ ಶಿಕ್ಷಣ ದೊರೆಯುವಂತಾಗಬೇಕು ಶೈಕ್ಷಣಿಕ ನೆಲೆಗಟ್ಟು ಹೆಚ್ಚಾದಂತೆ ಸ್ವಾಭಿಮಾನದ ಮೊಳಕೆ ಹೊಡೆಯುತ್ತದೆ ಆಗ ಸ್ವಾವಲಂಬಿಗಳಾಗುತ್ತೀರಿ ಇದಕ್ಕೆಲ್ಲ ಡಾಕ್ಟರ್ ಬಿಆರ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಒಂದೇ ಮೂಲ ಮಂತ್ರವಾಗಬೇಕು ಎಂದು ಮನವಿ ಮಾಡಿದರು ಬುಡಕಟ್ಟು ಸಂಸ್ಕೃತಿಯಂತೆ ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಯನ್ನು ಕಂಬಳಿಯ ಮೇಲೆ ಕೂರಿಸಿಸಂಪ್ರದಾಯವಾಗಿ ಸತ್ಕರಿಸಲಾಯಿತು .ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಹಲ್ಲಾದಗೊಂಚಕಾರರು ದೊರೆಗಳು ಮತ್ತು ಪೆದ್ದಗಳುಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *