ಶಿಕ್ಷಕರ ಮೇಲಿನ ನಂಬಿಕೆ ಹುಸಿಗೊಳಿಸ ಬೇಡಿ

ರಾಜಕೀಯ

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ವಿಶಿಷ್ಟವಾದ ಸ್ಥಾನವಿದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು ಅವರು ತುರುವನೂರು ಹೋಬಳಿಯ ಮತಗಟ್ಟೆ ಅಧಿಕಾರಿಗಳಿಗೆ ತುರುವನೂರಿನಲ್ಲಿ ತರಬೇತಿ ನೀಡಿ ಮಾತನಾಡುತ್ತಾ ಈ ಚುನಾವಣೆ ಸತೂತ್ರವಾಗಿ ನಡೆಯಬೇಕೆಂದರೆ ಮತದಾರರ ಪಟ್ಟಿ ಪಾರದರ್ಶಕವಾಗಿ ಮತ್ತು ಪರಿಶುದ್ಧವಾಗಿರಬೇಕು ಈ ಮತದಾರ ಪಟ್ಟಿ ಪರಿಶುದ್ಧವಾದರೆ ಚುನಾವಣಾಪೂರ್ವದ ಶೇಕಡ 75ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಂತಾಗುತ್ತದೆ. ಆದ್ದರಿಂದ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಯಲ್ಲಿ ನಕಲಿ ಮತದಾರರ ಕಡಿವಾಣಕ್ಕೆ ಗರುಡ ಮೊಬೈಲ್ ಆಪ್ ನಲ್ಲಿ ಪ್ರತಿ ಮತದಾರರ ಆಧಾರ್ ಮತ್ತು ಗುರುತಿನ ಚೀಟಿಯ ಜೋಡಣೆ ಕಾರ್ಯ ಇಂದಿನಿಂದ ಆರಂಭವಾಗಿದ್ದು ಇದಕ್ಕೆ ಅಯಾ ಮತಗಟ್ಟೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮತಗಟ್ಟೆ ಅಧಿಕಾರಿಗಳನ್ನು ನಿಯೋಜನೆಗೊಳಿಸಿದ್ದು ಈ ಮತಗಟ್ಟೆ ಅಧಿಕಾರಿಗಳಿಗೆ ಇಂದು ಅಮೂಲಾಗ್ರವಾದಂತಹ ತರಬೇತಿಯನ್ನು ಆಯೋಜಿಸಲಾಗಿದೆ ಎಂದರು.

 

 

ಈ ತರಬೇತಿಯಲ್ಲಿ ನೀಡುವಂತಹ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಒಂದು ಕಾರ್ಯವನ್ನು ಪೂರ್ಣಗೊಳಿಸಬೇಕು. ಶಿಕ್ಷಕರುಗಳ ಮೇಲೆ ಸರ್ಕಾರಕ್ಕೆ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಅಪಾರವಾದ ನಂಬಿಕೆ ಇದೆ ಮತದಾರರ ಪಟ್ಟಿಯನ್ನು ಶಿಕ್ಷಕರು ನಿರ್ವಹಿಸುತ್ತಾರೆ ಎಂಬ ನಂಬಿಕೆಯಿಂದ ಗುರು ತರವಾದ ಜವಾಬ್ದಾರಿಯನ್ನು ನಿಮಗೆ ವಹಿಸಲಾಗಿದೆ ಮಕ್ಕಳ ಪಠ್ಯದ ಕಲಿಕೆಗೆ ತಾವು ಎಷ್ಟು ಗಮನ ನೀಡುತ್ತಿರೋ ಅಷ್ಟೇ ಗಮನವನ್ನು ಈ ಮತದಾರ ಪಟ್ಟಿಯ ಪರಿಷ್ಕರಣೆಯ ಕಾರ್ಯಕ್ಕೆ ಶಿಕ್ಷಕರುಗಳು ನೀಡಬೇಕು ಚುನಾವಣಾ ಕೆಲಸದ ನಿಮಿತ್ತ ತಮಗೆ ಸರ್ಕಾರದಿಂದ ಬರಬೇಕಾಗಿರುವಂತಹ ಎಲ್ಲಾ ಆರ್ಥಿಕ ಮತ್ತು ಸೇವಾ ಭದ್ರತೆಯ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಇದಕ್ಕೆ ಭಾಗಿಯಾಗಿರುವಂತಹ ಎಲ್ಲ ಶಿಕ್ಷಕರಗಳಿಗೆ ಒದಗಿಸಲಾಗುವುದೆಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು ತುರುವನೂರು ಹೋಬಳಿ ಶಿಕ್ಷಕರ ಸಂಘದ ಅಧ್ಯಕ್ಷ ರಂಗೇಶ ಮಾಸ್ಟರ್ ಡ್ರೈನರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಸತೀಶ್ ಕುಮಾರ್ ಚುನಾವಣಾ ಆಶೀರ್ವಾದ ಶಕುಂತಲಾ ಚುನಾವಣಾ ಶಾಖೆಯ ತುರುವನೂರು ರಾಜಸ್ವ ನಿರೀಕ್ಷಕ ಎಂ ಎನ್ ಸ್ವಾಮಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *